ಗೌರಿ ಗಣೇಶ-ಈದ್ ಮಿಲಾದ್ ಶಾಂತಿಯುತವಾಗಿ ಆಚರಿಸಲಿ

KannadaprabhaNewsNetwork |  
Published : Aug 23, 2025, 02:01 AM IST
ಫೋಟೋ: 21 ಹೆಚ್‌ಎಸ್‌ಕೆ 3ಹೊಸಕೋಟೆಯ ಶ್ರೀಲಕ್ಷಿ÷್ಮ ಕಲ್ಯಾಣ ಮಂಟಪದಲ್ಲಿ ಗಣಪತಿ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬ ಆಚರಣೆ ಸಂಬಹ್‌Aದ ಶಾಂತಿ ಸಭೆಯಲ್ಲಿ ಡಿವೈಎಸ್‌ಪಿ ಮಲ್ಲೇಶ್ ಸಭೆಯನ್ನುದ್ದೇಶಿಸಿ ಮಾತನಾಡಿದರು. | Kannada Prabha

ಸಾರಾಂಶ

ಹೊಸಕೋಟೆ: ಗೌರಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಶಾಂತಿ ಸಹೋದರತ್ವದಿಂದ ಆಚರಿಸಬೇಕು ಎಂದು ಹೊಸಕೋಟೆ ಪೊಲೀಸ್ ಉಪವಿಭಾಗದ ಡಿವೈಎಸ್‌ಪಿ ಮಲ್ಲೇಶ್ ತಿಳಿಸಿದರು.

ಹೊಸಕೋಟೆ: ಗೌರಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಶಾಂತಿ ಸಹೋದರತ್ವದಿಂದ ಆಚರಿಸಬೇಕು ಎಂದು ಹೊಸಕೋಟೆ ಪೊಲೀಸ್ ಉಪವಿಭಾಗದ ಡಿವೈಎಸ್‌ಪಿ ಮಲ್ಲೇಶ್ ತಿಳಿಸಿದರು.

ನಗರದಲ್ಲಿ ಗಣಪತಿ ಹಾಗೂ ಈದ್ ಮಿಲಾದ್ ಹಬ್ಬಗಳ ಪ್ರಯುಕ್ತ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಗಣಪತಿ ಪ್ರತಿಷ್ಠಾಪನೆಗೂ ಮುನ್ನ ಪೊಲೀಸ್ ಇಲಾಖೆ, ಸ್ಥಳೀಯ ನಗರಸಭೆ ಅಥವಾ ಗ್ರಾಪಂ ಹಾಗೂ ಬೆಸ್ಕಾಂ ವತಿಯಿಂದ ಕಡ್ಡಾಯ ಅನುಮತಿ ಪಡೆದಿರಬೇಕು. ಈ ಬಾರಿ ಎಲ್ಲಾ ಇಲಾಖೆಗಳ ಸಹಯೋಗದಲ್ಲಿ ಏಕಗವಾಕ್ಷಿ ಪದ್ದತಿ ಜಾರಿ ಮಾಡಲಾಗಿದೆ ಎಂದರು.

ಗಣಪತಿ ಕೂರಿಸುವ ತಂಡಗಳು ಮೊದಲೇ ಎಷ್ಟು ದಿನ, ಅವಧಿ, ಯಾವಾಗ ವಿಸರ್ಜನೆ ಎಂದು ಆರ್ಜಿಯಲ್ಲಿ ನಮೂದಿಸಿರಬೇಕು, ಸಂಜೆ ೬ ಗಂಟೆ ನಂತರ ಗಣಪತಿ ವಿಸರ್ಜನೆಗೆ ಅವಕಾಶ ಇರುವುದಿಲ್ಲ. ಮೆರವಣಿಗೆ ಸಂದರ್ಭದಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಪಟಾಕಿ ಹಾಗೂ ಮದ್ದು ಗುಂಡುಗಳನ್ನು ಸಿಡಿಸುವಂತಿಲ್ಲ. ಧ್ವನಿ ವರ್ಧಕಗಳ ಬಳಕೆ ರಾತ್ರಿ 10ರ ನಂತರ ಬಳಸುವಂತಿಲ್ಲ ಎಂದರು.

ತಹಸೀಲ್ದಾರ್ ಸೋಮಶೇಖರ್, ಗಣೇಶ ಹಾಗೂ ಈದ್‌ ಮಿಲಾದ್‌ ಹಬ್ಬಗಳನ್ನು ಸಂಬಂಧಪಟ್ಟ ಇಲಾಖೆಗಳು ನೀಡುವ ಮಾರ್ಗದರ್ಶನ, ಸಲಹೆ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ನಗರಸಭೆ ಆಯುಕ್ತ ನೀಲೋಚನ ಪ್ರಭು ಮಾತನಾಡಿ, ಗಣಪತಿ ಹಬ್ಬದ ಸಂದರ್ಭದಲ್ಲಿ ಪ್ರಸಾದ ವಿತರಣೆ ವೇಳೆ ನಗರಸಭೆಗೆ ಮೊದಲೇ ಮಾಹಿತಿ ನೀಡಿದ್ದರೆ ಕಸ ಸಂಗ್ರಹಕ್ಕೆ ವಾಹನ ವ್ಯವಸ್ಥೆ ಮಾಡಲಾಗುವುದು. ಕಸವನ್ನು ರಸ್ತೆ ಬದಿ ಹಾಕಿದಲ್ಲಿ ಅಂತಹವರಿಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಹೊಸಕೋಟೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಬಿಟಿ ಗೋವಿಂದ್, ನಂದಗುಡಿ ಪೊಲೀಸ್ ಇನ್ಸ್‌ಪೆಕ್ಟರ್‌ ಶಾಂತಾರಾಮ್, ಸೂಲಿಬೆಲೆ ಪೊಲೀಸ್ ಇನ್ಸ್‌ಪೆಕ್ಟರ್ ರವಿ, ತಿರುಮಲಶಟ್ಟಿಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಸುಂದರ್ ಹಾಗೂ ಅನುಗೊಂಡನಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಎಂ.ಗೋವಿಂದ್ ಹಾಗೂ ಮುಖಂಡರು ಹಾಜರಿದ್ದರು.

ಫೋಟೋ: 21 ಹೆಚ್‌ಎಸ್‌ಕೆ 3

ಹೊಸಕೋಟೆಯಲ್ಲಿ ಗಣಪತಿ ಹಾಗೂ ಈದ್ ಮಿಲಾದ್ ಹಬ್ಬ ಆಚರಣೆ ಪ್ರಯುಕ್ತ ಡಿವೈಎಸ್‌ಪಿ ಮಲ್ಲೇಶ್ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು.

PREV

Recommended Stories

ಮೈಸೂರು ಸ್ಯಾಂಡಲ್‌ ಸೋಪಿನ ಜಾಹೀರಾತಿಗೆ ₹48.88 ಕೋಟಿ
ವರದಾ-ಬೇಡ್ತಿ ನದಿ ಜೋಡಣೆ ಕೇಂದ್ರದ ಒಪ್ಪಿಗೆ: ಬೊಮ್ಮಾಯಿ