- ವಿಜೃಂಭಣೆಯಿಂದ ಆಚರಿಸಲು ತೀರ್ಮಾನ----ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ನಾರಾಯಣಗುರು ಮತ್ತು ವಿಶ್ವಕರ್ಮ ಜಯಂತಿಗಳನ್ನು ತಾಲೂಕು ನಾಡಹಬ್ಬಗಳ ಸಮಿತಿಯಿಂದ ಆಚರಣೆ ಮಾಡಲು ಎರಡು ಸಮುದಾಯಗಳ ಮುಖಂಡರು ನಿರ್ಧರಿಸಿ ಗೊತ್ತು ಮಾಡುವ ದಿನಾಂಕಗಳಂದು ವಿಜೃಂಭಣೆಯಿಂದ ಆಚರಣೆ ಮಾಡೋಣ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.ಪಟ್ಟಣದ ತಾಲೂಕು ಕಚೇರಿಯ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ನಡೆದ ವಿಶ್ವಕರ್ಮ ಮತ್ತು ನಾರಾಯಣಗುರು ಜಯಂತಿ ಆಚರಣೆಯ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮುದಾಯದವರು ಮತ್ತೊಮ್ಮೆ ಸಭೆ ನಡೆಸಿ ದಿನಾಂಕ ನಿಗದಿಪಡಿಸಿ ಎಂದರು.ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಸಂಘಟನೆಗಳ ವತಿಯಿಂದ ಆಚರಿಸುವ ಮಹನೀಯರು ಮತ್ತು ಸಾಧಕರ ಜಯಂತಿ ಕಾರ್ಯಕ್ರಮಗಳಲ್ಲಿ ಗೌರವಿಸುವವರಿಗೆ ಕಡ್ಡಾಯವಾಗಿ ಪ್ರಮಾಣ ಪತ್ರ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.ವಿಶ್ವಕರ್ಮ ಮತ್ತು ಈಡಿಗ ಸಮಾಜದ ಮುಖಂಡರು ಸಮುದಾಯ ಭವನ ನಿರ್ಮಾಣ ಮಾಡಿಸಿಕೊಡಬೇಕೆಂದು ಶಾಸಕರಿಗೆ ಮನವಿ ಮಾಡಿದಾಗ ಇದಕ್ಕೆ ಸಕಾತ್ಮಕವಾಗಿ ಸ್ಪಂದಿಸಿದ ಅವರು, ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅಗತ್ಯ ಅನುದಾನ ಕೊಡಿಸಿ ಭವನ ನಿರ್ಮಿಸಿಕೊಡುವ ಭರವಸೆ ನೀಡಿದರು.ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ವಿಶ್ವಕರ್ಮ ಜಯಂತಿ ಆಚರಣೆ ಮಾಡುವಾಗ ಸಮಾಜದ ಸಾಧಕರು ಮತ್ತು ಪ್ರತಿಭಾವಂತರನ್ನು ಗುರುತಿಸಿ ಗೌರವಿಸುವಾಗ ಅವರಿಗೆ ಪ್ತಶಂಸನಾ ಪತ್ರ ನೀಡುತ್ತಿಲ್ಲಾ ಆದ್ದರಿಂದ ಈ ಬಾರಿ ಕೊಡಬೇಕೆಂದು ಕೇಳಿದರು.ಪುರಸಭೆ ಮಾಜಿ ಸದಸ್ಯ ಕೆ.ಬಿ. ಸುಬ್ರಹ್ಮಣ್ಯ, ವಿಶ್ವಕರ್ಮ ಸಮಾಜದ ತಾಲೂಕು ಮಹಾಸಭಾದ ಅಧ್ಯಕ್ಷ ಪುಟ್ಟಣ್ಣ, ಉಪಾಧ್ಯಕ್ಷ ಪುಟ್ಟಸ್ವಾಮಿ, ತಾಲೂಕು ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಬಿ.ಡಿ. ರೇಣುಕಾಪ್ರಸನ್ನ, ನಿರ್ದೇಶಕ ಸಿ.ವಿ.ಮೋಹನ್ ಕುಮಾರ್, ವಿಶ್ವಕರ್ಮ ಸಮಾಜದ ಮುಖಂಡರಾದ ರಮೇಶ್, ವೇದಾಂತಾಚಾರ್, ಪ್ರಕಾಶಾಚಾರ್, ರಾಮಾಚಾರಿ, ತೇಜುಕುಮಾರ್, ವಿ. ದಿನೇಶ್, ಅರುಣ್ ಕುಮಾರ್, ಗ್ಯಾರಂಟಿ ಪ್ರಾಧಿಕಾರ ಸಮಿತಿ ಅಧ್ಯಕ್ಷ ಎಂ.ಎಸ್. ಮಹದೇವ್, ಉದಯಶಂಕರ್, ತಾಲೂಕು ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್, ರಾಜ್ಯ ರೈತಪರ್ವ ಸಂಘಟನೆಯ ಗೌರವಾಧ್ಯಕ್ಷ ಎಂ.ಜೆ. ಕುಮಾರ್, ವಕೀಲೆ ಪೂರ್ಣಿಮಾ, ತಹಸೀಲ್ದಾರ್ಜಿ. ಸುರೇಂದ್ರಮೂರ್ತಿ, ರುಕಿಯಾಬೇಗಂ, ತಾಪಂ ಇಒ ವಿ.ಪಿ. ಶಶಿಧರ್, ಬಿಇಇ ಆರ್. ಕೃಷ್ಣಪ್ಪ ಇದ್ದರು.