ಕೆರೆ ಮಣ್ಣು ಲೂಟಿ; ಅಧಿಕಾರಿಗಳು ಮೌನ

KannadaprabhaNewsNetwork |  
Published : Jul 08, 2024, 12:34 AM IST
ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದಿರುವುದರಿಂದ ಬ್ರಹತ್ ಗುಂಡಿಗಳು ಬಿದ್ದಿರುವುದು | Kannada Prabha

ಸಾರಾಂಶ

ತಾಲೂಕಿನ ದೋಡ್ಡಿವಾರಪಲ್ಲಿ ಗ್ರಾಮದ ಯರ‍್ರಗುಡಿ ಕೆರೆಯಲ್ಲಿ ಬೆಂಗಳೂರು ಮೂಲದವರು ಇತ್ತೀಚಿಗೆ ಕೆರೆಯ ಅಂಚಿನಲ್ಲಿ ಜಮೀನು ಖರೀದಿ ಮಾಡಿದ್ದು,ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಮಣ್ಣು ತೆಗೆದು ಸಾಗಿಸಿದ್ದಾರೆ

ಕನ್ನಡಪ್ರಭ ವಾರ್ತೆ ಚೇಳೂರು

ದೊಡ್ಡಿವಾರಪಲ್ಲಿ ಗ್ರಾಮದ ಯರ‍್ರಗುಡಿ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದಿರುವ ಪರಿಣಾಮ ಬೃಹತ್ ಹೊಂಡಗಳು ನಿರ್ಮಾಣವಾಗಿವೆ. ಇದರಿಂದ ಜನ ಜಾನುವಾರುಗಳಿಗೂ ಪ್ರಾಣ ಕಂಟಕವಾಗಿ ಪರಿಣಮಿಸಿದೆ.

ನೂತನ ತಾಲೂಕಿನ ಸೋಮನಾಥಪುರ ಗ್ರಾಂ ಪಂಚಾಯತಿ ಹಾಗೂ ನಾರೆಮದ್ದೆಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ದೋಡ್ಡಿವಾರಪಲ್ಲಿ ಗ್ರಾಮದ ಯರ‍್ರಗುಡಿ ಕೆರೆಯಲ್ಲಿ ಬೆಂಗಳೂರು ಮೂಲದವರು ಇತ್ತೀಚಿಗೆ ಕೆರೆಯ ಅಂಚಿನಲ್ಲಿ ಜಮೀನು ಖರೀದಿ ಮಾಡಿದ್ದು,ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಮಣ್ಣು ತೆಗೆದು ಸಾಗಿಸಿದ್ದಾರೆ. ಜನ, ಜಾನುವಾರಿಗೆ ಅಪಾಯ

ಸದ್ಯ ಜಿಲ್ಲೆಯಲ್ಲಿ ಮಳೆ ಆರಂಭವಾಗಿದ್ದು, ಕೆರೆಗಳ ಹೊಂಡಗಳಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ತುಂಬಿಕೊಳ್ಳಲಿದೆ. ಆಗ ಕೆರೆಯಲ್ಲಿ ಎಲ್ಲಿ ಆಳ ನೀರಿದೆ ಎಂಬುದೇ ಗೊತ್ತಾಗುವುದಿಲ್ಲ. ಇದರಿಂದಾಗಿ ಜನ, ಜಾನುವಾರುಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಆದರೂ ಜಿಲ್ಲಾಡಳಿತ, ಸಂಬಂಧಪಟ್ಟ ಅಧಿಕಾರಿಗಳು ಅತ್ತ ಗಮನ ಹರಿಸುತ್ತಿಲ್ಲ. ಹಲವು ಗ್ರಾಮಗಳಲ್ಲಿ ಗಣೇಶ ವಿಸರ್ಜ ವೇಳೆ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚು, ಜಾನುವಾರುಗಳೂ ಸಹ ನೀರು ಕುಡಿಯಲು ಕೆರೆಗೆ ಇಳಿದರೆ ದೇವರಪಾದ ಸೇರುವುದು ಖಚಿತ. ಆದ್ದರಿಂದ, ಜಿಲ್ಲಾಡಳಿತ ಅಧಿಕಾರಿಗಳು ಕೆರೆಗಳಲ್ಲಿ ಅಕ್ರಮವಾಗಿ ತೆಗೆದಿರುವರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಕೈಗೋಳ್ಳಬೇಕು. ಮುಂದಿನ ದಿನಗಳಲ್ಲಿ ಯಾವುದೆ ರೀತಿಯ ಅನಾಹುತ ಸಂಬವಿಸಿದಲ್ಲಿ ಆಧಿಕಾರಿಗಳೆ ನೇರ ಹೋಣೆ ಹೋರಬೇಕಾಗುತ್ತದೆ, ಅದ್ದರಿಂದ ಮಣ್ಣಿನ ಗುಂಡಿಗಳಲ್ಲಿ ಬಿದ್ದು ಯಾವುದೇ ಪ್ರಾಣಹಾನಿ ನಡೆಯದಂತೆ ಎಚ್ಚರವಹಿಸುವಿಕೆ ಸೂಕ್ತವಾಗಿದೆ.ನರೇಗಾ ಕಾಮಗಾರಿ ನಡೆಯುತ್ತಿಲ್ಲ

ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವುದು ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳು ಈ ಹಿಂದೆ ಹೆಚ್ಚಾಗಿ ನಡೆಯುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಜೆಸಿಬಿ ಬಳಸಿ ಕಾಮಗಾರಿ. ನಡೆಸಿ, ಬಿಲ್ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾದ ಕಾರಣ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಜನರೂ ಸಹ ನರೇಗಾ ಕಡೆಗೆ ಹೆಚ್ಚಾಗಿ ಆಸಕ್ತಿ ತೋರುತ್ತಿಲ್ಲ,. ಹೀಗಾಗಿ ಹಿರಿಯ ಅಧಿಕಾರಿಗಳು ಪರ್ಯಯ ವ್ಯವಸ್ಥೆಗೆ ಮುಂದಾಗಬೇಕಿದೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ