ಖಾದಿವಾದ ಪ್ರಚುರಗೊಳಿಸಿದವರು ಹರ್ಡೇಕರ ಮಂಜಪ್ಪ

KannadaprabhaNewsNetwork |  
Published : Feb 19, 2024, 01:30 AM IST
18ಆಲಮಟ್ಟಿ 1:ಆಲಮಟ್ಟಿಯಲ್ಲಿ ಭಾನುವಾರ ಜರುಗಿದ ಮಂಜಪ್ಪ ಹರ್ಡೇಕರ ಅವರ ಭಾವಚಿತ್ರದ ಮೆರವಣಿಗೆಯ ದೃಶ್ಯ | Kannada Prabha

ಸಾರಾಂಶ

ಕರ್ನಾಟಕ ಗಾಂಧಿ ಮಂಜಪ್ಪ ಹರ್ಡೇಕರ, ವಚನಪಿತಾಮಹ ಫ.ಗು. ಹಳಕಟ್ಟಿ, ಬಂಥನಾಳ ಶಿವಯೋಗಿಗಳು ಈ ಮೂವರು ಜಿಲ್ಲೆಯ ಪಾಲಿಗೆ ಶೈಕ್ಷಣಿಕ ಹರಿಕಾರರು ಎಂದು ವಚನ ಪಿತಾಮಹ ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ ಜಿ.ಎಸ್. ಮದಭಾವಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಕರ್ನಾಟಕ ಗಾಂಧಿ ಮಂಜಪ್ಪ ಹರ್ಡೇಕರ, ವಚನಪಿತಾಮಹ ಫ.ಗು. ಹಳಕಟ್ಟಿ, ಬಂಥನಾಳ ಶಿವಯೋಗಿಗಳು ಈ ಮೂವರು ಜಿಲ್ಲೆಯ ಪಾಲಿಗೆ ಶೈಕ್ಷಣಿಕ ಹರಿಕಾರರು ಎಂದು ವಚನ ಪಿತಾಮಹ ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ ಜಿ.ಎಸ್. ಮದಭಾವಿ ಅಭಿಪ್ರಾಯಪಟ್ಟರು.

ಇಲ್ಲಿಯ ಕರ್ನಾಟಕ ಗಾಂಧಿ ಮಂಜಪ್ಪ ಹರ್ಡೇಕರ ಸ್ಮಾರಕದಲ್ಲಿ ಭಾನುವಾರ ಮಂಜಪ್ಪನವರ ಕಂಚಿನ ಪುತ್ಥಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿ, ಯಾವುದೇ ಮಠ ಮಾನ್ಯಗಳನ್ನು ಕಟ್ಟದೇ ಜನರಲ್ಲಿ ಶೈಕ್ಷಣಿಕ ಜಾಗೃತಿ, ವೈಚಾರಿಕ ಪ್ರಜ್ಞೆ, ಖಾದಿ ಬಳಕೆ, ಸ್ವ ಉದ್ಯೋಗ ಹೆಚ್ಚಿಸಲು ನೆರವಾದರು ಎಂದರು.

1923 ರ ಕಾಲಘಟ್ಟದಲ್ಲಿಯೇ ಆಲಮಟ್ಟಿಯಲ್ಲಿ ಕಾಯಕ ತತ್ವದಡಿ ಶಾಲೆ ಸ್ಥಾಪಿಸಿ ಈ ಭಾಗದಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಿಸಿ ನಾನಾ ವಿಧವಾದ ಪತ್ರಿಕೆಯನ್ನು ಆರಂಭಿಸಿ, ಖಾದಿವಾದವನ್ನು ಪ್ರಚುರಗೊಳಿಸಿದವರು ಮಂಜಪ್ಪನವರು ಎಂದರು.

ಮಂಜಪ್ಪನವರ ಹಲವು ಕೃತಿಗಳು, ಅವರ ಮೂಲಕೃತಿಗಳನ್ನು ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿಡಲಾಗಿದೆ ಎಂದರು.

ಮಂಜಪ್ಪ ಹರ್ಡೇಕರ ಸ್ಮಾರಕದ ಕಾರ್ಯದರ್ಶಿ ವಿ.ಎಂ. ಪಟ್ಟಣಶೆಟ್ಟಿ ಮಾತನಾಡಿ, ಈ ಬಾರಿ ಮಂಜಪ್ಪ ಹರ್ಡೇಕರ ಅವರು ಜನಿಸಿದ ಬನವಾಸಿಯಲ್ಲಿಯೂ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ಪ್ರತಿಭಾ ಪುರಸ್ಕಾರ:

ಮಂಜಪ್ಪ ಹರ್ಡೇಕರ ಅವರ ಮೊಮ್ಮಗ ನೀಡಿದ ಹಣದಲ್ಲಿ ಕಳೆದ ವರ್ಷ ನಾನಾ ಪರೀಕ್ಷೆ ಯಲ್ಲಿ ಸಾಧನೆಗೈದ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಮೆರವಣಿಗೆ:

ಕಾರ್ಯಕ್ರಮಕ್ಕೂ ಮೊದಲು ಮಂಜಪ್ಪನವರ ಭಾವಚಿತ್ರದ ಮೆರವಣಿಗೆ ರಾಮಲಿಂಗೇಶ್ವರ ದೇವಸ್ಥಾನದಿಂದ ಸ್ಮಾರಕದವರೆಗೆ ಜರುಗಿತು. ಕೀಲುಗೊಂಬೆಯಾಟ, ಡೊಳ್ಳುಗಳ ನಿನಾದ, ವಿದ್ಯಾರ್ಥಿಗಳ ಡ್ರಮ್‌ಸೆಟ್ ವಾದನ ಗಮನಸೆಳೆಯಿತು. ಕಾರ್ಯಕ್ರಮದಲ್ಲಿ ಜಿ.ಎಂ. ಕೊಟ್ಯಾಳ, ಎಸ್. ಐ. ಗಿಡ್ಡಪ್ಪಗೋಳ, ಗಂಗಾಧರ ಹಿರೇಮಠ, ಎಂ.ಎಚ್. ಬಳಬಟ್ಟಿ, ಮಹೇಶ ಗಾಳಪ್ಪಗೋಳ, ಜಗದೇವಿ ಕೆ,ಸಿದ್ದಮ್ಮ ಅಂಗಡಿ, ರಿಯಾನಾ ಕಾಲೇಖಾನ, ಎಸ್.ಐ. ಹರಣಶಿಕಾರಿ, ಬಿ.ಎಚ್. ಗುಣದಾಳ, ನೀಲಾಂಬಿಕಾ ಪಾಟೀಲ, ಸಂಗಮೇಶ ಚೆನ್ನಗಾವಿ, ಮುತ್ತು ಕಿರಸೂರ, ಅಶೋಕ ಲಮಾಣಿ, ಅಯ್ಯಪ್ಪಗೌಡ ಪಾಟೀಲ, ವಸಂತ ಬಡಿಗೇರ, ಸಂತೋಷ ಗಾಣಿಗೇರ, ಮಹ್ಮದ್ ಯೂಸೂಫ್, ಡಾ ಲೀಲಾ ಹೂಗಾರ, ನೀಲಮ್ಮ ಸೂರ್ಯವಂಶಿ, ದಾನಮ್ಮ ಚಿನಿವಾಲ, ಡಾ ಸವಿತಾ ಪಾಟೀಲ, ದೇವರಾಜ, ಕಲ್ಪನಾ ಹಿರೇಮಠ ಸೇರಿದಂತೆ ಹಳೇ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ