- ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮಾಹಿತಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಏ.19ರಂದು 14 ಅಭ್ಯರ್ಥಿಗಳಿಂದ 20 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ.ನಾಮಪತ್ರ ಸಲ್ಲಿಸಿದವರ ವಿವರ:
ಬಿಜೆಪಿಯಿಂದ ಜಿ.ಎಸ್. ಗಾಯತ್ರಿ 3 ನಾಮಪತ್ರ, ಜಿ.ಎಂ.ಸಿದ್ದೇಶ್ವರ ಬಿಜೆಪಿ 3 ನಾಮಪತ್ರ, ಎಚ್.ಎಸ್.ದೊಡ್ಡೇಶಿ ಜನಹಿತ ಪಕ್ಷ, ಕೆ.ಎ.ತಿಪ್ಪೇಸ್ವಾಮಿ ಸೋಷಿಯಲ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದಿಂದ 2 ನಾಮಪತ್ರ, ಎಂ.ಸಿ. ಶ್ರೀನಿವಾಸ್ ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ, ಕೆಆರ್‌ಎಸ್ ಪಕ್ಷದಿಂದ ಕೆ.ಎಸ್.ವೀರಭದ್ರಪ್ಪ ಉಳಿದಂತೆ ಎಲ್ಲ ಪಕ್ಷೇತರರಾಗಿದ್ದು, ವಿನಯ್‌ಕುಮಾರ್ ಜಿ.ಬಿ. ಎರಡು ನಾಮಪತ್ರ, ಪೆದ್ದಪ್ಪ ಎಸ್, ಇರ್ಫಾನುಲ್ಲಾ, ಪ್ರಸನ್ನ ಬಿ.ಆರ್, ಮೆಹಬೂಬ ಪಾಷ, ಬರ್ಕತ್ ಅಲಿಭಾಷ, ಗಾಯತ್ರಿ ಜಿ.ಎಂ. ಕೋಂ ಸಿದ್ದೇಶಿ, ಕರಣಂ ಕೊಟ್ರಪ್ಪ ನಾಮಪತ್ರ ಸಲ್ಲಿಸಿದವರು. ಇದುವರೆಗೆ ಒಟ್ಟು 40 ಅಭ್ಯರ್ಥಿಗಳಿಂದ 54 ನಾಮಪತ್ರಗಳು ಸಲ್ಲಿಕೆಯಾಗಿವೆ.ಏ.12 ರಂದು ಐದು ಅಭ್ಯರ್ಥಿಗಳಿಂದ 6 ನಾಮಪತ್ರಗಳು, ಏ.15 ರಂದು 8 ಅಭ್ಯರ್ಥಿಗಳಿಂದ 9 ನಾಮಪತ್ರಗಳು ಹಾಗೂ ಏ. 16 ರಂದು 3 ಅಭ್ಯರ್ಥಿಗಳಿಂದ 3 ನಾಮಪತ್ರಗಳು, ಏ. 17 ರಂದು 6 ಅಭ್ಯರ್ಥಿಗಳಿಂದ 6 ನಾಮಪತ್ರ, ಏ. 18 ರಂದು 10 ಅಭ್ಯರ್ಥಿಗಳಿಂದ 10 ನಾಮಪತ್ರಗಳು ಹಾಗೂ ಕೊನೆ ದಿನ ಏ. 19 ರಂದು 14 ಅಭ್ಯರ್ಥಿಗಳಿಂದ 20 ನಾಮಪತ್ರಗಳು ಸಲ್ಲಿಕೆಯಾಗಿವೆ.
1ಕ್ಕಿಂತ ಹೆಚ್ಚು ನಾಮಪತ್ರ ಸಲ್ಲಿಸಿದವರು: ಕಾಂಗ್ರೆಸ್‌ನಿಂದ ಡಾ.ಪ್ರಭಾ ಮಲ್ಲಿಕಾರ್ಜುನ್ 4 ನಾಮಪತ್ರ, ಬಿಜೆಪಿಯಿಂದ ಜಿ.ಎಸ್.ಗಾಯತ್ರಿ 4, ಬಿಜೆಪಿಯಿಂದ ಜಿ.ಎಂ. ಸಿದ್ದೇಶ್ವರ 3, ಕೆಆರ್‌ಎಸ್ ಪಕ್ಷದ ರಾಘವೇಂದ್ರ ಜಿ.ಪಿ. 2, ಸೋಷಿಯಲ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದಿಂದ ತಿಪ್ಪೇಸ್ವಾಮಿ ಕೆ.ಎ. 3 ನಾಮಪತ್ರ, ಪಕ್ಷೇತರರಾಗಿ ವಿನಯಕುಮಾರ್ ಜಿ.ಬಿ. 4 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.ನಾಮಪತ್ರಗಳ ಪರಿಶೀಲನೆ:
ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರಗಳ ಪರಿಶೀಲನೆ ಏ.20ರಂದು ಬೆಳಗ್ಗೆ 11 ಗಂಟೆಯಿಂದ ಆರಂಭವಾಗಲಿದೆ.- - - (-ಸಾಂದರ್ಭಿಕ ಚಿತ್ರ)