ಪತ್ರಿಕೋದ್ಯಮದ ಮುಕುಟದಂತಿದ್ದ ಸಾಹಿತಿ ಡಿವಿಜಿ

KannadaprabhaNewsNetwork | Published : Mar 18, 2024 1:48 AM

ಸಾರಾಂಶ

ವೃತ್ತ ಪತ್ರಿಕೆಗಳು ಸಮಾಜದ ಕಣ್ಣು, ಕಿವಿ, ಬಾವಿ, ಮೂಗು ಸೇರಿದಂತೆ ಪಂಚೇಂದ್ರಿಯಗಳು ಇದ್ದಂತೆ ಇರಬೇಕು, ಸಮಾಜವನ್ನು ಸದಾ ಕಾಲ ಯೋಧರಂತೆ ಸಂರಕ್ಷಿಸುವಂತ ಜವಾಬ್ದಾರಿ ಪ್ರತಿಯೊಬ್ಬ ಪತ್ರಕರ್ತರ ಮೇಲೆ ಇದೆ ಎಂಬುವುದನ್ನು ಮರೆಯಬಾರದು

ಕನ್ನಡಪ್ರಭ ವಾರ್ತೆ ಕೋಲಾರ

ಮುಳಬಾಗಿಲು ತಾಲೂಕಿನ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ(ಡಿ.ವಿ.ಜಿ.) ರಾಜ್ಯದ ಪ್ರಸಿದ್ಧ ಸಾಹಿತಿ ಹಾಗೂ ಪತ್ರಕರ್ತರು, ಅವರು ಪತ್ರಿಕೋದ್ಯಮ ಉದರದ ಪೋಷಣೆಗಾಗಿ ಅವಲಂಬಿಸಿದ್ದರೂ ತಮ್ಮ ನೈತಿಕತೆ ಎಂದು ಬಿಟ್ಟು ಕೊಟ್ಟಿರಲಿಲ್ಲ, ಅವರು ರಚಿಸಿದ ಮಂಕು ತಿಮ್ಮನ ಕಗ್ಗ ಭಗವದ್ಗೀತೆಯಷ್ಟೇ ಅರ್ಥಪೂರ್ಣವಾಗಿ ಎಂದು ಜಿಲ್ಲಾ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್ ಅಭಿಪ್ರಾಯಪಟ್ಟರು.

ನಗರದ ಪತ್ರಕರ್ತರ ಭವನದಲ್ಲಿ ಡಿ.ವಿ.ಗುಂಡಪ್ಪನವರ ೧೩೭ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಪುಷ್ಪನಮನ ಅರ್ಪಿಸಿ ಮಾತನಾಡಿ, ಡಿ.ವಿ.ಜಿ ಪ್ರಥಮವಾಗಿ ರಾಜ್ಯದ ಪತ್ರಕರ್ತರನ್ನು ಸಂಘಟಿಸಿ ಪತ್ರಕರ್ತರ ಸಂಘವನ್ನು ಸ್ಥಾಪಿಸಿದ ಸಂಸ್ಥಾಪಕರಾಗಿ ಪತ್ರಿಕೋದ್ಯಮಕ್ಕೆ ಮಾರ್ಗದರ್ಶಕರಾಗಿದ್ದರು ಎಂದರು.

ಪತ್ರಕರ್ತರಿಗೆ ದಾರಿ ದೀಪ

೧೯೨೮ರಲ್ಲಿ ಮೈಸೂರಿನಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನ ಮಾಡಿ ತಾವು ರಚಿಸಿದ ವೃತ್ತ ಪತ್ರಿಕೆ ಪುಸ್ತಕ ಬೆಂಗಳೂರಿನ ಪಬ್ಲಿಕ್ ಹೌಸ್‌ನ ಸಮಾರಂಭದಲ್ಲಿ ಬಿಡುಗಡೆ ಮಾಡಿದರು. ಕಳೆದ ೯೬ ವರ್ಷಗಳ ಹಿಂದೆ ಬರೆದಿದ್ದ ವೃತ್ತ ಪತ್ರಿಕೆ ಇಂದಿಗೂ ಪತ್ರಕರ್ತರಿಗೆ ಮಾರ್ಗಸೂಚಿಯಾಗಿದೆ, ಅವರ ಪತ್ರಿಕಾ ವೃತ್ತಿಯ ಮೂಲ ಸಿದ್ಧಾಂತಗಳು ನಮಗೆ ದಾರಿ ದೀಪವಾಗಿದೆ ಅವರು ತೋರಿದ ಮಾರ್ಗದರ್ಶನದಲ್ಲಿ ನಾವು ಮುಂದುವರೆದಾಗ ಮಾತ್ರ ಪತ್ರಿಕಾ ವೃತ್ತಿಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ತನ್ನಿಂದಲೇ ಎಲ್ಲವೂ ಎಂಬ ಭಾವನೆಗಳನ್ನು ತೊರೆದು ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ವೃತ್ತ ಪತ್ರಿಕೆಗಳು ಸಮಾಜದ ಕಣ್ಣು, ಕಿವಿ, ಬಾವಿ, ಮೂಗು ಸೇರಿದಂತೆ ಪಂಚೇಂದ್ರಿಯಗಳು ಇದ್ದಂತೆ ಇರಬೇಕು, ಸಮಾಜವನ್ನು ಸದಾ ಕಾಲ ಯೋಧರಂತೆ ಸಂರಕ್ಷಿಸುವಂತ ಜವಾಬ್ದಾರಿ ಪ್ರತಿಯೊಬ್ಬ ಪತ್ರಕರ್ತರ ಮೇಲೆ ಇದೆ ಎಂಬುವುದನ್ನು ಮರೆಯಬಾರದು ಎಂದರಲ್ಲದೆ, ಡಿ.ವಿ.ಜಿ ರಚಿಸಿದ ಕೆಲವು ಕವಿತೆಗಳನ್ನು ವಾಚಿಸಿದರು.

ಡಿವಿಜಿ ಸಾಧನೆ ಅವಿಸ್ಮರಣೀಯ

ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಂ.ಜಿ. ಪ್ರಭಾಕರ ಮಾತನಾಡಿ, ಡಿ.ವಿ.ಜಿ ಪತ್ರಿಕೋದ್ಯಮದಲ್ಲಿ ಮಾಡಿದ ಸಾಧನೆಯು ಅವಿಸ್ಮರಣೀಯ ಅವರು ತೋರಿದ ಮಾರ್ಗದರ್ಶನದಲ್ಲಿ ಇಂದಿನ ಪತ್ರಕರ್ತರು ಮುಂದುವರೆಯಬೇಕು ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ವಿ. ಮುನಿರಾಜು ಮಾತನಾಡಿ, ಡಿ.ವಿ.ಜಿ ಜನ್ಮ ದಿನಾಚರಣೆಯೊಂದಿಗೆ ಅವರ ತತ್ವ ಮಾರ್ಗದರ್ಶನ ಪತ್ರಿಯೊಬ್ಬ ಪತ್ರಕರ್ತರು ತಮ್ಮ ವೃತ್ತಿಯಲ್ಲಿ ಪಾಲಿಸಿದಾಗ ಮಾತ್ರ ಅರ್ಥಪೂರ್ಣವಾಗುವುದು ಎಂದರು.

ಪತ್ರಕರ್ತ ಓಂಕಾರ ಮೂರ್ತಿ, ಜಿಲ್ಲಾ ಪತ್ರಕರ್ತ ಸಹಕಾರ ಸಂಘದ ಉಪಾಧ್ಯಕ್ಷ ಅಬ್ಬಣಿ ಶಂಕರ್, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಚಂದ್ರಶೇಖರ್, ಪತ್ರಕರ್ತ ಸಚ್ಚಿದಾನಂದ, ಚಂದ್ರು, ಪತ್ರಕರ್ತರ ಸಂಘದ ವ್ಯವಸ್ಥಾಪಕ ಗಂಗಧಾರ್, ಸಹಾಯಕ ಶ್ರೀನಿವಾಸ್ ಇದ್ದರು.

Share this article