ಹುಳಿಯಾರು ರಸ್ತೆ ಅಗಲೀಕರಣ ಸಮರ್ಪಕವಾಗಿರಲಿ

KannadaprabhaNewsNetwork | Published : Feb 29, 2024 2:02 AM

ಸಾರಾಂಶ

ನಗರದ ಹುಳಿಯಾರು ರಸ್ತೆಯ ಚಾನಲ್‌ನಿಂದ ಸಾಗರ್ ರೆಡ್ಡಿ ಹೋಟೆಲ್‌ವರೆಗೆ ಸಮರ್ಪಕವಾಗಿ ರಸ್ತೆ ಅಗಲೀಕರಣ ಮಾಡಬೇಕೆಂದು ಆಗ್ರಹಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬುಧವಾರ ನಗರಸಭೆಗೆ ಮನವಿ ಸಲ್ಲಿಸಲಾಯಿತು.

ದಲಿತ - ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಗರಸಭೆಗೆ ಮನವಿ

ಕನ್ನಡಪ್ರಭ ವಾರ್ತೆ ಹಿರಿಯೂರು

ನಗರದ ಹುಳಿಯಾರು ರಸ್ತೆಯ ಚಾನಲ್‌ನಿಂದ ಸಾಗರ್ ರೆಡ್ಡಿ ಹೋಟೆಲ್‌ವರೆಗೆ ಸಮರ್ಪಕವಾಗಿ ರಸ್ತೆ ಅಗಲೀಕರಣ ಮಾಡಬೇಕೆಂದು ಆಗ್ರಹಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬುಧವಾರ ನಗರಸಭೆಗೆ ಮನವಿ ಸಲ್ಲಿಸಲಾಯಿತು.

ಈ ಹಿಂದೆ ರಸ್ತೆ ಅಗಲೀಕರಣ ವೇಳೆ ನಗರಸಭೆಯವರು ನಂಜಯ್ಯನಕೊಟ್ಟಿಗೆಯ ಬಳಿ ರಸ್ತೆ ಅಕ್ಕಪಕ್ಕದ ಎಸ್ ಸಿ, ಎಸ್ ಟಿ ಜನಾಂಗಕ್ಕೆ ಸೇರಿದ ಬಡವರ ಮನೆಗಳನ್ನು ಒಡೆದು ಹಾಕಿದ್ದರು. ರಸ್ತೆಯ ಮಧ್ಯ ಭಾಗದಿಂದ ಒಂದೊಂದು ಕಡೆ 21 ಆಡಿಯಂತೆ ರಸ್ತೆ ನಿರ್ಮಿಸಿ ಇದೀಗ ಹುಳಿಯಾರು ರಸ್ತೆಯ ಚಾನಲ್‌ನಿಂದ ಸಾಗರ್ ರೆಡ್ಡಿ ಹೋಟೆಲ್ ವರೆಗೆ ರಸ್ತೆ ಮಧ್ಯ ಭಾಗದಿಂದ ಒಂದೊಂದು ಕಡೆ 12 ಆಡಿಯಂತೆ ರಸ್ತೆ ಅಗಲೀಕರಣ ಕಾಮಗಾರಿ ನಡೆಸಲಾಗುತ್ತಿದೆ.

ರಸ್ತೆ ಪಕ್ಕದ ವಿದ್ಯುತ್ ಕಂಬಗಳನ್ನು ಸ್ಥಳಾoತರ ಮಾಡದೇ, ಚರಂಡಿ ನಿರ್ಮಿಸದೆ, ಪಾದಚಾರಿ ರಸ್ತೆ ನಿರ್ಮಿಸದೆ ಮೊದಲಿದ್ದಂತಹ ಫುಟ್‌ಪಾತನ್ನೇ ರಸ್ತೆಯನ್ನಾಗಿಸಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ರಸ್ತೆ ಕಿರಿದಾಗಿ ವಾಹನ ದಟ್ಟಣೆ ಹೆಚ್ಚಾಗಿ ಅಪಘಾತಗಳು ಸಂಭವಿಸಬಹುದಾಗಿದೆ.ಆದುದರಿಂದ ಈಗ ಕೈಗೆತ್ತಿಕೊಂಡಿರುವ ಕಾಮಗಾರಿಯನ್ನು ಸ್ಥಗಿತಗೊಳಿಸಿ ರಸ್ತೆ ಮಧ್ಯ ಭಾಗದಿಂದ ಒಂದು ಕಡೆ 21 ಆಡಿಯಂತೆ 42 ಅಡಿ ರಸ್ತೆ ನಿರ್ಮಿಸಬೇಕು. ಒಂದು ವೇಳೆ ರಸ್ತೆ ಅಗಲೀಕರಣ ಸರಿಯಾಗಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಒಕ್ಕೂಟದ ಸದಸ್ಯರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ರಾಜ್ಯ ಕಾರ್ಯದರ್ಶಿ ಕೆ. ರಾಮಚಂದ್ರ, ಮಹಾನಾಯಕ ದಲಿತ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಕೆಪಿ ಶ್ರೀನಿವಾಸ ಮೂರ್ತಿ, ಭಾರತೀಯ ದಲಿತ ಸಂಘರ್ಷ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ತಿಮ್ಮರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿ ಘಾಟ್ ರವಿ, ರಾಘವೇಂದ್ರ, ಚಂದ್ರಪ್ಪ ಘಾಟ್, ಶ್ರೀಧರ್ ಘಾಟ್, ಸಾಧಿಕ್, ಒಂಕಾರ್ ಮಟ್ಟಿ, ಕಣುಮೇಶ್, ಹಿಂಡಸಕಟ್ಟೆ ಮೋಹನ್, ಮಹoತೇಶ್, ರಂಗಸ್ವಾಮಿ, ರಾಜನಾಯ್ಕ ಮುಂತಾದವರು ಹಾಜರಿದ್ದರು. -------OOOO-----ಹಿರಿಯೂರು ನಗರಸಭೆ ಕಚೇರಿಗೆ ಬುಧವಾರ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಹುಳಿಯಾರು ರಸ್ತೆ ಅಗಲೀಕರಣ ಕಾಮಗಾರಿ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

Share this article