ಕುದ್ರೋಳಿ 60 ಲಕ್ಷ ರು. ವಿದ್ಯಾರ್ಥಿ ವೇತನ ವಿತರಣೆ

KannadaprabhaNewsNetwork |  
Published : Nov 04, 2025, 04:00 AM IST
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ | Kannada Prabha

ಸಾರಾಂಶ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಕೊರಗಪ್ಪ ಮೆಮೋರಿಯಲ್ ಸಭಾಂಗಣದಲ್ಲಿ ಭಾನುವಾರ ಸುಮಾರು 60 ವಿದ್ಯಾರ್ಥಿಗಳಿಗೆ 60 ಲಕ್ಷ ರು. ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಕೊರಗಪ್ಪ ಮೆಮೋರಿಯಲ್ ಸಭಾಂಗಣದಲ್ಲಿ ಭಾನುವಾರ ಸುಮಾರು 60 ವಿದ್ಯಾರ್ಥಿಗಳಿಗೆ 60 ಲಕ್ಷ ರು. ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಮಂಗಳೂರು ನೇತೃತ್ವದಲ್ಲಿ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ, ಒಮಾನ್ ಬಿಲ್ಲವಾಸ್ ಮಸ್ಕತ್, ಬಿಲ್ಲವ ಸಂಘ ಕುವೈತ್, ಶ್ರೀ ಮೂಲ್ಕಿ ಎಲ್ಲಪ್ಪ ಸುವರ್ಣ ಮತ್ತು ಲೀಲಾವತಿ ವೈ.ಸುವರ್ಣ ಫೌಂಡೇಶನ್, ಶ್ರೀ ಕೊರಗಪ್ಪ ಸೋಮಶೇಖರ ಸ್ಕಾಲರ್‌ಶಿಪ್ ಫಂಡ್, ಗುರು ಬೆಳದಿಂಗಳು ಕುದ್ರೋಳಿ ಇವರ ಸಹಭಾಗಿತ್ವದಲ್ಲಿ ವಿದ್ಯಾರ್ಥಿ ವೇತನ ವಿತರಿಸಲಾಯಿತು.ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್.ಸೋಮಸುಂದರಂ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಗುರು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಸೀತಾರಾಮ ಎಚ್. ಅಧ್ಯಕ್ಷತೆ ವಹಿಸಿದ್ದರು. ಗುರುಬೆಳದಿಂಗಳು ಸಂಸ್ಥೆಯ ಅಧ್ಯಕ್ಷ ಪದ್ಮರಾಜ್ ಆರ್., ಒಮಾನ್ ಬಿಲ್ಲವಾಸ್ ಮಸ್ಕತ್‌ನ ಅಧ್ಯಕ್ಷ ಉಮೇಶ್ ಬಂಟ್ವಾಳ, ಶ್ರೀ ಗೋಕರ್ಣನಾಥ ಕ್ಷೇತ್ರದ ಟ್ರಸ್ಟಿ ಕೃತೀನ್ ಡಿ. ಅಮೀನ್, ಒಮಾನ್ ಬಿಲ್ಲವಾಸ್‌ನ ಮಾಜಿ ಅಧ್ಯಕ್ಷ ಎಸ್.ಕೆ.ಪೂಜಾರಿ, ಸ್ಥಾಪಕ ಸದಸ್ಯ ಅಶೋಕ ಎಸ್.ಸುವರ್ಣ, ಮೂಲ್ಕಿ ಎಲ್ಲಪ್ಪ ಸುವರ್ಣ ಮತ್ತು ಲೀಲಾವತಿ ವೈ ಸುವರ್ಣ ಫೌಂಡೇಶನ್‌ನ ಶೈಲೇಂದ್ರ ವೈ. ಸುವರ್ಣ, ಭಗವಾನ್ ದಾಸ್ ಬಿಲ್ಲವ, ಕ್ಷಿಮಿತಾ ಭಗವಾನ್ ದಾಸ್ ಬಿಲ್ಲವ, ಕುವೈಟ್ ಬಿಲ್ಲವ ಸಂಘಟನೆಯ ಹೇಮಂತ್ ಮೊದಲಾದವರು ಉಪಸ್ಥಿತರಿದ್ದರು.ಪವರ್‌ಲಿಫ್ಟಿಂಗ್‌ನಲ್ಲಿ ಸಾಧನೆ ಮಾಡಿದ ಸಿದ್ದಾರ್ಥ ಸುವರ್ಣ ಕಡಂಬೋಡಿ ಹಾಗೂ ವೈದ್ಯಕೀಯ ಕ್ಷೇತ್ರದ ಸಾಧನೆಗೆ ಡಾ.ಪ್ರತೀಕ್ಷಾ ಡಿ. ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಸತೀಶ್ ಕೋಟ್ಯಾನ್ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಟ್ರಸ್ಟಿ ಚಂದ್ರಶೇಖರ ನಾನಿಲ್ ಸ್ವಾಗತಿಸಿದರು. ಹರೀಂದ್ರ ಸುವರ್ಣ ವಂದಿಸಿದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ