ಕ್ಷತ್ರಿಯ ಸಮುದಾಯ ರಾಜಕೀಯವಾಗಿ ಅಭಿವೃದ್ಧಿಯಾಗಲಿ: ದೊಡ್ಡಬಸವನಗೌಡ ಬಯ್ಯಾಪೂರ

KannadaprabhaNewsNetwork | Published : Nov 10, 2024 1:50 AM
Follow Us

ಸಾರಾಂಶ

ಶ್ರಮಜೀವಿಗಳಾಗಿರುವ ಕ್ಷತ್ರಿಯ ಸಮುದಾಯದ ಜನರು ಶೈಕ್ಷಣಿಕ, ಸಾಮಾಜಿಕದ ಜೊತೆಗೆ ರಾಜಕೀಯವಾಗಿ ಅಭಿವೃದ್ಧಿ ಹೊಂದುವುದು ಅಗತ್ಯವಾಗಿದೆ.

ಸಹಸ್ರಾರ್ಜುನ ಮಹಾರಾಜರ ಜಯಂತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಶ್ರಮಜೀವಿಗಳಾಗಿರುವ ಕ್ಷತ್ರಿಯ ಸಮುದಾಯದ ಜನರು ಶೈಕ್ಷಣಿಕ, ಸಾಮಾಜಿಕದ ಜೊತೆಗೆ ರಾಜಕೀಯವಾಗಿ ಅಭಿವೃದ್ಧಿ ಹೊಂದುವುದು ಅಗತ್ಯವಾಗಿದೆ ಎಂದು ಕಾಂಗ್ರೆಸ್‌ ಯುವ ಮುಖಂಡ ದೊಡ್ಡಬಸವನಗೌಡ ಬಯ್ಯಾಪೂರ ಹೇಳಿದರು.

ಪಟ್ಟಣದ ಶಾಖಾಪುರ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಅಂಬಾ ಭವಾನಿ ದೇವಸ್ಥಾನದ ಹತ್ತಿರ ನಡೆದ ಸೋಮವಂಶ ಕ್ಷತ್ರಿಯ ಕುಲತಿಲಕ ಸಹಸ್ರಾರ್ಜುನ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ಷತ್ರಿಯ ಜನಾಂಗ ವ್ಯಾಪಾರ-ವಹಿವಾಟು ಮಾಡಿಕೊಂಡು ಜೀವನ ನಡೆಸುತ್ತಿರುವ ಸಮಾಜವಾಗಿದೆ. ಈಗ ನಿರ್ಮಾಣವಾಗುತ್ತಿರುವ ಅಂಬಾ ಭವಾನಿ ದೇವಸ್ಥಾನದ ಕಾರ್ಯಕ್ಕೆ ಅನುದಾನದ ಮೂಲಕ ಸಹಕಾರ ನೀಡಲಾಗುತ್ತದೆ ಎಂದರು.

ಸಮಾಜದ ಅಧ್ಯಕ್ಷ ರವಿಂದ್ರ ಬಾಕಳೆ ಮಾತನಾಡಿ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದ ನಮ್ಮ ಸಮಾಜದವರಿಗೆ ಮೂಲವಾಗಿ ಶಿಕ್ಷಣದ ಅವಶ್ಯಕತೆ ಇದೆ. ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಒಳ್ಳೆಯ ನಾಗರಿಕರನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.

ವಾಸವಿ ದೇವಸ್ಥಾನ ಆವರಣದಿಂದ ಬೈಕ್ ರ್‍ಯಾಲಿ ಆರಂಭಗೊಂಡು ನಂತರ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಹಸ್ರಾರ್ಜುನ ಮಹಾರಾಜರ ಜಯ ಘೋಷಣೆ ಕೂಗುತ್ತಾ ಸಾಗಿ ನಂತರ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಶ್ರೀ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಕಾರ್ಯ ನಡೆಯಿತು. ಬಳಿಕ ಸಾಯಂಕಾಲದವರೆಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಇದೇ ಸಂದರ್ಭ ಡಾ. ರವಿಕುಮಾರ್ ದಾನಿ, ವಿಷ್ಣು ಅರವಟಗಿ, ಕವಿತಾಬಾಯಿ ದಾನಿ ಸಾಧನೆಗೆ ಸನ್ಮಾನ ಮಾಡಲಾಯಿತು. ಸಮಾಜದ ಗೌರವಾಧ್ಯಕ್ಷ ಪರಶುರಾಮ ನಿರಂಜನ, ಉಪಾಧ್ಯಕ್ಷ ರಾಜಣಸಾ ಕಾಟವಾ, ಕೇಶವ ಕಾಟವಾ, ವೆಂಕಟೇಶ ಕಾಟವಾ, ಪರಶುರಾಮ ಪವಾರ, ವಿಠ್ಠಲ ದಲಬಂಜನ, ಅನಿಲ್ ರಂಗರೇಜಿ, ಡಾ. ನಾಗರಾಜ ರಾಜೊಳ್ಳಿ, ಕಿರಣ ದಾನಿ, ಪ್ರಭಾಕರ ಸಿಂಗ್ರಿ, ಶ್ರೀನಿವಾಸ ಬಾಕಳೆ, ಮಹಿಳಾ ಸಂಘದ ಅನಿತಾ ಪಿ.ಸಿಂಗ್ರಿ, ಲಕ್ಷ್ಮೀ ಬಾಯಿ ಕಾಟವಾ, ರೂಪಾ ಬಾಕಳೆ, ಅರುಣಾ ಮಿಸ್ಕಿನ್ ಸೇರಿದಂತೆ ತರುಣ ಸಂಘದ ಶಂಕರ ರಾಯಬಾಗಿ, ಆನಂದ ಸಿಂಗ್ರಿ, ನಾರಾಯಣ ಸಿಂಗ್ರಿ, ಸಂತೋಷ ಬಾಕಳೆ, ಶಿವು ಮಿಸ್ಕಿನ್ ಅನೇಕರಿದ್ದರು.