ಬ್ರಹ್ಮಾವರ: ಇಂದಿನ ಸಮಾಜದಲ್ಲಿ ನಾವು ಸ್ವತಂತ್ರವಾಗಿ ಬದುಕಬೇಕೆಂದರೆ ಕಾನೂನು ಸುವ್ಯವಸ್ಥೆಗಳ ಕುರಿತು ಮಾಹಿತಿ ಎಲ್ಲರಿಗೂ ಅಗತ್ಯ. ವಾಟ್ಸಪ್ ಗ್ರೂಪ್‌ಗಳಿಗೆ ಪರಿಚಯವಿಲ್ಲದವರಿಂದ ಗ್ರೂಪ್‌ಗೆ ಸೇರಿಸಿದರೆ ಗ್ರೂಪ್‌ನಿಂದ ಹೊರಬಂದು ಸುರಕ್ಷಿತವಾಗಿರಬೇಕು ಎಂದು , ಬ್ರಹ್ಮಾವರ ಪೊಲೀಸ್ ಸ್ಟೇಷನ್ ಸಬ್ ಇನ್‌ಸ್ಪೆಕ್ಟರ್ ಮುಕ್ತಾಬಾಯಿ ಹೇಳಿದರು.
ಕಾರ್ಯಕ್ರಮದಲ್ಲಿ ಇನ್ನೊಬ್ಬ ಸಂಪನ್ಮೂಲ ವ್ಯಕ್ತಿಯಾಗಿ ಬ್ರಹ್ಮಾವರ ಪೋಲಿಸ್ ಠಾಣೆ ಅಸಿಸ್ಟಂಟ್ ಸಬ್ ಇನ್‌ಸ್ಪೆಕ್ಟರ್ ವಿಠಲ್, ರಸ್ತೆ ಸುರಕ್ಷತೆ ನಿಯಮ ಬಗ್ಗೆ ಮಾತನಾಡಿ, ದ್ವಿಚಕ್ರ ಸವಾರಿ ಮಾಡುವಾಗ ಹೆಲ್ಮೆಟ್ ಕಡ್ಡಾಯ ಹಾಕಬೇಕು. ರಸ್ತೆ ನಿಯಮ ಪಾಲನೆ ಮಾಡಬೇಕು, ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಬಾರದು ಎಂದು ತಿಳಿಸಿದರು.ಮತ್ತೊಬ್ಬಸಂಪನ್ಮೂಲ ವ್ಯಕ್ತಿಯಾದ ಬ್ರಹ್ಮಾವರ ಪೋಲಿಸ್ ಠಾಣೆಯ ಪ್ರೊಬೆಷನರಿ ಸಬ್ ಇನ್‌ಸ್ಪೆಕ್ಟರ್ ಆಶ್ರೀತಾ ಮಾತನಾಡಿ, ಸೈಬರ್ ಕ್ರೈಮ್ ಸಹಾಯವಾಣಿ ೧೯೩೦ಕ್ಕೆ ದೂರು ದಾಖಲಿಸುವ ಬಗ್ಗೆ ಮಾಹಿತಿ ನೀಡಿದರು ಹಾಗೂ ಇತ್ತೀಚೆಗೆ ಅತಿ ಹೆಚ್ಚು ಸುದ್ದಿಯಾಗುತ್ತಿರುವ ಎಪಿಕೆ ಪೈಲ್‌ನ್ನು ಕ್ಲಿಕ್ ಮಾಡದೆ ಅದರ ಬಗ್ಗೆ ಜಾಗರೂಕರಾಗಬೇಕು ಎಂದು ಎಚ್ಚರಿಸಿದರು.
ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಡಾ. ಬೊಮ್ಮಯ್ಯ ಎಂ. ಅಧ್ಯಕ್ಷತೆ ವಹಿಸಿದ್ದರು. ಕಾನೂನು ಮಾಹಿತಿ ಕಾರ್ಯಕ್ರಮ ನಮ್ಮ ಬದುಕಿಗೆ ತುಂಬಾ ಅಮೂಲ್ಯವಾಗಿದೆಎಂದರು.ರುಡ್‌ಸೆಟ್ ಸಂಸ್ಥೆಯ ಉಪನ್ಯಾಸಕಿ ಚೈತ್ರಾ ಕೆ. ನಿರೂಪಿಸಿ, ಸಂಸ್ಥೆಯ ಶಿಬಿರಾರ್ಥಿ ಆಶಾ ಪ್ರಾರ್ಥಿಸಿ, ಕಚೇರಿ ಸಹಾಯಕ ಶಾಂತಪ್ಪ ಸ್ವಾಗತಿಸಿ, ಹಿರಿಯ ಕಚೇರಿ ಸಹಾಯಕ ರವಿ ವಂದಿಸಿದರು.