ಭಾಷೆಯನ್ನು ವ್ಯಾಪಾರದ ವಸ್ತುವಾಗಿ ಕಾಣಬಾರದು: ಚಕ್ರವರ್ತಿ

KannadaprabhaNewsNetwork |  
Published : Nov 17, 2025, 12:15 AM IST
ಭಾಷೆಯನ್ನು ವ್ಯಾಪಾರದ ವಸ್ತುವಾಗಿ ಕಾಣಬಾರದುಃ ಚಕ್ರವರ್ತಿ ಸಿ | Kannada Prabha

ಸಾರಾಂಶ

ತರೀಕೆರೆ, 2500 ವರ್ಷಕ್ಕಿಂತಲೂ ಅಧಿಕವಾದ ಇತಿಹಾಸ ಹೊಂದಿರುವ ನಮ್ಮ ಕನ್ನಡ ಭಾಷೆ ಉಳಿವಿಗೆ ನಾವು ಹೋರಾಟ ಮಾಡಬೇಕೆನ್ನು ವುದಕ್ಕಿಂತ, ನಾವು ಮತ್ತು ನಮ್ಮ ಮುಂದಿನ ಪೀಳಿಗೆ ನೆಮ್ಮದಿಯಾಗಿ ಇಲ್ಲಿ ಬದುಕು ಕಟ್ಟಿಕೊಳ್ಳಬೇಕೆಂದರೆ, ಕನ್ನಡ ಭಾಷೆ ನಮ್ಮಗಳಿಗೆ ಅವಶ್ಯ ಎಂದು ಕಾದಂಬರಿಕಾರ ಚಕ್ರವರ್ತಿ.ಸಿ. ಹೇಳಿದರು.

ಕನ್ನಡಪ್ರಭ ವಾರ್ತೆ ತರೀಕೆರೆ

2500 ವರ್ಷಕ್ಕಿಂತಲೂ ಅಧಿಕವಾದ ಇತಿಹಾಸ ಹೊಂದಿರುವ ನಮ್ಮ ಕನ್ನಡ ಭಾಷೆ ಉಳಿವಿಗೆ ನಾವು ಹೋರಾಟ ಮಾಡಬೇಕೆನ್ನು ವುದಕ್ಕಿಂತ, ನಾವು ಮತ್ತು ನಮ್ಮ ಮುಂದಿನ ಪೀಳಿಗೆ ನೆಮ್ಮದಿಯಾಗಿ ಇಲ್ಲಿ ಬದುಕು ಕಟ್ಟಿಕೊಳ್ಳಬೇಕೆಂದರೆ, ಕನ್ನಡ ಭಾಷೆ ನಮ್ಮಗಳಿಗೆ ಅವಶ್ಯ ಎಂದು ಕಾದಂಬರಿಕಾರ ಚಕ್ರವರ್ತಿ.ಸಿ. ಹೇಳಿದರು. ಲಕ್ಕವಳ್ಳಿಯಲ್ಲಿ ಯುವಕರ ಬಳಗ ಆಶ್ರಯದಲ್ಲಿ ನಡೆದ ರಾಜ್ಯೋತ್ಸವದಲ್ಲಿ ಮಾತನಾಡಿದರು. ಕನ್ನಡದ ಶಾಲೆಗಳು ಗ್ರಾಮದಲ್ಲಿದ್ದಾಗ, ಊರ ಮಕ್ಕಳೆಲ್ಲಾ ಕನ್ನಡ ಕಲಿತು, ಪಿಯುಸಿ. ಮುಗಿಸಿ, ಟಿ.ಸಿ.ಎಚ್. ಮಾಡಿ ಕನ್ನಡದ ಮಕ್ಕಳು, ಕನ್ನಡ ಶಾಲೆಗೆ ಶಿಕ್ಷಕರಾಗಿ ಹೋಗುತ್ತಿದ್ದರು. ಯಾವಾಗ ವಿದೇಶಿ ಕಂಪನಿಗಳು ರಾಜ್ಯದಲ್ಲಿ ಸ್ಥಾಪನೆಯಾಗಿ ಅವರ ಕಂಪನಿಯಲ್ಲಿ ಕೆಲಸ ಮಾಡಲು ಇಂಗ್ಲೀಷ್ ಮುಖ್ಯ ಎಂದು ಪ್ರಚಾರ ಪಡಿಸಿ, ಭಾಷೆಯನ್ನು ಸಹ ವ್ಯಾಪಾರದ ವಸ್ತುವಾದ ಕಾರಣದಿಂದಲೇ ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಇಂಗ್ಲೀಷ್ ಶಾಲೆಗಳಿಗೆ ಕಳುಹಿಸಲು ಪ್ರಾರಂಭಿಸಿದ ಕಾರಣ, ನಮ್ಮೂರ ಕನ್ನಡ ಶಾಲೆಗಳು ಮುಚ್ಚಿದವು ಎಂದು ಹೇಳಿದರು.ಒಂದು ಭಾಷೆ ಜೀವಂತವಾಗಿರಲು, ಆ ಭಾಷೆ ಮಾತನಾಡುವ ಮತ್ತು ಬರೆಯುವ ಕೈಗಳು ಹೆಚ್ಚಾದಷ್ಟು ಭಾಷೆ ಬೆಳೆಯುತ್ತಾ ಹೋಗುತ್ತದೆ. ನಾವೆಲ್ಲರೂ ತಿಂಗಳಿಗೊಮ್ಮೆಯಾದರೂ, ಬದುಕಿಗೆ ನೆಮ್ಮದಿ ಕೊಡುವ ಮತ್ತು ಜೀವನಕ್ಕೆ ನೆರವಾಗ ಬಹುದಾದ ಕನ್ನಡ ಪುಸ್ತಕ ಓದುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ತಾಯಂದಿರು ಮಕ್ಕಳ ಜೊತೆ ಕುಳಿತು ನಾವು ಓದುವ ಅಭ್ಯಾಸ ಬೆಳೆಸಿಕೊಂಡರೆ, ಕನ್ನಡಕ್ಕಾಗಿ ನಾವು ಮಾಡಬಹುದಾದ ದೊಡ್ಡ ಕೆಲಸ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ಶ್ರೀಧರ್, ಮುರುಗನ್, ಶ್ರೀನಿವಾಸ್, ಊರಿನ ಹಿರಿಯ ರೈತರಾದ ಶ್ರೀನಿವಾಸ್ ಮೂರ್ತಿ, ಮಂಜಪ್ಪ, ಕ್ರೀಡಾಪಟು ಮೊಹಮ್ಮದ್ ಪೊಲನ್, ಇವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಕೆ.ಎಸ್. ರಮೇಶ್, ಸತೀಶ್, ರುಕ್ಮಾನ್, ಆನಂದ್, ಲಕ್ಕವಳ್ಳಿ ಯುವಕರ ಬಳಗದ ವಿಮಲ್ ಮತ್ತು ತಂಡದವರು ಭಾಗವಹಿಸಿದ್ದರು.

ಫೋಟೋ ಇದೆಃ16ಕೆಟಿಆರ್.ಕೆ.1ಃ ತರೀಕೆರೆ ಸಮೀಪದ ಲಕ್ಕವಳ್ಳಿಯಲ್ಲಿ ಯುವಕರ ಬಳಗ ಆಶ್ರಯದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

PREV

Recommended Stories

ಶಿವಮೊಗ್ಗದಲ್ಲಿ ಮುಂದುವರಿದ ಕಾಡಾನೆ ಉಪಟಳ
ಭೀಮ್‌ ಪಥಸಂಚಲನಕ್ಕೆ ಅನುಮತಿ ನಿರಾಕರಣೆ ಅಕ್ರಮ: ರಾಘವೇಂದ್ರ ನಾಯ್ಕ