ದೇಶಾದ್ಯಂತ ಜನಸೇವೆಗೆ ಶ್ರಮಿಸುತ್ತಿರುವ ಲಯನ್ಸ್‌ ಕ್ಲಬ್‌

KannadaprabhaNewsNetwork | Published : Jul 29, 2024 12:48 AM

ಸಾರಾಂಶ

ಲಯನ್ಸ್ ಕ್ಲಬ್‌ ಸಾಮಾಜಿಕ ಸೇವೆಯಲ್ಲಿ ಅಂತರ ರಾಷ್ಟ್ರೀಯ ಸಂಸ್ಥೆಯಾಗಿದೆ. ಭಾರತದ ಎಲ್ಲ ಭಾಗಗಳಲ್ಲಿಯೂ ತನ್ನ ಕಾರ್ಯಕ್ಷೇತ್ರ ವ್ಯಾಪಿಸಿಕೊಂಡು ಜನಸೇವೆಗೆ ಶ್ರಮಿಸುತ್ತಿದೆ ಎಂದು ಪ್ರತಿಜ್ಞಾವಿಧಿ ಬೋಧಕರಾದ ಲಯನ್ ಸಪ್ನಾ ಸುರೇಶ್ ಚನ್ನಗಿರಿಯಲ್ಲಿ ಹೇಳಿದ್ದಾರೆ.

- ನೂತನ ಅಧ್ಯಕ್ಷ ಸುರೇಶ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಸಪ್ನಾ ಸುರೇಶ್‌ - - - ಕನ್ನಡಪ್ರಭ ವಾರ್ತೆ, ಚನ್ನಗಿರಿ

ಲಯನ್ಸ್ ಕ್ಲಬ್‌ ಸಾಮಾಜಿಕ ಸೇವೆಯಲ್ಲಿ ಅಂತರ ರಾಷ್ಟ್ರೀಯ ಸಂಸ್ಥೆಯಾಗಿದೆ. ಭಾರತದ ಎಲ್ಲ ಭಾಗಗಳಲ್ಲಿಯೂ ತನ್ನ ಕಾರ್ಯಕ್ಷೇತ್ರ ವ್ಯಾಪಿಸಿಕೊಂಡು ಜನಸೇವೆಗೆ ಶ್ರಮಿಸುತ್ತಿದೆ ಎಂದು ಪ್ರತಿಜ್ಞಾವಿಧಿ ಬೋಧಕರಾದ ಲಯನ್ ಸಪ್ನಾ ಸುರೇಶ್ ಹೇಳಿದರು.

ಶನಿವಾರ ಸಂಜೆ ಪಟ್ಟಣದ ರಾಮ ಮನೋಹರ ಲೋಹಿಯಾ ಭವನದಲ್ಲಿ ಚನ್ನಗಿರಿ ಚನ್ನಮ್ಮಾಜಿ ಲಯನ್ಸ್ ಕ್ಲಬ್ ವತಿಯಿಂದ ಏರ್ಪಡಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಲಯನ್ಸ್ ಕ್ಲಬ್ ದೇಶದಲ್ಲಿನ ಅಶಕ್ತ ಜನರಿಗೆ ತುರ್ತಾಗಿ ಬೇಕಾದ ಸೌಲಭ್ಯ, ಸರ್ಕಾರಿ ಶಾಲಾ- ಕಾಲೇಜುಗಳಿಗೆ ಕುಡಿಯುವ ನೀರು, ಪೀಠೋಪಕರಣಗಳನ್ನು ನೀಡುವ ಜೋತೆಗೆ, ಉಚಿತ ಆರೋಗ್ಯ ಶಿಬಿರಗಳು, ರಕ್ತದಾನ ಶಿಬಿರಗಳನ್ನು ಮಾಡುತ್ತ ಬಡವರ ಸೇವೆ ಮಾಡುತ್ತಿದೆ ಎಂದರು.

ನೂತನ ಅಧ್ಯಕ್ಷ ಆರ್.ಎಸ್.ಸುರೇಶ್ ಮಾತನಾಡಿ, ಸೇವಾ ಮನೋಭಾವನೆ ಇರುವ ಎಲ್ಲರೂ ಈ ಸೇವಾ ಸಂಸ್ಥೆಗೆ ಬಂದು ಸೇವೆ ಮಾಡಲು ಉತ್ತಮವಾದ ಅವಕಾಶಗಳಿವೆ. ಈ ಲಯನ್ಸ್ ಕ್ಲಬ್‌ಗೆ ಹೆಚ್ಚಿನ ಜನರು ಸದಸ್ಯರಾಗಿ ಸಾಮಾಜಿಕ ಸೇವೆ ಮಾಡಲು ಮುಂದೆ ಬರಬೇಕು ಎಂದು ತಿಳಿಸಿದರು.

ಈ ಹಿಂದೆ ಕ್ಲಬ್ ಅಧ್ಯಕ್ಷರಾಗಿದ್ದ ಪ್ರಕಾಶ್ ಅವರು 2024- 2025ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಆರ್.ಎಸ್. ಸುರೇಶ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭ ಲಯನ್ಸ್ ಕ್ಲಬ್ ಪ್ರಮುಖರಾದ ಮಹೇಶ್ ಕುಮಾರ್ ಉಪಸ್ಥಿತರಿದ್ದರು. ಪ್ರಕಾಶ್ ಸ್ವಾಗತಿಸಿದರು, ಪ್ರವೀಣ್ ಕುಮಾರ್ ವಂದಿಸಿದರು.

ನೇಮಕ:

ನೂತನ ಕಾರ್ಯದರ್ಶಿಯಾಗಿ ಎಚ್.ಕೃಷ್ಣಮೂರ್ತಿ, ಖಜಾಂಚಿಯಾಗಿ ನಾಗರಾಜ ನಾಡಿಗ್, ಲಯನ್ ಟೀಮರ್ ಆಗಿ ಶರಬಲಿಂಗಮೂರ್ತಿ, ಟೈಲ್ ಸಿಸ್ಟರ್ ಸುಮತೀಂದ್ರ, ಮೆಂಬರ್ ಆಫ್ ಕಮಿಟಿ ಛೇರ್ಮನ್ ಆಗಿ ಜವಳಿ ಮಹೇಶ್, ಕ್ರೀಡಾ ಪ್ರತಿನಿಧಿಯಾಗಿ ಜ್ಯೋತಿ ಪ್ರಸಾದ್, ಜಿ.ಬಿ.ನರೇಂದ್ರ, ಕ್ಲಬ್ ಛೇರ್ ಪರ್ಸನ್ ಆಗಿ ಎಂ.ಎನ್.ಪ್ರಕಾಶ್, ಮುಖ್ಯ ಕಾರ್ಯನಿರ್ವಾಹಕರಾಗಿ ಶಿವಕುಮಾರ್, ಹಾಲಸ್ವಾಮಿ ನೇಮಕಗೊಂಡರು.

- - - -28ಕೆಸಿಎನ್‌ಜಿ1:

ಚನ್ನಗಿರಿ ತಾಲೂಕು ಚನ್ನಮ್ಮಾಜಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಆರ್.ಎಸ್.ಸುರೇಶ್ ಅವರಿಗೆ ಈ ಹಿಂದೆ ಕ್ಲಬ್ ಅಧ್ಯಕ್ಷರಾಗಿದ್ದ ಪ್ರಕಾಶ್‌ ಅಧಿಕಾರ ಹಸ್ತಾಂತರಿಸಿದರು.

Share this article