ಇಂದಿನ ಆಡಳಿತಗಾರರಿಗೆ ಛತ್ರಪತಿ ಶಿವಾಜಿ ರಾಷ್ಟ್ರಭಕ್ತಿ ಪ್ರೇರಣೆಯಾಗಲಿ

KannadaprabhaNewsNetwork |  
Published : Feb 20, 2024, 01:53 AM IST
ಫೋಟೊ:೧೯ಕೆಪಿಸೊರಬ-೦೪ : ಸೊರಬ ತಾಲೂಕಿನ ಮೂಡದೀವಳಿಗೆ ಗ್ರಾಮದಲ್ಲಿ ಕ್ಷತ್ರಿಯ ಮರಾಠ ಸಮಾಜದ ವತಿಯಿಂದ  ಛತ್ರಪತಿ ಶಿವಾಜಿ ಮಹಾರಾಜರ ೩೯೭ನೇ ಜಯಂತಿ ಆಚರಿಸಿದರು. | Kannada Prabha

ಸಾರಾಂಶ

ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು. ಅವರ ಶೌರ್ಯ, ಸಾಹಸ, ರಾಷ್ಟ್ರಭಕ್ತಿ ಇಂದಿನ ಆಡಳಿತಗಾರರಿಗೆ ಪ್ರೇರಣಾಶಕ್ತಿ ಆಗಿದೆ. ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮ ಭಾರತವನ್ನು ತಮ್ಮ ಆಳ್ವಿಕೆಗೆ ತಂದು ಕೀರ್ತಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ ಎಂದು ಸೊರಬ ತಾಲೂಕು ಮೂಡದೀವಳಿಗೆ ಗ್ರಾಮ ಮುಖಂಡ ಲೋಕೇಶ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸೊರಬ

ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು. ಅವರ ಶೌರ್ಯ, ಸಾಹಸ, ರಾಷ್ಟ್ರಭಕ್ತಿ ಇಂದಿನ ಆಡಳಿತಗಾರರಿಗೆ ಪ್ರೇರಣಾಶಕ್ತಿ ಆಗಿದೆ ಎಂದು ಗ್ರಾಮ ಮುಖಂಡ ಲೋಕೇಶ್ ಹೇಳಿದರು.

ಸೋಮವಾರ ತಾಲೂಕಿನ ಮೂಡದೀವಳಿಗೆ ಗ್ರಾಮದಲ್ಲಿ ಕ್ಷತ್ರಿಯ ಮರಾಠ ಸಮಾಜದವರು ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ 397ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮ ಭಾರತವನ್ನು ತಮ್ಮ ಆಳ್ವಿಕೆಗೆ ತಂದು ಕೀರ್ತಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ. ಈ ಕಾರಣದಿಂದ ಅವರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತದ್ದು. ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಮತ್ತು ಸಾಧನೆ ಮಹತ್ವದ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭ ಬಳ್ಳಿಬೈಲು, ಮೂಡದೀವಳಿಗೆ, ಗ್ರಾಮದ ಕ್ಷತ್ರಿಯ ಮರಾಠ ಸಮಾಜದವರು ಛತ್ರಪತಿ ಶಿವಾಜಿ ಮಹಾರಾಜ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಿಹಿ ವಿತರಣೆ ಮಾಡಿ ಸಂಭ್ರಮಿಸಿದರು. ಅನಂತರ ಜೈ ಶಿವಾಜಿ, ಜೈ ಭವಾನಿ, ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ ಎಂಬ ಘೋಷಣೆಗಳನ್ನು ಮೊಳಗಿಸಿದರು. ಬಳ್ಳಿಬೈಲು ಗ್ರಾಮದಿಂದ ಮೂಡದೀವಳಿಗೆ, ಚನ್ನಪಟ್ಟಣ, ಮಾರ್ಗವಾಗಿ ಚಂದ್ರಗುತ್ತಿ ಮುಖ್ಯರಸ್ತೆ, ರಥಬೀದಿ ಸೇರಿದಂತೆ ಕಮಲಾಪುರ ಗ್ರಾಮದವರೆಗೆ ಬೈಕ್‌ ರ್ಯಾಲಿ ನಡೆಸಿದರು.

ಕ್ಷತ್ರಿಯ ಮರಾಠ ಸಮಾಜದ ರವಿ, ಶಿವಾಜಿ, ಸುರೇಶಪ್ಪ, ಲೋಕೇಶ್, ಗುತ್ಯಪ್ಪ, ಮಂಜುನಾಥ, ಚಂದ್ರು, ರವಿ, ವೀರಭದ್ರಪ್ಪ, ಪರಸಪ್ಪ, ಪರಶುರಾಮ, ಎಂ.ಕೆ. ಸಚಿನ್ ಕಮಲಾಪುರ, ರಾಜು, ವಿಜಯಕುಮಾರ, ಪ್ರೇಮ್‌ಕುಮಾರ್, ಮಹಿಳೆಯರು ಪಾಲ್ಗೊಂಡಿದ್ದರು.

- - - -19ಕೆಪಿಸೊರಬ04:

ಸೊರಬ ತಾಲೂಕಿನ ಮೂಡದೀವಳಿಗೆ ಗ್ರಾಮದಲ್ಲಿ ಕ್ಷತ್ರಿಯ ಮರಾಠ ಸಮಾಜದ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ 397ನೇ ಜಯಂತಿ ಆಚರಿಸಲಾಯಿತು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...