ರಾಣಿಬೆನ್ನೂರು: ಯುವಕರು ದೇಶದ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಬಲಪಡಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಸಂಸ್ಥೆ 50 ವರ್ಷ ಪೂರೈಸಿರುವುದು ಸುಲಭದ ದಾರಿಯಲ್ಲ. ಮಕ್ಕಳಿಗೆ ಬದ್ರ ಬುನಾದಿ ಹಾಕಿರುವುದು ಹೆಮ್ಮೆಯ ಸಂಗತಿ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಈ ಸಂಸ್ಥೆ ಕಟ್ಟುವಲ್ಲಿ ಅನೇಕ ಶ್ರಮವಿದೆ ಎಂದರು.
ಯುವಕರು ದೇಶದ ವರ್ತಮಾನ ತಿದ್ದುವ ಜೊತೆಗೆ ಮುಂದೆ ಯಾವ ರೀತಿ ಇರಬೇಕು ಎಂದು ಕಸನು ಕಾಣಬೇಕಿದೆ. ವಿಶೇಷವಾಗಿ ದೇಶ ಕಟ್ಟುವಲ್ಲಿ ಯುವಜನಾಂಗದ ಪಾತ್ರ ಅಪಾರವಾಗಿದೆ. ಯಾವುದೇ ಜಾತಿ, ಧರ್ಮವಿರಲಿ ಎಲ್ಲರೂ ಒಗ್ಗೂಡಿಸುವ ಕೆಲಸ ಯುವಕರು ಮಾಡಬೇಕಿದೆ. ದೇಶದ ಸಾಂಸ್ಕೃತಿಕ ಪರಂಪರೆಯನ್ನು ಭದ್ರಪಡಿಸಬೇಕು. ಮನುಷ್ಯನ ಜನ್ಮ ವಿಶೇಷವಾಗಿದ್ದು, ಒಳ್ಳೆಯ ಕೆಲಸ ಮಾಡುವ ಮೂಲಕ ಸಾರ್ಥಕ ಬದುಕು ಕಟ್ಟಬೇಕು ಎಂದರು.ಯಾವುದೇ ಕ್ಷೇತ್ರವಿರಲಿ ವಿಶೇಷ ಸಾಧನೆ ಮಾಡಿರುವ ಹಿಂದೆ ಅಪಾರ ಶ್ರಮವಿದೆ. ನಾವು ಯೋಚನೆ ಮಾಡುತ್ತೇವೆ. ಆ ರೀತಿ ಆಗುತ್ತೇವೆ. ಮನುಷ್ಯನಿಗೆ ಸಾಧನೆಯ ಗುರಿ ಇದ್ದರೆ ಮುಂದೆಬರಲು ಸಾಧ್ಯವಿದೆ. ಕೇವಲ ಗುರಿ ಇದ್ದರೆ ಸಾಲದು ಗುರಿ ತಲುಪಲು ಹೋರಾಟ ಮಾಡಬೇಕು. ಕಠಿಣ ಪರಿಶ್ರಮವಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.