ರೈತರನ್ನು ಸ್ಮರಿಸುವ, ನೋವಿಗೆ ಸ್ಪಂದಿಸುವ ಕಾರ್ಯವಾಗಲಿ

KannadaprabhaNewsNetwork |  
Published : Jul 22, 2025, 01:16 AM IST
ಪೊಟೋ-ಸಮೀಪದ ಗೋವನಾಳ ಗ್ರಾಮದಲ್ಲಿ ರೈತ ಹುತಾತ್ಮ ದಿನಾಚರಣೆ ಆಚರಿಸಿ ರೈತರಿಗೆ ಶೃದ್ದಾಂಜಾಲಿ ಸಲ್ಲಿಸಲಾಯಿತು.  | Kannada Prabha

ಸಾರಾಂಶ

ಲಕ್ಷ್ಮೇಶ್ವರ ಸಮೀಪದ ಗೋವನಾಳ ಗ್ರಾಮದಲ್ಲಿ ರೈತ ಹುತಾತ್ಮ ದಿನಾಚರಣೆಯ ಅಂಗವಾಗಿ ಸೋಮವಾರ ರೈತಪರ ಹೋರಾಟಗಾರರೂ ಹಾಗೂ ಹುತಾತ್ಮ ರೈತರ ಭಾವಚಿತ್ರ(ವೀರಗಲ್ಲು)ಕ್ಕೆ ಪೂಜೆ, ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಲಕ್ಷ್ಮೇಶ್ವರ: ಸಮೀಪದ ಗೋವನಾಳ ಗ್ರಾಮದಲ್ಲಿ ರೈತ ಹುತಾತ್ಮ ದಿನಾಚರಣೆಯ ಅಂಗವಾಗಿ ಸೋಮವಾರ ರೈತಪರ ಹೋರಾಟಗಾರರೂ ಹಾಗೂ ಹುತಾತ್ಮ ರೈತರ ಭಾವಚಿತ್ರ(ವೀರಗಲ್ಲು)ಕ್ಕೆ ಪೂಜೆ, ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸುಮಾರು ೩೨ (೧೯೯೩) ವರ್ಷಗಳ ಹಿಂದೆ ಗ್ರಾಮದ ರೈತರಾದ ಫಕ್ಕೀರಗೌಡ ಮಣಕಟ್ಟಿ, ರಾಮಣ್ಣ ಹುಬ್ಬಳ್ಳಿ, ಉಡಚಪ್ಪ ವಾಲಿಕಾರ ಈ ಮೂವರು ರೈತರು ಬೆಂಗಳೂರಿನಲ್ಲಿ ಜರುಗಿದ ಅಂತಾರಾಷ್ಟ್ರೀಯ ರೈತ ಸಮಾವೇಶದಲ್ಲಿ ಪಾಲ್ಗೊಳ್ಳಲು ಹೋದಾಗ ಜರುಗಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರ ಸ್ಮರಣಾರ್ಥವಾಗಿ ಗ್ರಾಮಸ್ಥರು ಗ್ರಾಮದ ಅಗಸಿಯಲ್ಲಿ ವೀರಗಲ್ಲು ಸ್ಥಾಪಿಸಿ ಪ್ರತಿವರ್ಷ ರೈತ ಹುತಾತ್ಮ ದಿನಾಚರಣೆಯಂದು ಸ್ಮರಿಸುವ ಕಾರ್ಯ ನೆರವೇರಿಸಲಾಗುತ್ತಿದೆ.ಈ ವೇಳೆ ಗ್ರಾಪಂ ಮಾಜಿ ಸದಸ್ಯ ಶೇಖರಗೌಡ ಕೊರಡೂರ ಮಾತನಾಡಿ, ರೈತರು, ಶಿಕ್ಷಕರು ಮತ್ತು ಸೈನಿಕರು ದೇಶದ ಬೆನ್ನುಲುಬಾಗಿದ್ದು ಅವರನ್ನು ಗೌರವ ಭಾವನೆಯಿಂದ ಕಾಣುವುದು ಎಲ್ಲರ ಕರ್ತವ್ಯವಾಗಿದೆ. ಇವರ ಸೇವಾ ಕಾರ್ಯ ಸದಾ ಸ್ಮರಣೀಯ, ರೈತರಿಗೆ ದೇಶದಲ್ಲಿ ರಾಜ್ಯದಲ್ಲಿ ದೊರೆಯಬೇಕಾದ ಸೌಲಭ್ಯಗಳು ಇನ್ನೂ ದೊರೆಯುತ್ತಿಲ್ಲ ಇದು ವಿಷಾದದ ಸಂಗತಿಯಾಗಿದೆ. ಅನ್ನ ನೀಡುವ ರೈತರ ಉತ್ಪನ್ನಗಳಿಗೆ ದರ ನಿಗದಿಪಡಿಸುವ ಅಧಿಕಾರ ರೈತರಿಗಿಲ್ಲ ಮತ್ತು ಅವರು ಬೆಳೆದ ಆಹಾರ ಉತ್ಪನ್ನಗಳಿಗೆ ಕಿಮ್ಮತ್ತೂ ಇಲ್ಲದಿರುವುದು ವಿಷಾದದ ಸಂಗತಿ. ಈ ನಿಟ್ಟಿನಲ್ಲಿ ಸರ್ಕಾರಗಳು ಕೃಷಿಯನ್ನು ಉದ್ಯಮದ ರೀತಿ ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ, ರೈತ ಹುತಾತ್ಮ ದಿನದಂದು ರೈತರಿಗೆ ಸಿಗುವ ಎಲ್ಲ ಸೌಲಭ್ಯ ದೊರೆಯುವಂತಾದರೆ ಈ ಆಚರಣೆಗೆ ಹೆಚ್ಚು ಮಹತ್ವ ಬರುತ್ತದೆ ಎಂದರು. ಗ್ರಾಮದ ಮುಖಂಡ ನಿಂಗನಗೌಡ ಮಣಿಕಟ್ಟಿನ, ನೀಲಪ್ಪಗೌಡ ಮರಿಲಿಂಗನಗೌಡ್ರ, ಶಂಭು ತೇಲಿ, ಅಲ್ಲಿಸಾಬ ಅಗಸಿಮನಿ, ದಿವಾನಸಾಬ ಮಸೂತಿ, ನಿಂಗನಗೌಡ ಮರಿಲಿಂಗನಗೌಡ್ರ, ಅಣ್ಣಪ್ಪ ಹೊಸಮನಿ, ಶಿವಬಸಪ್ಪ ಹುಬ್ಬಳ್ಳಿ, ಲೋಹಿತ್ ಅಗಡಿ ಸೇರಿದಂತೆ ಅನೇಕರಿದ್ದರು.

PREV

Latest Stories

ದಾವಣಗೆರೆಯಲ್ಲಿ ವೀರಶೈವ ಪಂಚಪೀಠಗಳ ಸಮಾಗಮ
ಹವ್ಯಕ ಪ್ರತಿಷ್ಠಾನ ವಾರ್ಷಿಕೋತ್ಸವ ಸಂಪನ್ನ
5 ಪಾಲಿಕೆ ರಚನೆಗೆ ಆಕ್ಷೇಪಣೆ ಸಲ್ಲಿಸಲು ಹಕ್ಕಿದೆ: ಡಿಕೆಶಿ