ಕುಟೀರ ಆತ್ಮಜ್ಞಾನ ಪ್ರಸರಣ ಕೇಂದ್ರ: ಯೋಗೇಂದ್ರ ಶ್ರೀ

KannadaprabhaNewsNetwork |  
Published : Feb 14, 2024, 02:17 AM IST
ಫೋಟೊ:೧೩ಕೆಪಿಸೊರಬ-೦೨ : ಸೊರಬ ತಾಲ್ಲೂಕಿನ ಬಂಕಸಾಣ ಗ್ರಾಮದಲ್ಲಿ ಸದ್ಗುರು ಸೇವಾ ಟ್ರಸ್ಟ್ ವತಿಯಿಂದ ನಿರ್ಮಿಸಿದ ಸಮಾಧಾನ ಗುರು ಕುಟೀರದ ಗುರು ಪ್ರವೇಶ ಸಮಾರಂಭವನ್ನು ಹುಬ್ಬಳ್ಳಿ ಹಾಗೂ ಹಾನಗಲ್ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ಧರಾಜ ಯೋಗೇಂದ್ರ ಮಹಾಸ್ವಾಮಿಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ಸೊರಬ ತಾಲ್ಲೂಕಿನ ಬಂಕಸಾಣ ಗ್ರಾಮದಲ್ಲಿ ನಿರ್ಮಿಸಿದ ಸಮಾಧಾನ ಗುರು ಕುಟೀರದ ಗುರು ಪ್ರವೇಶ ಸಮಾರಂಭಕ್ಕೆ ಹುಬ್ಬಳ್ಳಿ ಹಾಗೂ ಹಾನಗಲ್ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ಧರಾಜ ಯೋಗೇಂದ್ರ ಮಹಾಸ್ವಾಮಿಗಳು ಚಾಲನೆ ನೀಡಿ, ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಸೊರಬ

ಕುಟೀರ ಎಂಬುದು ಸನಾತನ ಪರಂಪರೆಯ ದ್ಯೋತಕವಾಗಿದ್ದು ಅದು ಆತ್ಮ ಸಾಧನೆಯ ಜೊತೆಗೆ ಅತ್ಮಜ್ಞಾನದ ಪ್ರಸರಣದ ಕೇಂದ್ರವಾಗಿದೆ ಎಂದು ಹುಬ್ಬಳ್ಳಿ ಹಾಗೂ ಹಾನಗಲ್ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ಧರಾಜ ಯೋಗೇಂದ್ರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಭಾನುವಾರ ತಾಲ್ಲೂಕಿನ ಬಂಕಸಾಣ ಗ್ರಾಮದ ಶ್ರೀ ಹೊಳೆಲಿಂಗೇಶ್ವರ ಕ್ಷೇತ್ರದ ಪುಣ್ಯ ಸಂಗಮ ಸ್ಥಳದ ಉತ್ತರವಾಹಿನಿಯಲ್ಲಿ ಶ್ರೀ ಸದ್ಗುರು ಸೇವಾ ಟ್ರಸ್ಟ್ ವತಿಯಿಂದ ನಿರ್ಮಿಸಿದ ಸಮಾಧಾನ ಗುರು ಕುಟೀರದ ಗುರುಪ್ರವೇಶ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಕುಟೀರ ಎಂಬುದು ಭಾರತೀಯ ಸಂಸ್ಕೃತಿಯ ಪ್ರತೀಕ. ಕುಟೀರದಲ್ಲಿಯೇ ವೇದ, ಆಗಮ, ಮಹಾಕಾವ್ಯಗಳ ಜನನವಾಗಿದ್ದು. ಕುಟೀರದಲ್ಲಿಯೇ ಋಷಿ ಮುನಿಗಳು ವಾಸಿಸಿದ್ದು. ಅಂದಿನ ಕಾಲದಲ್ಲಿ ಕುಟೀರವು ಆತ್ಮಜ್ಞಾನಕ್ಕೆ ಸಾಧನವಾಗಿದ್ದು, ಇದೊಂದು ಸಂಸ್ಕಾರ ಕೊಡುವ ಕೇಂದ್ರವಾಗಿತ್ತು ಎಂದರು.

ಸಮಾಧಾನ ವರದಾ ಮತ್ತು ದಂಡಾವತಿ ನದಿಗಳ ಸಂಗಮ ಕ್ಷೇತ್ರದಲ್ಲಿ ಸಮಾಧಾನ ಎನ್ನವುದು ಗುರು ಕುಟೀರದ ರೂಪದಲ್ಲಿ ನಿರ್ಮಾಣವಾಗಿದೆ. ಇದೊಂದು ಪವಿತ್ರ ಕ್ಷೇತ್ರ. ಮೌನ ತಪಸ್ವಿಗಳು ಯೋಗಿಗಳು, ನಾಡಿನಾದ್ಯಂತ ಅವರ ಸಮಾಧಾನ ಧ್ಯಾನ ಕೇಂದ್ರಗಳು ಸರ್ವರಿಗೂ ಶಾಂತಿ ಸಮಾಧಾನವನ್ನು ನೀಡುವ ಕೇಂದ್ರಗಳಾಗಿವೆ ಎಂದರು.

ಸಮಾಧಾನ ಗುರುಕುಟೀರದ ಅಮರದೇವರು ಪ್ರಾಸ್ತಾವಿಕವಾಗಿ ಮಾತನಾಡಿ, ಗುರು ಕುಟೀರವು ಭಾವನಾತ್ಮಕವಾದ ಮನಸ್ಥಿತಿ. ಇಲ್ಲಿ ಬಂದು ಎಲ್ಲರೂ ಸಮಾಧಾನ ಹೊಂದುವಂತಾಗಲಿ ಎಂದು ಆಶಿಸಿದರು.

ಸಮಾಧಾನದ ಮುಖ್ಯ ರೂವಾರಿಗಳಾದ ಮೌನ ತಪಸ್ವಿ ಜಗದ್ಗುರು ಜಡೆಯ ಶಾಂತಲಿಂಗ ಶಿವಯೋಗಿಗಳು ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಮೂಡಿ ಮಠದ ಸದಾಶಿವ ಸ್ವಾಮೀಜಿ, ತೊಗರ್ಸಿ ಪಂಚವಣ್ಣಿಗೆ ಮಠದ ಚನ್ನವೀರ ದೇಶಿ ಕೇಂದ್ರ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಡಾ. ಮಹಾಂತ ಮಹಾಸ್ವಾಮೀಜಿ ಉಪಸ್ಥಿತರಿದ್ದು ಮಾತನಾಡಿದರು.

ಇದಕ್ಕೂ ಮೊದಲು ಪ್ರಾತಃಕಾಲದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರ ಪರವಾಗಿ ಅವರ ಧರ್ಮಪತ್ನಿ ಬಿ.ಆರ್. ತೇಜಸ್ವಿನಿ ಅವರಿಂದ ಜಂಗಮ ಮಹಾಪೂಜೆ ನೆರವೇರಿತು. ದಾನಿಗಳಿಗೆ ಗುರುರಕ್ಷೆ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ನಂತರ ಮೌನತಪಸ್ವಿ ಗುರುಗಳ ತುಲಾಭಾರ ಸೇವೆ ಭಕ್ತಾದಿಗಳಿಂದ ನಡೆಯಿತು.

ತೊಗರ್ಸಿ ಮಳೆ ಮಠದ ಮಹಾಂತ ದೇಶಿ ಕೇಂದ್ರ ಸ್ವಾಮೀಜಿ, ಲಕ್ಕವಳ್ಳಿ ಜೈನ ಮಠದ ವೃಷಭಸೇನ ಭಟ್ಟಾರಕ ಮಹಾಸ್ವಾಮಿಜಿ ಹಾಗೂ ಗುಡುಗಿನಕೊಪ್ಪದ ಲಿಂಗಪ್ಪ ಶರಣರು ಸಮ್ಮುಖ ವಹಿಸಿದ್ದರು. ಗೊಗ್ಗೇಹಳ್ಳಿ ಪಂಚಮಠ ಸಂಸ್ಥಾನದ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಮಂಡಲದ ಬಸವರಾಜ ಬಾರಂಗಿ, ಅಭಾವೀಲಿಂ ಸಂಘಟನೆಯ ವೀರೇಶಗೌಡ್ರು, ಟೌನ್ ವೀರಶೈವ ಸಮಾಜದ ಅಧ್ಯಕ್ಷ ಹೆಚ್. ಮಲ್ಲಿಕಾರ್ಜುನಪ್ಪ, ರಾಜುಗೌಡ್ರು, ಬಾಸೂರು ಗುರುಪ್ರಸನ್ನಗೌಡ್ರು, ಅಂಡಿಗೆ ಅಶೋಕನಾಯಕ, ಜಿ.ಪಂ. ಮಾಜಿ ಸದಸ್ಯ ಶಿವಲಿಂಗೇಗೌಡ್ರು, ಸುಧಾ ಶಿವಪ್ರಸಾದ, ತಾಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ ತಲಕಾಲುಕೊಪ್ಪ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...