ಗ್ರಾಮೀಣ ಕೃಷಿಕರಿಗೆ ಸರ್ಕಾರ ಒತ್ತು ನೀಡಲಿ: ಚೆನ್ನೇಶ್

KannadaprabhaNewsNetwork | Published : Jul 6, 2024 12:49 AM

ಸಾರಾಂಶ

ಆನಂದಪುರ ಸಮೀಪದ ಇರುವ ಅಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾನಿಲಯದಲ್ಲಿ ಕೃಷಿ ವಿಜ್ಞಾನಿಗಳ ಮಹಾವಿದ್ಯಾಲಯ ಮತ್ತು ವಸತಿ ನಿಲಯಗಳ ವಾರ್ಷಿಕೋತ್ಸವ ಹಾಗೂ ಕೆಳದಿ ಕೃಷಿ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಆನಂದಪುರ

ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಕೃಷಿ ವಿಶ್ವವಿದ್ಯಾನಿಲಯ ತಾಯಿ ಇದ್ದ ಹಾಗೆ ಎಂದು ಶಿವಮೊಗ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊಫೆಸರ್ ಚೆನ್ನೇಶ್ ಹೊನ್ನಾಳಿ ತಿಳಿಸಿದರು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯ ಇರುವಕ್ಕಿಯಲ್ಲಿ ನಡೆದ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ವಸತಿ ನಿಲಯಗಳ ವಾರ್ಷಿಕೋತ್ಸವ ಹಾಗೂ ಕೆಳದಿ ಕೃಷಿ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಆಹಾರ ಉತ್ಪಾದನೆ ಅದಕ್ಕೆ ಕಾರಣವಾಗುವಂತಹ, ಸಂಶೋಧನೆ ಮಾಡುವಂತಹ ಕೃಷಿ ವಿಶ್ವವಿದ್ಯಾನಿಲಯ ಎಲ್ಲಾ ವಿಶ್ವವಿದ್ಯಾನಿಲಯಗಳಿಗೂ ತಾಯಿ ಇದ್ದ ಹಾಗೆ. ಜಗತ್ತಿನ ರೈತರು ಒಂದು ವರ್ಷಗಳ ಕಾಲ ತಾವು ಬೆಳೆಯುವಂತಹ ಬೆಳೆಗಳನ್ನು ಬೆಳೆಯದೇ ಇದ್ದರೆ ಮನುಕುಲವೇ ಉಳಿಯುವುದಿಲ್ಲ. ರೈತರು ತಾವು ಬೆಳೆದಂತಹ ಬೆಳೆಗೆ ಬೆಲೆ ಸಿಗದೇ ಇದ್ದಾಗ ಆತ್ಮಹತ್ಯೆಗೆ ಶರಣಾಗುತ್ತಾನೆ. ರೈತರು ಅಡಿಕೆ ಮತ್ತು ಮೆಕ್ಕೆಜೋಳವನ್ನು ಬೆಳೆಯುವುದನ್ನು ಬಿಟ್ಟರೆ ತರಕಾರಿ, ಶೇಂಗಾ, ರಾಗಿ, ಮುಂತಾದಹ ಮಿಶ್ರ ಬೆಳೆಗಳು ಬೆಳೆಯದೇ ಇರುವುದು ಕಾರಣವಾಗುತ್ತದೆ. ದೇಶದ ರೈತರನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಒಂದು ನಗರ ಭಾರತ, ಮತ್ತೊಂದು ಗ್ರಾಮೀಣ ಭಾರತ. ಗ್ರಾಮೀಣ ಭಾರತದಲ್ಲಿ ಕೃಷಿ ಅರಳುತ್ತೆ, ಕನ್ನಡ ಅರಳುತ್ತೆ, ಮಕ್ಕಳು ಕನ್ನಡದಲ್ಲಿ ಶಿಕ್ಷಣವನ್ನು ಕಲಿಯುತ್ತಾರೆ. ಆದರೆ ನಗರ ಭಾರತದಲ್ಲಿ ಶ್ರೀಮಂತರರಿದ್ದು ಮಕ್ಕಳು ಇಂಗ್ಲೀಷಿನಲ್ಲಿ ಕಲಿತು ವ್ಯಾಪಾರಸ್ಥರಾಗುತ್ತಾರೆ. ಗ್ರಾಮೀಣ ಭಾಗದಲ್ಲಿ ಕೃಷಿಕ ತನ್ನ ಜೀವನವನ್ನು ಕೃಷಿಗಾಗಿ ಮೀಸಲಾಡುತ್ತಾನೆ. ಇಂತಹ ಕೃಷಿಕರಿಗೆ ಸರ್ಕಾರ ಹೆಚ್ಚಿನ ಮಹತ್ವ ನೀಡಬೇಕು. ಅಲ್ಲದೆ ಪ್ರತಿಯೊಬ್ಬ ಕೃಷಿಕರು ಮಿಶ್ರಬೆಳೆ ಬೆಳೆಯುವಂತೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ನಂತರ ತರೀಕೆರೆ ತಾಲೂಕು ಉಪ ವಿಭಾಗಾಧಿಕಾರಿ ಡಾ. ಕಾಂತರಾಜು ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ನಿರ್ಧರಿಸಲು ಗುರಿ ಹೊಂದಿರಬೇಕು. ವಿದ್ಯಾರ್ಥಿಗ ಳು ತಮ್ಮ ಮುಂದಿನ ಉತ್ತಮ ಉಜ್ವಲ ಭವಿಷ್ಯಕ್ಕಾಗಿ ನಿಷ್ಠೆಯಿಂದ ಪ್ರಾಮಾಣಿಕವಾಗಿ ಶಿಕ್ಷಣವನ್ನು ಕಲಿಯಬೇಕು. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಶಿಕ್ಷಣ ಪಡೆದರೆ ತಮ್ಮ ಮುಂದಿನ ಜೀವನ ಸುಖಮಯವಾಗಿರಲು ಸಾಧ್ಯ. ಅಲ್ಲದೆ ಕೃಷಿ ವಿದ್ಯಾರ್ಥಿಗಳು ಅಂತಿಮ ವರ್ಷದ ಪದವಿಯ ಮುಗಿದ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವುದರ ಮೂಲಕ ಉನ್ನತ ಅಧಿಕಾರಿಗಳಾಗಲು ಸಾಧ್ಯ ಎಂದರು. ಕೆಳದಿ ಶಿವಪ್ಪ ನಾಯಕ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಸಿ ಜಗದೀಶ್, ವಿಸ್ತರಣಾ ನಿರ್ದೇಶಕರಾದ ಡಾ. ಕೆ. ಟಿ ಗುರುಮೂರ್ತಿ, ಡಿನ್ ವಿದ್ಯಾರ್ಥಿ ಕಲ್ಯಾಣ ಡಾ. ಎನ್. ಶಿವಶಂಕರ್, ಹಣಕಾಸು ನಿಯಂತ್ರಣಧಿಕಾರಿ ಸರೋಜಾ ಬಾಯಿ, ಗ್ರಂಥಪಾಲಕ ಡಾ. ಡಿ. ತಿಪ್ಪೇಶ್, ಡಾ. ಎಸ್‌.ಯು ಪಾಟೀಲ್, ಕುಲಸಚಿವ ಡಾ. ಕೆ ಸಿ ಶಶಿಧರ್ ಅಧ್ಯಕ್ಷತೆ ವಹಿಸಿದ್ದರು. ಇರುವಕ್ಕಿ ಕೆಳದಿ ಶಿವಪ್ಪನಾಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾನಿಲಯಕ್ಕೆ ರೈತರು ಬಳಸುತ್ತಿದ್ದ ಹಳೆಯ ಪರಿಕರಗಳನ್ನು ನೀಡಿದ ರೈತರಿಗೆ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

Share this article