ಈ ವರ್ಷ ಮಳೆ ಕಡಿಮೆ, ಪದಾರ್ಥಗಳಿಗೆ ಬೆಲೆ ಹೆಚ್ಚು: ವೇದ ಬ್ರಹ್ಮಶ್ರೀ ರವಿ ಪುರಾಣಿಕ್‌

KannadaprabhaNewsNetwork |  
Published : Apr 11, 2024, 12:58 AM ISTUpdated : Apr 11, 2024, 12:03 PM IST
 ನಗರದ ಶ್ರೀರಾಮ ಮಂದಿರಲ್ಲಿ ತಾಲೂಕು ಬ್ರಾಹ್ಮಣ ಸಂಘವು ಹಮ್ಮಿಕೊಂಡಿರುವ 11 ದಿನಗಳ ಶ್ರೀ ರಾಮೋತ್ಸವ ಕಾರ್ಯಕ್ರಮದ ಮೊದಲ ದಿನವಾದ .ಮಂಗಳವಾರ ಪಂಚಾಂಗ ಶ್ರವಣ ಕಾರ್ಯಕ್ರಮದಲ್ಲಿ ಪಂಚಾಂಗ ಆದರಿಸಿ ಈ  ವೇದ ಬ್ರಹ್ಮಶ್ರೀ ರವಿ ಪುರಾಣಿಕ್  ಭಭವಿಷ್ಯ ನುಡಿದರು | Kannada Prabha

ಸಾರಾಂಶ

ಅರಸೀಕೆರೆಯ ಶ್ರೀರಾಮ ಮಂದಿರಲ್ಲಿ ತಾಲೂಕು ಬ್ರಾಹ್ಮಣ ಸಂಘವು ಹಮ್ಮಿಕೊಂಡಿರುವ 11 ದಿನಗಳ ಶ್ರೀ ರಾಮೋತ್ಸವ ಕಾರ್ಯಕ್ರಮದ ಮೊದಲ ದಿನವಾದ ಮಂಗಳವಾರ ಮಠ ಮುದ್ರಾ ವೇದ ಬ್ರಹ್ಮಶ್ರೀ ರವಿ ಪುರಾಣಿಕ್ ಅವರು ಪಂಚಾಂಗ ಶ್ರವಣ ಮಾಡಿದರು.

  ಅರಸೀಕೆರೆ :  ಶ್ರೀ ಕ್ರೋಧಿನಾಮ ಸಂವತ್ಸರದಲ್ಲಿ ಮಳೆ ಕಡಿಮೆ ಇದ್ದು ಶನಿಯು ಮಂತ್ರಿಯಾಗಿರುವ ಹಿನ್ನೆಲೆ ಭೂಮಿಯಲ್ಲಿ ಬೆಳೆ ಕಡಿಮೆ ಕುಜನು ಸಸ್ಯಾಧಿಪತಿ ಆಗಿರುವುದರಿಂದ ಕೆಂಪು ಬತ್ತ, ತೊಗರಿ, ಕಡಲೆ ಮೊದಲಾದ ಕೆಂಪು ಧಾನ್ಯಗಳು ಭೂಮಿಯಲ್ಲಿ ವಿಶೇಷವಾಗಿ ಫಲಿಸುತ್ತವೆ ಎಂದು ಮಠ ಮುದ್ರಾ ವೇದ ಬ್ರಹ್ಮಶ್ರೀ ರವಿ ಪುರಾಣಿಕ್ ಭವಿಷ್ಯ ನುಡಿದರು.

ನಗರದ ಶ್ರೀರಾಮ ಮಂದಿರಲ್ಲಿ ತಾಲೂಕು ಬ್ರಾಹ್ಮಣ ಸಂಘವು ಹಮ್ಮಿಕೊಂಡಿರುವ 11 ದಿನಗಳ ಶ್ರೀ ರಾಮೋತ್ಸವ ಕಾರ್ಯಕ್ರಮದ ಮೊದಲ ದಿನವಾದ ಮಂಗಳವಾರ ಪಂಚಾಂಗ ಶ್ರವಣ ಕಾರ್ಯಕ್ರಮದಲ್ಲಿ ಪಂಚಾಂಗ ಆಧರಿಸಿ ಈ ಭವಿಷ್ಯ ನುಡಿದರು. ಚಂದ್ರನು ಧಾನ್ಯಾಧಿಪತಿ ಆಗಿರುವುದರಿಂದ ಗೋವುಗಳು ಸಮೃದ್ಧಿಯಾಗಿ ಹಾಲನ್ನು ಕೊಡುತ್ತವೆ. ಪ್ರಜೆಗಳು ಆರೋಗ್ಯವಾಗಿರುತ್ತಾರೆ. ಮೇಘಾಧಿಪತಿಯು ಶನಿ ಆಗಿರುವುದರಿಂದ ಮಳೆ ಕಡಿಮೆ, ಪದಾರ್ಥಗಳಿಗೆ ಬೆಲೆ ಹೆಚ್ಚು ಎಂದು ನುಡಿದರು.

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚನ್ನರಾಯಪಟ್ಟಣದ ವಿದ್ಯಾ ಕುಮಾರಿ ಅಮೃತ ಭಕ್ತಿಗೀತೆ ಮತ್ತು ದೇವರನಾಮ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ರವಿಕುಮಾರ್ ಬುಧವಾರದಿಂದ ಮೂರು ದಿನಗಳ ಕಾಲ ಗಮಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ನಿತ್ಯ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಸಕಾಲಕ್ಕೆ ಸಮಾಜ ಬಾಂಧವರು ಆಗಮಿಸಬೇಕೆಂದರು.

ಖಜಾಂಚಿ ಕರ್ನಾಟಕ ಬ್ಯಾಂಕ್ ಮೋಹನ್ ಕುಮಾರ್, ಶ್ರೀ ರಾಮೋತ್ಸವ ಕಾರ್ಯಕ್ರಮ ಹಾಗೂ ಶ್ರೀರಾಮ ಮಂದಿರ ನವೀಕರಣಕ್ಕೆ ಸಮಾಜ ಬಾಂಧವರು ಉತ್ತಮವಾಗಿ ಸ್ಪಂದಿಸುತ್ತಿದ್ದೀರಿ ಇದೇ ಸಹಕಾರ ಮುಂದಿನ ದಿನಗಳಲ್ಲಿಯೂ ಇರಲಿ ಎಂದು ಆಶಿಸಿದರು

ಕಾರ್ಯದರ್ಶಿ ಸುಬ್ರಹ್ಮಣ್ಯ ನಿತ್ಯ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಸಕಾಲಕ್ಕೆ ಆಗಮಿಸುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಯಶಸ್ವಿಗೊಳಿಸಿ ಕೊಡಬೇಕೆಂದು ಮನವಿ ಮಾಡಿದರು

ಸಂಘದ ಉಪಾಧ್ಯಕ್ಷ ಕೆ ವಿ ಹಿರಿಯಣ್ಣಯ್ಯ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.

ಅರೀಕೆರೆಯ ಶ್ರೀರಾಮ ಮಂದಿರಲ್ಲಿ ತಾಲೂಕು ಬ್ರಾಹ್ಮಣ ಸಂಘವು ಹಮ್ಮಿಕೊಂಡಿರುವ 11 ದಿನಗಳ ಶ್ರೀ ರಾಮೋತ್ಸವ ಕಾರ್ಯಕ್ರಮದ ಮೊದಲ ದಿನವಾದ ಮಂಗಳವಾರ ಮಠ ಮುದ್ರಾ ವೇದ ಬ್ರಹ್ಮಶ್ರೀ ರವಿ ಪುರಾಣಿಕ್ ಪಂಚಾಂಗ ಶ್ರವಣ ನಡೆಸಿಕೊಟ್ಟರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ