ವಿವಿಧ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ

KannadaprabhaNewsNetwork | Published : Mar 17, 2024 1:50 AM

ಸಾರಾಂಶ

2023-24 ನೇ ಸಾಲಿನ ಅಲ್ಪಸಂಖ್ಯಾಂತರ ಕಾಲೋನಿಗಳ ಸಮಗ್ರ ಅಭಿವೃದ್ಧಿ ಯೋಜನೆಯಡಿ 6 ಕೋಟಿ ಅನುದಾನದಡಿಯಲ್ಲಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಶನಿವಾರ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಭೂಮಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ2023-24 ನೇ ಸಾಲಿನ ಅಲ್ಪಸಂಖ್ಯಾಂತರ ಕಾಲೋನಿಗಳ ಸಮಗ್ರ ಅಭಿವೃದ್ಧಿ ಯೋಜನೆಯಡಿ 6 ಕೋಟಿ ಅನುದಾನದಡಿಯಲ್ಲಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸಿಸಿ.ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಶನಿವಾರ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಭೂಮಿ ಪೂಜೆ ನೆರವೇರಿಸಿದರು. ನೀತಿ ಸಂಹಿತೆ ಜಾರಿ ಹಿನ್ನೆಲೆ ಶಾಸಕರು ಪಟ್ಟಣದ ಬಸ್ತೀಪುರ ಆಶ್ರಯ ಬಡಾವಣೆಯಿಂದ 15 ನೇ ಹಣಕಾಸಿನಲ್ಲಿ 1.05 ಕೋಟಿ ವೆಚ್ಚದಲ್ಲಿ ಘನತ್ಯಾಜ್ಯ ಘಟಕಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಪಟ್ಟಣದ ಆಶ್ರಯ ಬಡಾವಣೆ, ಆದರ್ಶ ಬಡಾವಣೆ, ವಿದ್ಯಾನಗರ, ನೂರ್ ಮೊಹಲ್ಲಾ ಹಾಗೂ ತಾಲ್ಲೂಕಿನ ಜಕ್ಕಳಿ ಗ್ರಾಮ ಹಾಗೂ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮಗಳಲ್ಲಿ ಸೇರಿ ಒಟ್ಟು 5 ಕೋಟಿಯ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆಯಲ್ಲಿ ಪಾಲ್ಗೊಂಡರು.ಈ ವೇಳೆ ರಾಜ್ಯ ಉಗ್ರಾಣ ಅಭಿವೃದ್ಧಿ ನಿಗಮ ಅಧ್ಯಕ್ಷ ಜಯಣ್ಣ, ನಗರಸಭೆ ಸದಸ್ಯರು ಜಯಮೇರಿ, ಬಸ್ತೀಪುರ ಶಾಂತರಾಜು, ಮಂಜುನಾಥ್,ರಾಘವೇಂದ್ರ, ರೇಖಾ, ಸುಶೀಲಾ, ಭಾಗ್ಯಮ್ಮ, ಪುಷ್ಪಲತಾ ಶಾಂತರಾಜು, ಸುಮಾ ಸುಬ್ಬಣ್ಣ, ಕವಿತಾ, ಮನೋಹರ್, ಧರಣೇಶ್, ಎ.ಪಿ.ಶಂಕರ್, ನಾಗೇಂದ್ರ, ಜಿ.ಪಿ.ಶಿವಕುಮಾರ್, ಮುಖಂಡರು ಕಲೀಂ ಉಲ್ಲಾ, ಅಕ್ಮಲ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೋಟೇಶ್, ಕಾರ್ಯದರ್ಶಿ ಬಸ್ತೀಪುರ ರವಿ, ಜಕ್ಕಳ್ಳಿ ಫಾದರ್ ಶಿಲು ವೈನಾದನ್, ತಿಮ್ಮರಾಜೀಪುರ ಗ್ರಾಪಂ ಅಧ್ಯಕ್ಷ ರಶ್ಮಿರಾಜು, ಉಪಾಧ್ಯಕ್ಷ ಸಹನಾಪ್ರೀಯ, ಸದಸ್ಯ ಕೆಂಪರಾಜು, ಪಿಡಿಒ ಶಿವಮೂರ್ತಿ, ಮುಖಂಡರು ಎಪಿಎಂಸಿ ಮಾಜಿ ಅಧ್ಯಕ್ಷ ಸೋಮಣ್ಣ, ಕೆಂಪನಪಾಳ್ಯ ಮಹೇಶ್, ತಿಮ್ಮರಾಜೀಪುರ ರಾಜು ಗುತ್ತಿಗೆದಾರರು ವೆಂಕಟಚಲಪತಿ, ಫೈರೋಜ್, ಪುಟ್ಟಸ್ವಾಮಿ, ಪುಟ್ಟರಾಜು ಇದ್ದರು.

ಸಿಎಂ ಅವರು ನುಡಿದಂತೆ ನಡೆಯುವ ಮೂಲಕ 5 ಗ್ಯಾರಂಟಿ ಜಾರಿಗೊಳಿಸಿದ್ದಾರೆ. ದೇಶದ ಪ್ರಧಾನಿಗಳು ಸಿದ್ದರಾಮಯ್ಯ ಅವರ ಗ್ಯಾರಂಟಿ ಯೋಜನೆಯನ್ನು ನಕಲು ಮಾಡುತ್ತಿದ್ದಾರೆ, ಅವರು 29 ರು.ಪಡೆದು ಅಕ್ಕಿ ನೀಡಿದರೆ, ನಮ್ಮ ಮುಖ್ಯಮಂತ್ರಿಗಳು ಉಚಿತವಾಗಿ ಅಕ್ಕಿ ನೀಡುತ್ತಿದ್ದಾರೆ. ನಮ್ಮ ಜಿಲ್ಲೆಯ ಯುವನೋವಣ ನನಗೆ ಉದ್ಯೋಗ ದೊರೆತಿದ್ದು ನನಗೆ ಅನುಧಾನ ಬೇಡ ಎಂದು ಪ್ರಮಾಣಿಕವಾಗಿ ಪತ್ರ ಬರೆದಿದ್ದಾನೆ. 5 ಗ್ಯಾರಂಟಿ ಯೋಜನೆ ಜಾರಿಯಾದರೆ ಸರ್ಕಾರ ದಿವಾಳಿಯಾಗಲ್ಲ, ಇವೆಲ್ಲ ವಿಪಕ್ಷಗಳ ಸುಳ್ಳು ಪ್ರಚಾರ - ಎ.ಆರ್. ಕೃಷ್ಣಮೂರ್ತಿ ಶಾಸಕರು

Share this article