ಕಾಂತರಾಜ ವರದಿ ಸಾರ್ವಜನಿಕ ಚರ್ಚೆಗೆ ಬರಲಿ: ಶಿವಸುಂದರ

KannadaprabhaNewsNetwork |  
Published : Dec 16, 2024, 12:46 AM IST
15ಕೆಡಿವಿಜಿ16-ದಾವಣಗೆರೆಯಲ್ಲಿ ಭಾನುವಾರ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಜಾಗೃತ ವೇದಿಕೆಯಿಂದ ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ ವರದಿ ಕುರಿತ ಚಿಂತನ-ಮಂಥನ ಕಾರ್ಯಕ್ರಮವನ್ನು ಸಂವಿಧಾನ ಪೀಠಿಕೆ ಓದುವ ಮೂಲಕ ಉದ್ಘಾಟಿಸಿದ ವಿಪ ಸದಸ್ಯ ಕೆ.ಅಬ್ದುಲ್ ಜಬ್ಬಾರ್. | Kannada Prabha

ಸಾರಾಂಶ

ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ ವರದಿ ಸಾರ್ವಜನಿಕ ಚರ್ಚೆಗೆ ಬರಬೇಕು. ವರದಿ ಜಾರಿ ಮಾಡುವುದು, ಬಿಡುವುದು ಆನಂತರ ಮುಖ್ಯವಾಗುವುದು ಎಂದು ಅಂಕಣಕಾರ ಶಿವಸುಂದರ ಅಭಿಪ್ರಾಯಪಟ್ಟಿದ್ದಾರೆ.

- ರೋಟರಿ ಬಾಲಭವನದಲ್ಲಿ ಚಿಂತನ-ಮಂಥನ ಕಾರ್ಯಕ್ರಮ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ ವರದಿ ಸಾರ್ವಜನಿಕ ಚರ್ಚೆಗೆ ಬರಬೇಕು. ವರದಿ ಜಾರಿ ಮಾಡುವುದು, ಬಿಡುವುದು ಆನಂತರ ಮುಖ್ಯವಾಗುವುದು ಎಂದು ಅಂಕಣಕಾರ ಶಿವಸುಂದರ ಅಭಿಪ್ರಾಯಪಟ್ಟರು.

ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಜಾಗೃತ ವೇದಿಕೆ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ ವರದಿ ಕುರಿತ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಂತರಾಜ ವರದಿ ಜಾರಿ ಹೋರಾಟದ ಜೊತೆಗೆ ಮೇಲ್ವರ್ಗದವರಿಗೆ ನೀಡಿರುವ ಮೀಸಲಾತಿ ವಿರುದ್ಧವೂ ಹೋರಾಟ ನಡೆಸಬೇಕಾಗಿದೆ. ಮೀಸಲಾತಿ ಜೊತೆಗೆ ಭದ್ರತೆ, ಆರೋಗ್ಯ, ಉದ್ಯೋಗ ಎಲ್ಲರಿಗೂ ಸಿಗಬೇಕು. ಮೀಸಲಾತಿಯಲ್ಲಿ ಸಮಾನತೆ ಕಲ್ಪಿಸುವ ಜೊತೆಗೆ ಭದ್ರತೆ, ಆರೋಗ್ಯ, ಉದ್ಯೋಗವು ಎಲ್ಲರಿಗೂ ಸಿಗಬೇಕು. ಮೀಸಲಾತಿಯಲ್ಲಿ ಸಮಾನತೆ ಕಲ್ಪಿಸುವ ಜೊತೆಗೆ ಸಂಪತ್ತಿನಲ್ಲಿ ಸಮಾನ ಕಲ್ಪಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಮುಸ್ಲಿಮರಿಗೆ ಧರ್ಮದ ಆಧಾರದಲ್ಲಿ ಮೀಸಲಾತಿಯೆಂದು ಹೇಳಿದ್ದಾರೆ. ಆದರೆ. ಚನ್ನಪ್ಪ ರೆಡ್ಡಿ ಆಯೋಗ ನೀಡಿದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ವರದಿ ಹಿನ್ನೆಲೆಯಲ್ಲಿ ಒಬಿಸಿ, ಮೀಸಲಾತಿ ನೀಡಲಾಗಿದೆ. ಧರ್ಮಾಧಾರಿತ ಮೀಸಲಾತಿ ಎಂಬುದು ಇಲ್ಲ. ಇದು ಮುಸ್ಲಿಮರ ಮೀಸಲಾತಿ ಕಸಿಯುವ ಹುನ್ನಾರವಾಗಿದೆ ಎಂದರು.

ಸಂವಿಧಾನ ಪೀಠಿಕೆ ಓದುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ವಿಪ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಮಾತನಾಡಿ, ಕಾಂತರಾಜ ಆಯೋಗದ ವರದಿ ಜಾರಿಗೆ ಸಿದ್ದರಾಮಯ್ಯಗೆ ಒಲವಿದೆ. ಅದರೆ, ಬಲಿಷ್ಠ ಸಮುದಾಯಗಳಿಂದ ತೀವ್ರ ಒತ್ತಡವಿದೆ. ನಮಗೆ ನ್ಯಾಯ ಸಿಗಬೇಕಾದರೆ ಮೊದಲು ಜಾಗೃತರಾಗಬೇಕು. ದೊಡ್ಡಮಟ್ಟದಲ್ಲಿ ಸಭೆ ನಡೆಯಬೇಕು. ತಾಲೂಕು, ಜಿಲ್ಲಾ ಮಟ್ಟದಲ್ಲಿಯೂ ಸಭೆ ನಡೆಸಲಾಗುವುದು ಎಂದರು.

ರಾಜ್ಯ ಅಲ್ಪಸಂಖ್ಯಾತ ಜಾಗೃತ ವೇದಿಕೆ ಅಧ್ಯಕ್ಷ ಅಬ್ದುಲ್ ಘನಿ ತಾಹೀರ್ ಮಾತನಾಡಿ, ಹಿಂದುಳಿದ ಸಮುದಾಯಗಳ ಸಾಮಾಜಿಕ ಸ್ಥಿತಿಗತಿ ಅಧ್ಯಯನಕ್ಕೆ ₹168 ಕೋಟಿ ವೆಚ್ಚದಲ್ಲಿ ವರದಿ ಸಿದ್ದವಾಗಿದೆ. ಅದರೆ, ಜಾರಿಗೆ ಮಾತ್ರ ಹಲವಾರು ಅಡ್ಡಿಗಳು ಬರುತ್ತಿವೆ. ಹಿಂದುಳಿದ ಸಮುದಾಯಗಳ ನಿಖರ ಅಂಕಿ-ಅಂಶಗಳನ್ನು ತಿಳಿಯಬೇಕಾದರೆ ಕಾಂತರಾಜ ವರದಿ ಜಾರಿ ಆಗಬೇಕು. ಈ ನಿಟ್ಟಿನಲ್ಲಿ ಹೋರಾಟಗಳು ನಡೆಯಬೇಕು ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸ ನ್ಮಾನಿಸಲಾಯಿತು. ನೆರಳು ಬೀಡಿ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ, ಬಿ.ಎಚ್.ಪರಶುರಾಮಪ್ಪ, ಎಂ.ಜಯಣ್ಣ, ವಕೀಲರಾದ ರಜ್ವಿ ಖಾನ್, ಅನೀಸ್ ಪಾಶ, ಕೆ.ಎಚ್.ಹನೀಫ್, ಲಿಯಾಖತ್ ಆಲಿ, ಬಾಷಾ ಸಾಬ್, ಆಯೂಬ್ ಖಾನ್, ಶಕೀಲ್ ಆಹಮ್ಮದ್, ಮೈನುದ್ದೀನ್, ಅಬ್ದುಲ್ ಸಮದ್, ಕರಿಬಸಪ್ಪ ಸೇರಿದಂತೆ ಇತರರು ಇದ್ದರು.

- - -

-15ಕೆಡಿವಿಜಿ16:

ಕಾರ್ಯಕ್ರಮವನ್ನು ವಿಪ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಸಂವಿಧಾನ ಪೀಠಿಕೆ ಓದುವ ಮೂಲಕ ಉದ್ಘಾಟಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ