ಕೋಟ: ಮಳೆಗಾಲದ ಹಾಡುಕತೆಗಳು - ವಿಶಿಷ್ಟ ಕಾರ್ಯಕ್ರಮ

KannadaprabhaNewsNetwork |  
Published : Jul 09, 2024, 12:45 AM IST
ಮಳೆ8 | Kannada Prabha

ಸಾರಾಂಶ

ಗಾಯಕಿ ಭಾಗ್ಯೇಶ್ವರಿ ಮಯ್ಯ ಮತ್ತು ವಿಧಾತ್ರಿ ಮಯ್ಯ ಅವರಿಂದ ಮಳೆಯ ಕುರಿತ ಹಾಡುಗಳ ಗಾಯನ ನಡೆಯಿತು. ಅವರು ದ.ರಾ. ಬೇಂದ್ರೆ, ಎಚ್.ಎಸ್. ವೆಂಕಟೇಶ ಮೂರ್ತಿ, ಕುವೆಂಪು ಅವರ ಗೀತೆಗಳನ್ನು ಪ್ರಸ್ತುತ ಪಡಿಸಿದರು.

ಕನ್ನಡಪ್ರಭ ವಾರ್ತೆ ಕೋಟ

ಇಲ್ಲಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಡಾ. ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ‘ಮಳೆಗಾಲದ ಹಾಡು ಕತೆಗಳು’ ಕಾರ್ಯಕ್ರಮ ನಡೆಯಿತು.

ಗಾಯಕಿ ಭಾಗ್ಯೇಶ್ವರಿ ಮಯ್ಯ ಮತ್ತು ವಿಧಾತ್ರಿ ಮಯ್ಯ ಅವರಿಂದ ಮಳೆಯ ಕುರಿತ ಹಾಡುಗಳ ಗಾಯನ ನಡೆಯಿತು. ಅವರು ದ.ರಾ. ಬೇಂದ್ರೆ, ಎಚ್.ಎಸ್. ವೆಂಕಟೇಶ ಮೂರ್ತಿ, ಕುವೆಂಪು ಅವರ ಗೀತೆಗಳನ್ನು ಪ್ರಸ್ತುತ ಪಡಿಸಿದರು.

ಶ್ರೀನಿವಾಸ ಅಡಿಗ ತೆಕ್ಕಟ್ಟೆ, ನರೇಂದ್ರ ಕುಮಾರ್ ಕೋಟ, ಕುಚ್ಚೂರು ಲಕ್ಷೀ ಜಿ. ಭಟ್, ಸುಮನ ಹೇರ್ಳೆ, ನೀಲಾವರ ಸುರೇಂದ್ರ ಅಡಿಗ, ಉಪೇಂದ್ರ ಸೋಮಯಾಜಿ, ವಾಣಿಶ್ರೀ ಅಡಿಗ, ಸವಿತಾ ಶಾಸ್ರೀ ಮೊದಲಾದವರು ಮಳೆಯ ಕುರಿತಯ ತಾವು ಬರೆದ ಕಥೆ, ಕವನ, ಹಾಡು ಹಾಗೂ ಅನುಭವಗಳನ್ನು ಹಂಚಿಕೊಂಡರು.

ಡಾ. ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವಿದ್ಯಾರ್ಥಿ ಪ್ರತಿನಿಧಿಗಳಾದ ಅವನೀಶ ಐತಾಳ ಪಿ., ಅಂಶು ಡಿ., ಭೂಮಿಕಾ, ಶರ್ಮಿಳಾ, ಮಾನಸ, ಶ್ರೇಯಾ, ಭೂಮಿ, ಶ್ರೀಶಾಂತ ತಮ್ಮ ಸ್ವರಚಿತ ಕವನ ವಾಚಿಸಿದರು.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಸಮನ್ವಯದ ಮಾತನಾಡಿದರು. ಡಾ. ಉಮೇಶ್ ಭಟ್, ನರಸಿಂಹ ಮೂರ್ತಿ ರಾವ್, ಜನಾರ್ದನ ಕೊಡವೂರು, ಪೂರ್ಣಿಮಾ ಜನಾರ್ದನ, ಮನೋಹರ ಪಿ., ಕಮಲ ಮಯ್ಯ, ಶ್ರೀದೇವಿ ಹಂದೆ, ವಿಜಯಲಕ್ಷ್ಮಿ, ಸತೀಶ್ ವಡ್ಡರ್ಸೆ ಉಪಸ್ಥಿತರಿದ್ದರು.

ವಿಧಾತ್ರಿ, ಭಾಗ್ಯೇಶ್ವರಿ ಮಯ್ಯ ಪಾರ್ಥನೆ ಮಾಡಿದರು. ಉಪೇಂದ್ರ ಸೋಮಯಾಜಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಮಹಾಲಕ್ಷ್ಮಿ ಸೋಮಯಾಜಿ ವಂದಿಸಿದರು. ಮಾನಸ ನಿರೂಪಿಸಿದರು.

ಇದೇ ಸಂದರ್ಭ ಪಾರಂಪಳ್ಳಿಯಲ್ಲಿ ಇತ್ತೀಚಿಗೆ ಪಾರಂಪಳ್ಳಿ ನರಸಿಂಹ ಐತಾಳರ ಸರ್ವಾಧ್ಯಕ್ಷತೆಯಲ್ಲಿ ನಡೆದ ಬ್ರಹ್ಮಾವರ ತಾಲೂಕು ಸಾಹಿತ್ಯ ಸಮ್ಮೇಳನದ ಯಶಸ್ವಿಗಾಗಿ ತಾಲೂಕು ಕಸಾಪ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳರನ್ನು ಗೌರವಿಸಲಾಯಿತು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?