ಕಳೆದ ಬಾರಿ ನಾನು ಗೆದ್ದಿದ್ರೂ ಕೆಲಸ ಮಾಡಲಾಗಲಿಲ್ಲ: ಡಾ. ಕಾಮರೆಡ್ಡಿ

KannadaprabhaNewsNetwork |  
Published : Mar 15, 2024, 01:16 AM IST
ಎಚ್ಕೆಇ ಸಂಸ್ಥೆ ಅಧ್ಯಕ್ಷ ಹುದ್ದೆ ಹುರಿಯಾಳು ಡಾ. ಶರಣಬಸವ ಕಾಮರೆಡ್ಡಿ ತಮ್ಮ ಪೆನಲ್‌ ಸದಸ್ಯರೊಂದಿಗೆ ಸುದ್ದಿಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ಎಚ್ಕೆಇ ಸಂಸ್ಥಾದಾಗ ಏನೇ ಕೆಲಸ ಮಾಡಬೇಕಂದ್ರ ಅಧ್ಯಕ್ಷನಾಗಬೇಕು, ಇಲ್ಲಾಂದ್ರ ಏನೂ ಮಾಡಲಾಗದು ಎಂದಿರುವ ಎಚ್ಕೆಇ ಸಂಸ್ಥೆಯ ಅಧ್ಯಕ್ಷ ಸ್ಥಾನ ಆಕಾಂಕ್ಷಿ ಡಾ. ಶರಣಬಸಪ್ಪ ಕಾಮರೆಡ್ಡಿ, ಕಳೆದ ಬಾರಿ ತಾವು ಆಡಳಿತ ಮಂಡಳಿ ಚುನಾಯಿತ ಸದಸ್ಯನಾಗಿದ್ದರೂ ಕೂಡಾ ಕೆಲಸ ಮಾಡದಂತೆ ಹಿಂದಿನ ಅಧ್ಯಕ್ಷರು ತಮ್ಮ ಕೈ ಕಟ್ಟಿಹಾಕಿದ್ದರೆಂದು ದೂರಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಎಚ್ಕೆಇ ಸಂಸ್ಥಾದಾಗ ಏನೇ ಕೆಲಸ ಮಾಡಬೇಕಂದ್ರ ಅಧ್ಯಕ್ಷನಾಗಬೇಕು, ಇಲ್ಲಾಂದ್ರ ಏನೂ ಮಾಡಲಾಗದು ಎಂದಿರುವ ಎಚ್ಕೆಇ ಸಂಸ್ಥೆಯ ಅಧ್ಯಕ್ಷ ಸ್ಥಾನ ಆಕಾಂಕ್ಷಿ ಡಾ. ಶರಣಬಸಪ್ಪ ಕಾಮರೆಡ್ಡಿ, ಕಳೆದ ಬಾರಿ ತಾವು ಆಡಳಿತ ಮಂಡಳಿ ಚುನಾಯಿತ ಸದಸ್ಯನಾಗಿದ್ದರೂ ಕೂಡಾ ಕೆಲಸ ಮಾಡದಂತೆ ಹಿಂದಿನ ಅಧ್ಯಕ್ಷರು ತಮ್ಮ ಕೈ ಕಟ್ಟಿಹಾಕಿದ್ದರೆಂದು ದೂರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮನ್ನು ನಾಮ್‌ ಕೆ ವಾಸ್ತೆ ಬಸವೇಶ್ವರ ಆಸ್ಪತ್ರೆಗೆ ಕನ್ವೇನರ್‌ ಮಾಡಲಾಗಿತ್ತು. ಅಲ್ಲಿನ ಆಪರೇಷನ್‌ ಥೇಟರ್‌ಗಳನ್ನ ಮಾಡ್ಯುಲರ್‌ ಥೇಟರ್‌ಗಳಾಗಿ ಬದಲಾಯಿಸಬೇಕೆಂದು ಹೊರಟ ತಮ್ಮ ಯತ್ನಕ್ಕೂ ಕಲ್ಲು ಹಾಕಲಾಯ್ತು. ವೈದ್ಯ ವೃತ್ತಿಯಲ್ಲಿದ್ದೂ ಬಸವೇಶ್ವರ ಸುಧಾರಣೆ ಮಾಡಲಾಗಲಿಲ್ಲವಲ್ಲ ಎಂಬ ಕೊರಗಿದೆ. ಈ ಬಾರಿ ಮತದಾರರು ಮತ ಹಾಕಿ ಗೆಲ್ಲಿಸಿದರೆ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಸಂಸ್ಥೆಯ ಪ್ರಗತಿ ಮಾಡುವೆ ಎಂದರು.

ಕಳೆದ ಬಾರಿಯೇ ತಾವು ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರೂ ಕೂಡಾ ಡಾ. ಭೀಮಾಶಂಕರ ಬಿಲುಗಂದಿ ಈ ಬಾರಿ ಅವಕಾಶ ಕೊಡು, ಮುಂದೆ ನೀನೇ ಅಧ್ಯಕ್ಷ ಸ್ಥಾನಕ್ಕೆ ನಿಲ್ಲುವಿಯಂತೆ ಎಂದಾಗ ಅವರ ಮಾತಿಗೆ ಬೆಲೆ ಕೊಟ್ಟು ನಾನು ಸುಮ್ಮನಿದ್ದೆ, ಆದರೀಗ ಅವರು ಕೊಟ್ಟ ಮಾತಿನಂತೆ ನಡೆಯದೆ ಮಿತ್ರದ್ರೋಹ ಮಾಡಿದ್ದಾರೆ. ಮಗನನ್ನು ಕಣಕ್ಕಿಳಿಸಿ ನನಗೆ ನಂಬಿಕೆ ಮೋಸ ಮಡಿದ್ದಾರೆ, ಎಚ್ಕೆಇ ಸಂಸ್ಥೆಯನ್ನು ತಮ್ಮ ಕುಟುಂಬಕ್ಕೇ ಹೊಂದುವ ಯತ್ನದಲ್ಲಿದ್ದಾರೆಂದು ದೂರಿದರು.

ಇದು ಬದಲಾವಣೆ ಕಾಲ, ಮತದಾರರು ಬದಲಾವಣೆ ಬಯಸಿದ್ದಾರೆ, ಪ್ರಚಾರ ಹೋದಲ್ಲೆಲ್ಲಾ ಅವರ ಮನದ ಮಾತು ಗೊತ್ತಾಗುತ್ತಿದೆ. ಕುಟುಂಬಕ್ಕೆ ಮನ್ನಣೆ ಹಾಕೋದಿಲ್ಲ, ಅದೇನಿದ್ದರೂ ವೃತ್ತಿಪರರಿಗೆ ಈ ಬಾರಿ ಅವಕಾಶ ದೊರಕಲಿದೆ ಎಂದು ಡಾ. ಕಾಮರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ನಮೋಶಿಯ ನವ ಗ್ಯಾರಂಟಿ ನಾಟಕ: ನಮೋಶಿ ಪೆಮನ್‌ನಿಂದ ಬಾಂಡ್‌ ಪೇಪರ್‌ ಮೇಲೆ ನವ ಗ್ಯಾರಂಟಿ ಘೋಷಿಸಿರೋದನ್ನು ಟೀಕಿಸಿದ ಡಾ. ಕಾಮರೆಡ್ಡಿ ಹಿಂದೆ ಇದ್ದಾಗಲೇ ಕೆಲಸ ಮಾಡದರು ಈಗೇನ್‌ ಗ್ಯಾರಂಟಿ ನಾಟಕ ಮಾಡುತ್ತಿದ್ದಾರೆಂದು ಪ್ರಶ್ನಿಸಿದರು. ಇವರೆಲ್ಲರು ಅಧ್ಯಕ್ಷರಾಗಿದ್ದವರೇ, ಸಂಸ್ಥೆಯ ಹದಗೆಡಲು ಇವರೆಲ್ಲರ ಕೊಡುಗೆ ಇದೆ. ಹೀಗಾಗಿ ಮತದಾರರು ಇದನ್ನೆಲ್ಲ ಅರಿತಿದ್ದಾರೆ. ಬದಲಾವಣೆಗೆ ಮುಂದಾಗಲಿದ್ದಾರೆಂದರು.

ಸಂಸ್ಥೆಯ ಆರ್ಥಿಕತೆ ಗಟ್ಟಿ ಮಾಡೋದು, ಸಿಬ್ಬಂದಿಗಳಿಗೆ ಆರ್ಥಿಕ ಭದ್ರತೆ ಕೊಡೋದು, ಅನುಕೂಲ ಲಕಲ್ಪಿಸದು, ಜಾಗತಿಕ ಮಟ್ಟಕ್ಕೆ ಶೈಕ್ಷಣಿಕ, ಆಸ್ಪತ್ರೆ ಸೇವೆಗಳ ಗುಣಣಟ್ಟ ಸುಧಾರಿಸೋದೇ ತಮ್ಮ ಗುರಿ, 7ನೇ ವೇತನ ಆಯೋಗದಂತೆ ಸಂಬಳ, ಇತರೆ ಅನುಕೂಲ ನೀಡುವೆ. ಬಸವೇಶ್ವರ, ಸಂಗಮೇಶ್ವರ ಆಸ್ಪತ್ರೆ ಸುಧಾರಣೆ ಮಾಡದೆ ಇದ್ರೆ ನಾನು ವೈದ್ಯನೆ ಅಲ್ಲ ಎಂದು ಭಾವುಕರಾದ ಡಾ. ಕಾಮರೆಡ್ಡಿ ಸಂಸ್ಥೆ ಜನಪರವಾಗಿರುವಂತೆ ಮಾಡೋದಾಗಿ ನುಡಿದರು. ಪೆನಲ್‌ನ ಡಾ. ದೇವರಮನಿ, ನಿತಿನ್‌ ಜವಳಿ. ಡಾ. ಸುಧಾ ಹಾಲಕಾಯಿ ಸೇರಿದಂತೆ ಅನೇಕರಿದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ