ಗದಗ: ಬೆಟಗೇರಿಯ ಉಸಗಿಕಟ್ಟಿ ಓಣಿಯ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವೀರರಾಣಿ ಕಿತ್ತೂರು ಚೆನ್ನಮ್ಮ 201ನೇ ವಿಜಯೋತ್ಸವ ಹಾಗೂ 247ನೇ ಜಯಂತ್ಯುತ್ಸವ ಕಾರ್ಯಕ್ರಮ ಜರುಗಿತು. ಈ ವೇಳೆ ಅಜ್ಜನಗೌಡ ಹಿರೇಮನಿಪಾಟೀಲ ಮಾತನಾಡಿ, ವೀರರಾಣಿ ಕಿತ್ತೂರು ಚೆನ್ನಮ್ಮಾಜಿ ಭಾರತದ ಇತಿಹಾಸದಲ್ಲಿಯೇ ಸ್ವಾತಂತ್ರ್ಯ ಹೋರಾಟದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾಗಿರುವ ಕರ್ನಾಟಕದ ಹೆಮ್ಮೆಯ ರಾಣಿ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಧೈರ್ಯ, ಸಾಹಸ ಮತ್ತು ದೇಶಭಕ್ತಿ ನಮಗೆಲ್ಲ ಆದರ್ಶವಾಗಿದೆ ಎಂದರು. ಅಂದಪ್ಪ ಮುಳ್ಳಾಳ ಹಾಗೂ ಆನಂದ ಹೊಸಮನಿ ಮಾತನಾಡಿದರು. ಈ ವೇಳೆ ಡಾ. ಈರಣ್ಣ ಮಾನೇದ, ಅಜ್ಜನಗೌಡ ಹಿರೇಮನಿಪಾಟೀಲ, ಬಸವರಾಜ ಕುಂದಗೋಳ, ನೀಲಪ್ಪ ಪಲ್ಲೇದ, ಪರಮೇಶ್ವರಗೌಡ ಮಲ್ಲನಗೌಡ್ರ, ಮುದಕಪ್ಪ ಪಲ್ಲೇದ, ಬಸಪ್ಪ ಫಿರಂಗಿ, ನಾಗಪ್ಪ ಉಪಸಣ್ಣವರ, ಬಸಪ್ಪ ಬಂಡಿ, ಮಹಾದೇವಪ್ಪ ಪಲ್ಲೇದ, ಚನ್ನಪ್ಪ ಗುಡದೂರ, ದೇವಿಧರ ಬನ್ನಿಕೊಪ್ಪ, ಶಂಕ್ರಪ್ಪ ಮಾಳಶೆಟ್ಟಿ, ಎನ್.ಎಲ್. ಮೆಣಸಗಿ, ಶಿವಾನಂದ ಮಾನೇದ, ಅಂದಪ್ಪ ಮುಳ್ಳಾಳ, ಬಸವರಾಜ ಪಲ್ಲೇದ, ರವಿರಾಜ ಮಾನೇದ, ಕಳಕಪ್ಪ ಮಾನೇದ, ಈರಣ್ಣ ಬೂದಿಹಾಳ, ಕಲ್ಯಾಣಪ್ಪ ಹೋಳಿ, ಮಂಜುನಾಥ ಮಾನೇದ, ಮಲ್ಲಪ್ಪ ಪಲ್ಲೇದ, ಶಿವಣ್ಣ ನಾಗರಾಳ, ಅಶೋಕ ಕೊಂಡಿಕೊಪ್ಪ, ಆನಂದ ಹೊಸಮನಿ ಸೇರಿದಂತೆ ಇತರರು ಇದ್ದರು. ಡಾ. ಈರಣ್ಣ ಮಾನೇದ ನಿರೂಪಿಸಿದರು. ಶಿವಣ್ಣ ನಾಗರಾಳ ವಂದಿಸಿದರು.
ರಾಣಿ ಚೆನ್ನಮ್ಮ ಸ್ವಾಭಿಮಾನದ ಸಂಕೇತಮುಳಗುಂದ: ಬ್ರಿಟಿಷರ ವಿರುದ್ಧ ಸಮರ ಸಾರಿದ ಕಿತ್ತೂರು ರಾಣಿ ಚೆನ್ನಮ್ಮ ನಾಡಿನ ಸ್ವಾಭಿಮಾನದ ಸಂಕೇತ ಎಂದು ಪಪಂ ಸದಸ್ಯ ಕೆ.ಎಲ್. ಕರಿಗೌಡರ ತಿಳಿಸಿದರು.ಸ್ಥಳೀಯ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ದೇಶದಿಂದ ಬ್ರಿಟಿಷರನ್ನು ಓಡಿಸಬೇಕು ಎಂದು ಪಣ ತೊಟ್ಟು ಹೋರಾಡಿದ ಚೆನ್ನಮ್ಮನ ಕೆಚ್ಚದೆಯ ಹೋರಾಟ, ಧೈರ್ಯ, ಸಾಹಸವನ್ನು ಯುವ ಜನರು ಅರಿತುಕೊಳ್ಳಬೇಕು ಎಂದರು.
ಈ ವೇಳೆ ಪಪಂ ಅಧ್ಯಕ್ಷೆ ಯಲ್ಲವ್ವ ಕವಲೂರ, ಮುಖಂಡರಾದ ಬಿ.ವಿ. ಸುಂಕಾಪೂರ, ರಾಮಣ್ಣಾ ಕಮಾಜಿ, ಎ.ಡಿ. ಮುಜಾವರ, ಪಪಂ ಸದಸ್ಯರಾದ ವಿಜಯ ನೀಲಗುಂದ, ನಾಗರಾಜ ದೇಶಪಾಂಡೆ, ಬಸವರಾಜ ಹಾರೋಗೇರಿ, ಅನೂಪ ಕೆಂಚನಗೌಡರ, ಶರಣಪ್ಪ ಕಮಾಜಿ, ಮಹಾಂತೇಶ ಕಣವಿ, ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ ಸೇರಿದಂತೆ ಸಮಾಜ ಬಾಂಧವರು, ಪಪಂ ಸಿಬ್ಬಂದಿ ಇದ್ದರು.