10ಕ್ಕೆ ಚಂದ್ರಪ್ಪಗೌಡರ ಸಾಹಿತ್ಯ ಸಂಪುಟಗಳ ಲೋಕಾರ್ಪಣೆ

KannadaprabhaNewsNetwork | Published : Mar 7, 2024 1:48 AM

ಸಾರಾಂಶ

ಡಾ. ಎಚ್.ಡಿ ಚಂದ್ರಪ್ಪಗೌಡ ಅವರ ಸಂಸ್ಮರಣೆ ಮತ್ತು ಸಾಹಿತ್ಯ ಸಂಪುಟಗಳಾದ ಆರೋಗ್ಯಲೋಕ, ವಿಜ್ಞಾನಲೋಕ ಪುಸ್ತಕಗಳ ಬಿಡುಗಡೆ ಸಮಾರಂಭ ಮಾ.10 ರಂದು ಬೆಳಗ್ಗೆ 10 ಗಂಟೆಗೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ಕನ್ನಂಗಿ ಎಚ್.ಸಿ. ಆಶಾಶೇಷಾದ್ರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಡಾ. ಎಚ್.ಡಿ ಚಂದ್ರಪ್ಪಗೌಡ ಅವರ ಸಂಸ್ಮರಣೆ ಮತ್ತು ಸಾಹಿತ್ಯ ಸಂಪುಟಗಳಾದ ಆರೋಗ್ಯಲೋಕ, ವಿಜ್ಞಾನಲೋಕ ಪುಸ್ತಕಗಳ ಬಿಡುಗಡೆ ಸಮಾರಂಭ ಮಾ.10 ರಂದು ಬೆಳಗ್ಗೆ 10 ಗಂಟೆಗೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ಕನ್ನಂಗಿ ಎಚ್.ಸಿ. ಆಶಾಶೇಷಾದ್ರಿ ತಿಳಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ಡಾ. ಎಚ್.ಡಿ ಚಂದ್ರಪ್ಪಗೌಡ ಅವರ ಸಾಹಿತ್ಯ ಕೃತಿಗಳ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ ಪರಮ ಶಿವಮೂರ್ತಿ ವಹಿಸಲಿದ್ದಾರೆ. ಖ್ಯಾತ ಮನೋವೈದ್ಯ ಹಾಗೂ ವೈದ್ಯ ಸಾಹಿತಿ ಡಾ. ಕೆ.ಆರ್ ಶ್ರೀಧರ್ ಕಾರ್ಯಕ್ರಮ ವನ್ನು ಉದ್ಘಾಟಿಸಲಿದ್ದಾರೆ ಎಂದರು.

ಸಾಹಿತ್ಯ ಸಂಪುಟಗಳ ಬಿಡುಗಡೆಯನ್ನು ಮನೋವೈದ್ಯ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಸಿ.ಆರ್ ಚಂದ್ರ ಶೇಖರ್ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಹಂಪಿ ಕನ್ನಡ ವಿವಿ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ, ನವ ಕರ್ನಾಟಕ ಪಬ್ಲಿಕೇಷನ್ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಉಡುಪ, ಹಂಪಿ ಕನ್ನಡ ವಿವಿ ಪ್ರಸಾರಾಂಗ ನಿರ್ದೇಶಕ ಡಾ. ಮಾದವ ಪೆರಾಜೆ ಭಾಗವಹಿಸುವರು. ಸಾಹಿತ್ಯ ಸಂಪುಟಗಳ ಪರಿಚಯವನ್ನು ಶಿವಮೊಗ್ಗದ ಅರವಳಿಕೆ ವೈದ್ಯ ಶಾಸ್ತ್ರ ಪ್ರಾಧ್ಯಾಪಕರಾದ ಡಾ. ಗುರುದತ್ ನಡೆಸಿಕೊಡಲಿದ್ದಾರೆಂದು ಹೇಳಿದರು. ಅದೇ ದಿನ ಮಧ್ಯಾಹ್ನ 2.30ಕ್ಕೆ ಡಾ. ಎಚ್‌.ಡಿ. ಚಂದ್ರಪ್ಪಗೌಡರ ಸಮಗ್ರ ಸಾಹಿತ್ಯ ಮರು ಓದು ಕೃತಿಗಳ ಕುರಿತು ಉಪನ್ಯಾಸ ನಡೆಯಲಿದ್ದು, ಹಂಪಿ ವಿವಿ ಮಹಿಳಾ ಅಧ್ಯಯನ ವಿಭಾಗದ ಡೀನ್‌ ಡಾ. ಶೈಲಜಾ ಹಿರೇಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ವಿಜಯ ಶ್ರೀಧರ್‌ ಅವರು ಡಾ. ಚಂದ್ರಪ್ಪಗೌಡರ ಬದುಕು ಬರಹ, ಸಾಹಿತಿ ಡಾ. ಜೆ.ಕೆ. ರಮೇಶ್‌ ಅವರು ಡಾ. ಚಂದ್ರಪ್ಪಗೌಡರು ರಚಿಸಿದ ಸಾಧಕರ ಜೀವನ ಚರಿತ್ರೆಗಳು, ವೈದ್ಯರಾದ ಡಾ. ಸಿ.ಜಿ. ಕೇಶವಮೂರ್ತಿ ಅವರು ಡಾ. ಚಂದ್ರಪ್ಪಗೌಡರೊಂದಿಗೆ ನನ್ನ ಒಡನಾಟ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಾಹಿತಿ ಶೇಷಾದ್ರಿ, ಎಂ.ಎ. ರಮೇಶ್ ಹೆಗಡೆ, ಪತ್ರಕರ್ತ ಹಾಲುಸ್ವಾಮಿ ಉಪಸ್ಥಿತರಿದ್ದರು.]ಪೋಟೋ ಫೈಲ್‌ ನೇಮ್‌ 6 ಕೆಸಿಕೆಎಂ 5

Share this article