ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಮದ್ದೂರು ಕ್ರೀಡಾ ಬಳಗದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ 2024 - 25 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಲಿಂಗನದೊಡ್ಡಿ ರಾಮಕೃಷ್ಣ ಮತ್ತು ತಂಡದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು. ಮನುಕುಲದ ಸೇವೆಯೇ ತನ್ನ ಉದ್ದೇಶ ಎಂದು ಕಾರ್ಯಯೋನ್ಮುಖವಾಗಿರುವ ಲಯನ್ಸ್ ಸಂಸ್ಥೆ ಸೇವೆ ಮಾಡುವುದರಲ್ಲಿ ಮಾದರಿಯಾಗಿದೆ. ಸಂಸ್ಥೆ ಸಮಾಜಮುಖಿಯಾಗಿ ಮಾನವೀಯ ನೆಲಗಟ್ಟಿನ ಮೇಲೆ ಕೆಲಸ ಮಾಡುತ್ತಿದೆ. ನಾವುಗಳು ಸಂಪಾದಿಸಿದ ಹಣದಲ್ಲಿ ಅಲ್ಪ ಹಣವನ್ನು ಸಮಾಜ ಸೇವೆಗೆ ಮೀಸಲಿಡಿಸಿದೆ ಎಂದರು.
ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದ ಎರಡನೇ ಜಿಲ್ಲಾ ರಾಜ್ಯಪಾಲ ಎಸ್. ಮತಿದೇವಕುಮಾರ್ ಮಾತನಾಡಿ, ರಾಜ್ಯದ ಸುಮಾರು 2 ಸಾವಿರ ಲಯನ್ಸ್ ಸಂಸ್ಥೆಗಳ ಸಹಯೋಗದಲ್ಲಿ ಮಹಿಳಾ ಸ್ವಾವಲಂಬನೆ, ಮಕ್ಕಳ ಆರೋಗ್ಯ, ಶೈಕ್ಷಣಿಕ ಅಭಿವೃದ್ಧಿ ಮತ್ತು ವಿಕಲಚೇತನ ರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಂಸ್ಥೆ ಕೆಲಸ ಮಾಡುತ್ತಿದೆ ಎಂದರು.ಕಾರ್ಯಕ್ರಮವನ್ನು ಜಿಲ್ಲಾ ಸಂಪುಟ ಸಲಹೆಗಾರ ಕೆ. ದೇವೇಗೌಡ ಉದ್ಘಾಟಿಸಿದರು.ಮಲ್ಟಿಪಲ್ ಕೌನ್ಸಿಲ್ ಚೇರ್ಮನ್ ಡಾ.ಎನ್. ಕೃಷ್ಣೆಗೌಡ, ಅಂತಾರಾಷ್ಟ್ರೀಯ ನಿರ್ದೇಶಕ ಎಸ್. ರಾಮಚಂದ್ರನ್, ವಳೆಗೆರೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ವಿ.ಆಶಾರಾಣಿ. ಡಾ.ಎ.ವಿ.ಉಮೇಶ್ ಅವರುಗಳನ್ನು ಅಭಿನಂದಿಸಲಾಯಿತು.