ನಾಯಕತ್ವ ಅಲಂಕಾರದ ಸ್ಥಾನವಲ್ಲ ಒಂದು ಜವಾಬ್ದಾರಿ: ನಿರಂಜನ ಗೌಡ

KannadaprabhaNewsNetwork | Published : Jul 7, 2024 1:23 AM

ಸಾರಾಂಶ

ನರಸಿಂಹರಾಜಪುರ, ನಾಯಕತ್ವ ಎಂದರೆ ಕೇವಲ ಅಲಂಕಾರಿಕ ಸ್ಥಾನವಲ್ಲ. ಅದು ಜವಾಬ್ದಾರಿಯುತ ಸ್ಥಾನ ಎಂದು ಪೊಲೀಸ್ ಠಾಣಾಧಿಕಾರಿ ಬಿ.ಎಸ್.ನಿರಂಜನ್‌ಗೌಡ ಹೇಳಿದರು.

ಜ್ವಾಲಾಮಾಲಿನಿ ಶಾಲೆ ವಿದ್ಯಾರ್ಥಿನಿಯರ ಸಂಘ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ನಾಯಕತ್ವ ಎಂದರೆ ಕೇವಲ ಅಲಂಕಾರಿಕ ಸ್ಥಾನವಲ್ಲ. ಅದು ಜವಾಬ್ದಾರಿಯುತ ಸ್ಥಾನ ಎಂದು ಪೊಲೀಸ್ ಠಾಣಾಧಿಕಾರಿ ಬಿ.ಎಸ್.ನಿರಂಜನ್‌ಗೌಡ ಹೇಳಿದರು.

ಶುಕ್ರವಾರ ಮಹಾವೀರ ಭವನದಲ್ಲಿ ನಡೆದ ಶ್ರೀ ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆ ವಿದ್ಯಾರ್ಥಿನಿಯರ ಸಂಘ ಉದ್ಘಾಟಿಸಿ ಮಾತನಾಡಿ, ನಾಯಕನಾದವನಿಗೆ ಸಮಯ ಪ್ರಜ್ಞೆ, ನಿರ್ಧರಿಸುವ ಗುಣ, ಸಮಯ ಸಂದರ್ಭದ ತೀರ್ಮಾನ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಮನೋಭಾವ ಬೇಕಾಗುತ್ತದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ದಿಸೆಯಿಂದಲೇ ನಾಯಕತ್ವದ ಗುಣ ಮೈಗೂಡಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ವಿದ್ಯಾರ್ಥಿನಿಯರು ಈ ಬಗ್ಗೆ ಜಾಗರೂಕರಾಗಿರಬೇಕು ಎಂದರು.

ಅಪರಿಚಿತರೇ ಆಗಲಿ, ಪರಿಚಿತರೇ ಆಗಲಿ ಅತಿಯಾದ ಸಲುಗೆ ಒಳ್ಳೆಯದಲ್ಲ.18 ವರ್ಷದೊಳಗಿನ ಹೆಣ್ಣು ಮಕ್ಕಳು ತಮ್ಮ ತಂದೆ, ತಾಯಿಯರ ಸಲಹೆ ಪಡೆಯದೇ ಯಾವುದೇ ಸ್ವತಂತ್ರ ನಿರ್ಧಾರ ಕೈಗೊಳ್ಳಬಾರದು. ಅದು ಕಾನೂನು ಬಾಹಿರ ವಾಗುತ್ತದೆ. 18 ವರ್ಷದೊಳಗಿನ ಸಮ್ಮತಿ ಲೈಂಗಿಕತೆಯೂ ಕೂಡ ಪೋಕ್ಸೋ ಕಾಯ್ದೆ ಪ್ರಕಾರ ಅಪರಾಧ. ಎಲ್ಲಾ ರೀತಿಯಲ್ಲೂ ಕಾನೂನು ತಿಳಿದಿರಬೇಕು. ಪ್ರಸ್ತುತ ದಿನಗಳಲ್ಲಿ ಸೈಬರ್ ಅಪರಾಧ ಹೆಚ್ಚಾಗುತ್ತಿವೆ. ಇನ್ ಸ್ಟಾಂ ಗ್ರಾಂ, ಫೇಸ್‌ ಬುಕ್ ಬಳಸುವಾಗ ಮೋಸದ ಜಾಲಕ್ಕೆ ಸಿಲುಕಿಕೊಳ್ಳಬೇಡಿ ಎಂದು ಸಲಹೆ ನೀಡಿದರು. ಸಭೆ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಸುನೀಲ್‌ಕುಮಾರ್ ವಹಿಸಿದ್ದರು.ಶಿಕ್ಷಕ ಗುಣಪಾಲ್‌ ಜೈನ್ ವಿಧ್ಯಾರ್ಥಿನಿಯರಿಗೆ ಕ್ಯಾಪ್ಟನ್ ಬ್ಯಾಡ್ಜ್ ನೀಡಿ ಮಕ್ಕಳಿಗೆ ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿನಿಯರಿಗೆ ಶಾಲಾ ಸಮವಸ್ತ್ರ ಹಾಗೂ ಪಠ್ಯ ಪುಸ್ತಕ ವಿತರಿಸಲಾಯಿತು. ನಂತರ ಶ್ರೀ ಜ್ವಾಲಾಮಾಲಿನಿ ಆಂಗ್ಲ ಮಾದ್ಯಮ ಹಾಗೂ ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಸಂದರ್ಭದಲ್ಲಿ ಪ್ರಭಾರಿ ಮುಖ್ಯ ಶಿಕ್ಷಕಿ ಸುಜಾತ, ಕು.ಶ್ರಾವ್ಯ,ಕು.ಕೌಸಲ್ಯ ಇದ್ದರು.

Share this article