ಕುಂದಾಪುರ: ಶ್ರೀ ವೆಂಕಟರಮಣ ಕಾಲೇಜಲ್ಲಿ ವ್ಯವಹಾರ ದಿನಾಚರಣೆ

KannadaprabhaNewsNetwork |  
Published : Dec 08, 2024, 01:15 AM IST
ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ವ್ಯವಹಾರ ದಿನವನ್ನು ಉದ್ಘಾಟಿಸಿದರು. | Kannada Prabha

ಸಾರಾಂಶ

ಕುಂದಾಪುರ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ವ್ಯವಹಾರ ದಿನ ನಡೆಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಎರಡು ವರ್ಷ ಅಧ್ಯಯನ ನಡೆಸಿ ಉತ್ಪಾದಿಸಿದ ನನ್ನ ಅರೇಕಾ ಟೀಗೆ ಆರಂಭದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಆದರೆ ಈಗ ಅದೇ ಪ್ರಾಡಕ್ಟ್‌ಗೆ 6 ರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ. ಯಾವುದೇ ಉದ್ಯಮ ಆರಂಭಿಸುವಾಗ ಟೀಕೆಗಳು ಬರುವುದು ಸಹಜ. ಆ ಟೀಕೆಗಳ‌ ಬಗ್ಗೆ ನಾವು ತಲೆಕೆಡಿಸಿಕೊಳ್ಳಬಾರದು. ಹಾಗಾದಲ್ಲಿ ಮಾತ್ರ ನಾವು ಉದ್ಯಮದಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದು ಅರೇಕಾ ಟೀ ಸಂಸ್ಥಾಪಕ, ಸಿಇಒ ನಿವೇದನ್ ನೆಂಪೆ ಹೇಳಿದರು.ಅವರು ಶನಿವಾರ ಇಲ್ಲಿನ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ವ್ಯವಹಾರ ದಿನವನ್ನು ಉದ್ಘಾಟಿಸಿ ಮಾತನಾಡಿದರು.ಉದ್ಯಮದಲ್ಲಿ ಯಶಸ್ಸು ಸಿಕ್ಕಾಗ ಜನರು ನಮ್ಮ ಗೆಲುವನ್ನು ಹೊಗಳುತ್ತಾರೆ. ನಷ್ಟಗಳಾದಾಗ ತೆಗಳುತ್ತಾರೆ. ಯಾವುದೇ ಉದ್ಯಮ ಆರಂಭಿಸುವ ಮುನ್ನ ನಮ್ಮ ಯೋಚನೆ ಹಾಗೂ ನಮ್ಮಲ್ಲಿರುವ ಆತ್ಮವಿಶ್ವಾಸ ಬಹಳ ಮುಖ್ಯ ಎಂದರು.

ಶ್ರೀ ವೆಂಕಟರಮಣ ದೇವ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಕೆ. ರಾಮಕೃಷ್ಣ ಕಾಮತ್ ಅಧ್ಯಕ್ಷತೆ ವಹಿಸಿದ್ದರು.

ಉದ್ಯಮಿಗಳಾದ ಬಿ.ಎಸ್. ಸುರೇಶ್ ಶೆಟ್ಟಿ ಉಪ್ಪುಂದ, ದಿನೇಶ್ ಹೆಗ್ಡೆ ಮೊಳಹಳ್ಳಿ, ಟ್ರಸ್ಟ್‌ನ ಕಾರ್‍ಯದರ್ಶಿ ಕೆ. ರಾಧಾಕೃಷ್ಣ ಶೆಣೈ, ಖಜಾಂಚಿ ಕೆ. ಲಕ್ಷ್ಮೀನಾರಾಯಣ ಶೆಣೈ, ಸದಸ್ಯ ರತ್ನಾಕರ ಶೆಣೈ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೃಷ್ಣ ಅಡಿಗ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೇಷ್ಮಾ ಡಿಸೋಜ, ಕಿ.ಪ್ರಾ. ಶಾಲಾ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬೆಂಕಿಮಣಿ ಸಂತು (ಅಶಕ್ತರಿಗೆ ನೆರವು), ರಾಘವೇಂದ್ರ ನೆಂಪು(ರಕ್ತದಾನ), ಮಂಜುನಾಥ ನಾಯ್ಕ ಕನ್ನೇರಿ (ಮುಳುಗು ತಜ್ಞರು), ಶಂಕರ ಪೂಜಾರಿ ಅಂಪಾರು(ಉರಗ ರಕ್ಷಕರು), ಗಣೇಶ ಕಂಬದಕೋಣೆ (ಸ್ವಚ್ಛತಾ ಸೇವೆ) ಅವರನ್ನು ಸನ್ಮಾನಿಸಲಾಯಿತು.

ಶ್ರೀ ವೆಂಕಟರಮಣ ಪ.ಪೂ. ಕಾಲೇಜಿನ ಪ್ರಾಂಶುಪಾಲ ಸಂದೀಪ್ ಗಾಣಿಗ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಶಿವರಾಜ್ ಸಿ. ಪ್ರಸ್ತಾವಿಸಿದರು. ಉಪನ್ಯಾಸಕರಾದ ಅಮೃತಾ, ಮಂಜುನಾಥ್ ನಿರೂಪಿಸಿದರು. ಸುಶಾಂತ್ ನಾಯ್ಕ್ ವಂದಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ