ಕನ್ನಡಪ್ರಭ ವಾರ್ತೆ ನಾಪೋಕ್ಲು
ಸ್ಥಳೀಯ ಲಯನ್ಸ್ ಮತ್ತು ಲಿಯೋ ಕ್ಲಬ್ ನ 2024- 25ರ ಸಾಲಿನ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ಇಲ್ಲಿಯ ಕೊಡವ ಸಮಾಜದಲ್ಲಿ ನಡೆಯಿತು.ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ, ಖಜಾಂಚಿಯಾಗಿ ಕಾಂಡಂಡ ರೇಖಾ ಪೊನ್ನಣ್ಣ, ಲಿಯೋ ನೂತನ ಅಧ್ಯಕ್ಷರಾಗಿ ಅಂಕುರ್ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಉಮ್ಮು ಹಬೀಬ , ಕಾರ್ಯದರ್ಶಿಯಾಗಿ ನವಲ್ ನಾಚಪ್ಪ ಬಿ.ಸಿ ಹಾಗೂ ಖಜಾಂಚಿಯಾಗಿ ದ್ರುವ್ ದೇವಯ್ಯ ಆಯ್ಕೆಯಾದರು.
ಯನ್ಸ್ ಕ್ಲಬ್ ಅಧ್ಯಕ್ಷ ಕನ್ನಂಬಿರ ಸುಧಿ ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ಜರುಗಿದಕಾರ್ಯಕ್ರಮದಲ್ಲಿ ಬಡ್ಡೀರ ನಳಿನಿ ಪೂವಯ್ಯ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು. ಮಂಗಳೂರು ಲಯನ್ಸ್ ಜಿಲ್ಲೆ ಉಪರಾಜ್ಯಪಾಲ ಕುಡುಪಿ ಅರವಿಂದ್ ಶೆಣೈ ಪದಗ್ರಹಣ ಅಧಿಕಾರಿಗಳಾಗಿ ಪಾಲ್ಗೊಂಡು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಖಜಾಂಚಿ ಅಪ್ಪುಮಣಿಯoಡ ಬನ್ಸಿ ಭೀಮಯ್ಯ, ನಿರ್ಗಮಿತ ಕಾರ್ಯದರ್ಶಿ ಮಾದೆಯoಡ ಬಿ ಕುಟ್ಟಪ್ಪ, ಪ್ರಾಂತಿಯ ಅಧ್ಯಕ್ಷ ಕುಟ್ಟಂಡ ಕನ್ನಿಕಾ ಅಯ್ಯಪ್ಪ, ವಲಯ ಅಧ್ಯಕ್ಷ ಕನ್ನಂಡ ಬೊಳ್ಳಪ್ಪ, ನಾಪೋಕ್ಲು ಲಿಯೋ ಸಂಸ್ಥೆಯ ನಿರ್ಗಮಿತ ಅಧ್ಯಕ್ಷಕೆಟೋಳಿರ ಗಾಯನ ಗೌರಮ್ಮ, ಹಾಗೂ ಲೈನ್‌ನ ಕೆಟೋಳಿರ ಎಸ್ ಕುಟ್ಟಪ್ಪ, ಕೋಟೆರ ಡಾ.ಪಂಚಮ್ ತಿಮ್ಮಯ್ಯ ,ಕುಡಿಯೋಳಂಡ ರಮೇಶ್ ಮುದ್ದಯ್ಯ, ಪಿಆರ್‌ಒ ಮುಕ್ಕಾಟಿರ ವಿನಯ್, ಕೆಟೋಳಿರ ರತ್ನ ಚರ್ಮಣ, ಕುಡಿಯೋಳಂಡ ಗಣೇಶ್ ಮುತ್ತಪ್ಪ, ಅಪ್ಪರಂಡ
ಸುಭಾಷ್ ತಿಮ್ಮಯ್ಯ, ಶಿಚಾಳಿಯಂಡ ಲವ ಕಾಳಪ್ಪ, ಕಾಡಾಂಡ ಪೊನ್ನಣ್ಣ, ಕುಂಚೆಟ್ಟಿರ ಸುದ್ದಿ, ಅಪ್ಪಚೆಟ್ಟೋಳಂಡ ನವೀನ್, ವಸಂತ, ಮಂದಪಂಡ ಪುಷ್ಪ ಅಪ್ಪಚ್ಚು, ತಿಮ್ಮಯ್ಯ, ಅಪ್ಪಚ್ಚು, ಮಂದಪ್ಪ ಇದ್ದರು.ಇದಕ್ಕೂ ಮುನ್ನ ಅಂಕುರ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನ ಆಚರಿಸಲಾಯಿತು.