ಕ್ರಿಕೆಟ್‌ ಹಬ್ಬ: ಕುಂದಾಪುರ ತಂಡ ಪ್ರಥಮ ಸ್ಥಾನ

KannadaprabhaNewsNetwork |  
Published : Dec 03, 2024, 12:31 AM IST
ಕ್ಯಾಪ್ಷನ2ಕೆಡಿವಿಜಿ40 ದಾವಣಗೆರೆಯಲ್ಲಿ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪನವರ ಸವಿನೆನಪಿನ ಅಂಗವಾಗಿ ನಡೆದ ಕ್ರಿಕೆಟ್ ಹಬ್ಬದಲ್ಲಿ ಆಟಗಾರರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಶುಭ ಹಾರೈಸಿದರು. .....ಕ್ಯಾಪ್ಷನ 2ಕೆಡಿವಿಜಿ41ದಾವಣಗೆರೆಯಲ್ಲಿ ನಡೆದ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪನವರ ಸವಿನೆನಪಿನ ಕ್ರಿಕೆಟ್ ಹಬ್ಬದಲ್ಲಿ ಗೆಲುವು ಸಾಧಿಸಿದ ಕುಂದಾಪುರದ ಜಾನ್ಸನ್ ನಿಕ್ಷಿತ್ ತಂಡ. | Kannada Prabha

ಸಾರಾಂಶ

ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸವಿನೆನಪಿನ ಅಂಗವಾಗಿ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕ್ರಿಕೆಟ್ ಹಬ್ಬಕ್ಕೆ ಸೋಮವಾರ ಬೆಳಗಿನ ಜಾವ 5 ಗಂಟೆಗೆ ತೆರೆಬಿದ್ದಿತ್ತು.

- ಬೆಂಗಳೂರು ತಂಡ ರನ್ನರ್‌ ಆಫ್ । ಕ್ರಿಕೆಟ್ ಹಬ್ಬಕ್ಕೆ ತೆರೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸವಿನೆನಪಿನ ಅಂಗವಾಗಿ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕ್ರಿಕೆಟ್ ಹಬ್ಬಕ್ಕೆ ಸೋಮವಾರ ಬೆಳಗಿನ ಜಾವ 5 ಗಂಟೆಗೆ ತೆರೆಬಿದ್ದಿತ್ತು.

ಬೆಳಗಿನ ಜಾವ 4 ಗಂಟೆಗೆ ಬೆಂಗಳೂರು ಪ್ರಕೃತಿ ನ್ಯಾಶ್ ಮತ್ತು ಕುಂದಾಪುರದ ಜಾನ್ಸನ್ ನಿಕ್ಷಿತ್ ತಂಡದ ಮಧ್ಯ ನಡೆದ ಪಂದ್ಯದಲ್ಲಿ ಕುಂದಾಪುರದ ಜಾನ್ಸನ್ ನಿಕ್ಷಿತ್ ತಂಡ ಗೆಲುವು ಸಾಧಿಸುವ ಮೂಲಕ ₹5,00,555 ನಗದು ಮತ್ತು ಆಕರ್ಷಕ ಟ್ರೋಫಿ ಪಡೆಯಿತು. ಕುಂದಾಪುರದ ಜಾನ್ಸನ್ ನಿಕ್ಷಿತ್ ವಿರುದ್ಧ ಸೋಲು ಅನುಭವಿಸಿದ ಬೆಂಗಳೂರು ಪ್ರಕೃತಿ ನ್ಯಾಶ್ ತಂಡವು ₹3,00,555 ನಗದು ಹಾಗೂ ಆಕರ್ಷಕ ಟ್ರೋಫಿ ಪಡೆಯಿತು.

ಟಾಸ್ ಗೆದ್ದು ಫಿಲ್ಡಿಂಗ್‌ಗೆ ಇಳಿದ ಬೆಂಗಳೂರು ಪ್ರಕೃತಿ ನ್ಯಾಶ್ ತಂಡವು ಕುಂದಾಪುರದ ಜಾನ್ಸನ್ ನಿಕ್ಷಿತ್ ತಂಡವನ್ನು 4 ವಿಕೆಟ್ ಪಡೆದು 63 ರನ್‌ಗೆ ಕಟ್ಟಿ ಹಾಕಿತು. ಗುರಿ ಬೆನ್ನಟ್ಟಿದ ಬೆಂಗಳೂರು ಪ್ರಕೃತಿ ನ್ಯಾಶ್ ತಂಡ ಆಟಗಾರರು ಆರಂಭದಲ್ಲಿ ಉತ್ತಮ ಆಟಗಾರರ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಕೇವಲ 45 ರನ್‌ ಮಾತ್ರ ಗಳಿಸಿ ರನ್ನರ್‌ ಅಪ್ ಗೌರವಕ್ಕೆ ತೃಪ್ತಿಪಡಬೇಕಾಯಿತು.

ಸೆಮಿಫೈನಲ್ ತಲುಪಿದ್ದ ನಂಜನಗೂಡು ಇಲೆವೆನ್ಸ್ ಮತ್ತು ಉಡುಪಿಯ ಪಾಂಚಜನ್ಯ ತಂಡಗಳು ಕ್ರಮವಾಗಿ 3 ಮತ್ತು 4ನೇ ಬಹುಮಾನ ಪಡೆದುಕೊಂಡವು. ಬೆಂಗಳೂರು ಪ್ರಕೃತಿ ನ್ಯಾಶ್ ತಂಡದ ಆಕಾಶ್ ಬೆಸ್ಟ್ ಬ್ಯಾಟ್ಸ್‌ಮನ್, ಕುಂದಾಪುರದ ಜಾನ್ಸನ್ ನಿಕ್ಷಿತ್ ತಂಡದ ಇಮ್ರಾನ್ ಬೆಸ್ಟ್ ಬೌಲರ್ ಮತ್ತು ಕುಂದಾಪುರದ ಜಾನ್ಸನ್ ನಿಕ್ಷಿತ್ ತಂಡದ ಹರಿ ಮ್ಯಾನ್‌ ಆಫ್ ದಿ ಸಿರೀಸ್, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಈ ಪಂದ್ಯವನ್ನು ಸುಮಾರು 25 ಸಾವಿರಕ್ಕೂ ಹೆಚ್ಚು ಕ್ರೀಡಾಭಿಮಾನಿಗಳು ವೀಕ್ಷಿಸಿದರು. ಮದನ್ ಮಡಿಕೇರಿ ತಂಡ ಅಂಪೈರ್ ಆಗಿ ಕಾರ್ಯನಿರ್ವಹಿಸಿದರೆ, ವಿನಯ್ ವಿದ್ಯಾಧರ ಮತ್ತು ಶಿವನಾರಾಯಣ ಐತಾಳ್ ಕೋಟಾ ವೀಕ್ಷಣೆ ವಿವರಣೆ ನೀಡಿದರು.

ಬಹುಮಾನ ವಿತರಣೆ ಸಮಾರಂಭದಲ್ಲಿ ಆಯೋಜಕರಾದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಶಿವಗಂಗಾ ಶ್ರೀನಿವಾಸ್, ಕುರುಡಿ ಗಿರೀಶ್, ಜಯಪ್ರಕಾಶ್ ಗೌಡ, ಬಿ.ಕೆ. ಪರಶುರಾಮ್, ರವಿಕುಮಾರ ಗಾಂಧಿ, ಪಿ.ಸಿ.ರಾಮನಾಥ್, ಕ್ರೀಡಾಭಿಮಾನಿಗಳು ಹಾಜರಿದ್ದರು.

- - - -2ಕೆಡಿವಿಜಿ40.ಜೆಪಿಜಿ:

ದಾವಣಗೆರೆಯಲ್ಲಿ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸವಿನೆನಪಿನ ಅಂಗವಾಗಿ ನಡೆದ ಕ್ರಿಕೆಟ್ ಹಬ್ಬದಲ್ಲಿ ಆಟಗಾರರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಶುಭ ಹಾರೈಸಿದರು.

-2ಕೆಡಿವಿಜಿ41.ಜೆಪಿಜಿ: ದಾವಣಗೆರೆಯಲ್ಲಿ ನಡೆದ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸವಿನೆನಪಿನ ಕ್ರಿಕೆಟ್ ಹಬ್ಬದಲ್ಲಿ ಗೆಲುವು ಸಾಧಿಸಿದ ಕುಂದಾಪುರದ ಜಾನ್ಸನ್ ನಿಕ್ಷಿತ್ ತಂಡ.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ