ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ಜಮೀನು: ಭರವಸೆ

KannadaprabhaNewsNetwork |  
Published : Mar 02, 2024, 01:45 AM IST
೧ಕೆಎಲ್‌ಆರ್-೧೦ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಶಾಸಕ ಕೊತ್ತೂರು ಮಂಜುನಾಥ್, ಎಂಎಲ್‌ಸಿ ಅನಿಲ್‌ಕುಮಾರ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ಕೆಲಸವನ್ನು ಕಾರ್ಯಾಂಗವಾದ ನೌಕರರು ಮಾಡಿದರೆ ರಾಮರಾಜ್ಯ ಸಾಧ್ಯ. ಕಚೇರಿಗೆ ಬರುವ ಜನರನ್ನು ಕೂರಿಸಿ ಮಾತನಾಡಿದರೆ ಅರ್ಧ ಸಮಸ್ಯೆ ಪರಿಹಾರವಾಗುತ್ತದೆ

ಕನ್ನಡಪ್ರಭ ವಾರ್ತೆ ಕೋಲಾರ

ಜಿಲ್ಲೆಯ ೧೫ ಸಾವಿರ ನೌಕರರು ಮತ್ತವರ ಕುಟುಂಬಗಳಿಗೆ ಅನುಕೂಲವಾಗಲು ನೌಕರರ ಸಂಘಕ್ಕೆ ೫ ಎಕರೆ ಜಮೀನು ಮಂಜೂರು ಮಾಡಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವುದಾಗಿಯೂ ಮತ್ತು ನೌಕರರ ಭವನ ನವೀಕರಣಕ್ಕೆ ಪೂರ್ಣ ಸಹಕಾರ ನೀಡುವುದಾಗಿ ಶಾಸಕ ಕೊತ್ತೂರು ಮಂಜುನಾಥ್ ಭರವಸೆ ನೀಡಿದರು.

ನಗರದ ಪವನ್ ಕಾಲೇಜು ಮೈದಾನದಲ್ಲಿ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರಿ ನೌಕರರು ಸಮುದಾಯಭವನ, ಕಲ್ಯಾಣ ಮಂಟಪ ನಿರ್ಮಿಸಿಕೊಳ್ಳಲು ಅನುಕೂಲವಾಗುವಂತೆ ನೌಕರರ ಸಂಘಕ್ಕೆ ೫ ಎಕರೆ ಜಮೀನು ಮಂಜೂರಾತಿಗಾಗಿ ನೌಕರರ ಸಂಘದ ಅಧ್ಯಕ್ಷ ಜಿ. ಸುರೇಶಬಾಬು ಸಲ್ಲಿಸಿರುವ ಪ್ರಸ್ತಾವನೆಗೆ ಅನುಮೋದನೆ ನೀಡಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಜನತೆಗೆ ಯೋಜನೆ ತಲುಪಿಸಿ

ಎಂಎಲ್‌ಸಿ ಎಂ.ಎಲ್. ಅನಿಲ್‌ಕುಮಾರ್ ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿ, ರಾಜ್ಯಾಂಗ ಮಾಡಿದ ಕಾನೂನು, ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ಕೆಲಸವನ್ನು ಕಾರ್ಯಾಂಗವಾದ ನೌಕರರು ಮಾಡಿದರೆ ರಾಮರಾಜ್ಯ ಸಾಧ್ಯ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ನೀವು ಮಾಡುತ್ತಿದ್ದು, ಒತ್ತಡ ಸಹಜ, ಅದಕ್ಕಾಗಿ ವ್ಯಾಯಾಮ, ಧ್ಯಾನ ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಿ. ಕಚೇರಿಗೆ ಬರುವ ಜನರನ್ನು ಕೂರಿಸಿ ಮಾತನಾಡಿದರೆ ಅರ್ಧ ಸಮಸ್ಯೆ ಪರಿಹಾರವಾಗುತ್ತದೆ ಎಂದು ಸಲಹೆ ನೀಡಿದರು.ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ. ಸುರೇಶ್‌ಬಾಬು ಮಾತನಾಡಿದರು. ಇದಕ್ಕೂ ಮುನ್ನ ಅಪರ ಜಿಲ್ಲಾಧಿಕಾರಿ ಡಾ. ಶಂಕರ್‌ವಾಣಿಕ್ಯಾಳ್ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಕ್ರೀಡಾಕೂಟಕ್ಕೆ ಶುಭ ಕೋರಿದರು. ಕ್ರೀಡಾಪಟುಗಳಾದ ಮಂಜುನಾಥ್, ಪ್ರಶಾಂತ್, ಕಿರಣ್ ಗಜಗೋಷ್, ವೆಂಕಟಾಚಲಪತಿ, ಲಕ್ಷ್ಮಣರಾಜು ಕ್ರೀಡಾಜ್ಯೋತಿ ಹೊತ್ತು ತಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ, ಅಪರ ಎಸ್ಪಿ ರವಿಶಂಕರ್ ಶುಭ ಕೋರಿದರು.ನಿಕಟಪೂರ್ವ ಅಧ್ಯಕ್ಷ ಕೆ.ಎನ್. ಮಂಜುನಾಥ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಅಜಯ್‌ಕುಮಾರ್, ರಾಜ್ಯಪರಿಷತ್ ಸದಸ್ಯ ಗೌತಮ್, ಖಜಾಂಚಿ ವಿಜಯ್, ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಗೌರವಾಧ್ಯಕ್ಷ ರವಿಚಂದ್ರ, ನಿಕಟಪೂರ್ವ ಅಧ್ಯಕ್ಷ ಕೆ.ಬಿ. ಅಶೋಕ್, ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಉಪಾಧ್ಯಕ್ಷರಾದ ಪುರುಷೋತ್ತಮ್, ಮಂಜುನಾಥ್, ನಂದೀಶ್, ಕೋರ್ಟ್ ನಾಗರಾಜ್, ಸಹಕಾರ್ಯದರ್ಶಿ ಶಿವಕುಮಾರ್, ವಿವಿಧ ತಾಲೂಕು ಅಧ್ಯಕ್ಷರಾದ ನರಸಿಂಹಮೂರ್ತಿ, ಜನಾರ್ಧನ್, ಅಪ್ಪೇಗೌಡ, ಮುನೇಗೌಡ, ಕ್ರೀಡಾ, ಸಾಂಸ್ಕೃತಿಕ ಸಂಘದ ಎಂ.ನಾಗರಾಜ್, ಇಂಚರ ನಾರಾಯಣಸ್ವಾಮಿ, ವಿವಿಧ ಸಂಘಗಳ ಪದಾಧಿಕಾರಿಗಳಾದ ಎಸ್.ಚೌಡಪ್ಪ, ಕೆ.ಟಿ. ನಾಗರಾಜ್, ವಿ.ಮುರಳಿಮೋಹನ್, ಮುನಿಯಪ್ಪ, ಶ್ರೀರಾಮ್, ಡಿಪಿಒ ಮಂಜುನಾಥ್, ಎಸ್ಪಿ ಪಿಎ ನಾಗರಾಜ್, ಸುನೀಲ್, ಸಂದೀಪ್ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ