8ರಂದು ಕುಂಭಶ್ರೀ ಆಂಗ್ಲಮಾಧ್ಯಮ ವಸತಿಶಾಲೆ, ಕಾಲೇಜು ವಾರ್ಷಿಕೋತ್ಸವ

KannadaprabhaNewsNetwork |  
Published : Dec 05, 2024, 12:34 AM IST
ಪ.ಗೋ | Kannada Prabha

ಸಾರಾಂಶ

ಕುಂಭಶ್ರೀ ಸಂಸ್ಥೆಯ ಶಿಕ್ಷಣ ಪದ್ದತಿಯನ್ನು ಆಧರಿಸಿ ಹಲವು ರಾಜ್ಯ, ರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ರಾಷ್ಟ್ರೀಯ ವಿದ್ಯಾ ಗೌರವ್ ರಾಷ್ಟ್ರೀಯ ಪ್ರಶಸ್ತಿ, ಸ್ಟಾರ್ ಆಫ್ ಏಷ್ಯಾ ರಾಷ್ಟ್ರೀಯ ಪ್ರಶಸ್ತಿ, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಪ್ರಬುದ್ಧ ಭಾರತ್ ರಾಜ್ಯ ಪ್ರಶಸ್ತಿ, ವಿದ್ಯಾರತ್ನ ರಾಜ್ಯ ಪ್ರಶಸ್ತಿ, ಶಾರದಾ ಸೇವಾ ಪ್ರಶಸ್ತಿ ವೇಣೂರು ಹಾಗೂ ರಾಜ್ಯಮಟ್ಟದ ಶಿಕ್ಷಣ ಭೀಷ್ಮ ರಾಜ್ಯ ಪ್ರಶಸ್ತಿ ಸೇರಿದಂತೆ ನೂರಾರು ಕಡೆಗಳಲ್ಲಿ ಸನ್ಮಾನಗಳನ್ನು ಮುಡಿಗೇರಿಸಿಕೊಂಡಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ತಾಲೂಕಿನ ವೇಣೂರು ಸನಿಹದ ನಿಟ್ಟಡೆ ಕುಂಭಶ್ರೀ ಆಂಗ್ಲಮಾಧ್ಯಮ ವಸತಿಶಾಲೆ/ಕಾಲೇಜಿನಲ್ಲಿ ಡಿ. 8 ರಂದು ನಮ್ಮೂರ ಜಾತ್ರೆ ಕುಂಭಶ್ರೀ ವೈಭವ ಎಂಬ ಶೀರ್ಷಿಕೆಯಡಿ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಮತ್ತು ಮಾತಾ-ಪಿತಾ-ಗುರುದೇವೋಭವ ಹೃದಯಸ್ಪರ್ಶಿ ಕಾರ್ಯಕ್ರಮ ಜರುಗಲಿದೆ ಎಂದು ಕುಂಭಶ್ರೀ ವಿದ್ಯಾಸಂಸ್ಥೆಯ ಸಂಚಾಲಕ ಅಶ್ವಿತ್ ಕುಲಾಲ್ ಹೇಳಿದರು. 1996 ರಲ್ಲಿ ಆರಂಭಗೊಂಡ ಸಂಸ್ಥೆಯು ಗುರುಕುಲ ಮಾದರಿಯಲ್ಲಿ ವಿದ್ಯಾರ್ಜನೆಯನ್ನು ಧಾರೆಯೆರೆಯುತ್ತಾ ಸಾವಿರಾರು ಮಕ್ಕಳ ಶಿಕ್ಷಣದಾಹವನ್ನು ನೀಗಿಸುತ್ತಾ ಬಂದಿದೆ. ಪ್ರೀಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ತರಗತಿಗಳಿದ್ದು, ಮೂರನೇ ತರಗತಿಯಿಂದ ಮೇಲ್ಪಟ್ಟ ಮಕ್ಕಳಿಗೆ ಸುಸಜ್ಜಿತ ಹಾಸ್ಟೆಲ್ ಸೌಲಭ್ಯವನ್ನು ಕಲ್ಪಿಸಿದೆ. ಎಸ್‌ಎಸ್‌ಎಲ್‌ಸಿಯಲ್ಲಿ 11ನೇ ಬಾರಿಗೆ ಶೇ. 100 ಫಲಿತಾಂಶ ದಾಖಲಿಸಿಕೊಂಡಿರುವ ಸಂಸ್ಥೆಯು ಪಿಯುಸಿಯಲ್ಲೂ ಕಳೆದ ಮೂರು ವರುಷಗಳಿಂದ ಶೇ. 100 ಫಲಿತಾಂಶವನ್ನು ದಾಖಲಿಸಿಕೊಂಡಿದೆ. ಕುಂಭಶ್ರೀ ಸಂಸ್ಥೆಯ ಶಿಕ್ಷಣ ಪದ್ದತಿಯನ್ನು ಆಧರಿಸಿ ಹಲವು ರಾಜ್ಯ, ರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ರಾಷ್ಟ್ರೀಯ ವಿದ್ಯಾ ಗೌರವ್ ರಾಷ್ಟ್ರೀಯ ಪ್ರಶಸ್ತಿ, ಸ್ಟಾರ್ ಆಫ್ ಏಷ್ಯಾ ರಾಷ್ಟ್ರೀಯ ಪ್ರಶಸ್ತಿ, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಪ್ರಬುದ್ಧ ಭಾರತ್ ರಾಜ್ಯ ಪ್ರಶಸ್ತಿ, ವಿದ್ಯಾರತ್ನ ರಾಜ್ಯ ಪ್ರಶಸ್ತಿ, ಶಾರದಾ ಸೇವಾ ಪ್ರಶಸ್ತಿ ವೇಣೂರು ಹಾಗೂ ರಾಜ್ಯಮಟ್ಟದ ಶಿಕ್ಷಣ ಭೀಷ್ಮ ರಾಜ್ಯ ಪ್ರಶಸ್ತಿ ಸೇರಿದಂತೆ ನೂರಾರು ಕಡೆಗಳಲ್ಲಿ ಸನ್ಮಾನಗಳನ್ನು ಮುಡಿಗೇರಿಸಿಕೊಂಡಿದೆ ಎಂದರು.

ಪ್ರತೀ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಏರ್ಪಡಿಸುವುದು ಸಾಮಾನ್ಯ. ಆದರೆ ವೇಣೂರು ಕುಂಭಶ್ರೀ ವಿದ್ಯಾಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು ವಿಶೇಷ ರೀತಿಯಲ್ಲಿ ಬೀಳ್ಕೊಡುತ್ತಿರುವುದು ವಾಡಿಕೆ. ಮಾತಾ-ಪಿತಾ-ಗುರುದೇವೋಭವ ಎಂಬ ಭಾವನಾತ್ಮಕ ಕಾರ್ಯಕ್ರಮ ಏರ್ಪಡಿಸಿ ಮಕ್ಕಳಿಂದಲೇ ಪೋಷಕರಿಗೆ ಭಾವನಾತ್ಮಕ ಹೃದಯಸ್ಪರ್ಶಿ ಪೂಜ್ಯಭಾವವನ್ನು ಮತ್ತಷ್ಟು ಗಟ್ಟಿಗೊಳಿಸುವ ಕಾರ್ಯ ಪ್ರತೀ ವರ್ಷವೂ ವಿಶೇಷ ಎಂಬಂತೆ ನಡೆಯುತ್ತಾ ಬಂದಿದೆ. ಈ ಬಾರಿಯೂ ಸುಮಾರು ನಾಲ್ಕುವರೇ ಸಾವಿರ ಮಂದಿ ಜನ ಸೇರುವ ನಿರೀಕ್ಷೆ ಇದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮವನ್ನು ಶಾಸಕ ಹರೀಶ ಪೂಂಜ ಉದ್ಘಾಟಿಸಲಿದ್ದಾರೆ. ಸಂಸದ ಬ್ರಿಜೇಶ್ ಚೌಟ, ಸಭಾಪತಿ ಯು.ಟಿ.ಖಾದರ್, ಗ್ರಾ.ಪಂ. ಅಧ್ಯಕ್ಷೆ ಅನಿತಾ ಉಪಸ್ಥಿತರಿರಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಗಿರೀಶ್ ಕೆ. ಎಚ್. ವಹಿಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ, ಪ್ರಾಚಾರ್ಯ ಓಮನಾ, ಪದ್ಮನಾಭ ಕುಲಾಲ್ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ