ಮಾನವ ಜೀವನಕ್ಕೆ ಸಾಹಿತ್ಯ, ಸಂಸ್ಕೃತಿ, ತಂತ್ರಜ್ಞಾನ ಪೂರಕ

KannadaprabhaNewsNetwork |  
Published : Oct 15, 2025, 02:08 AM IST
ಫೋಟೋ...... | Kannada Prabha

ಸಾರಾಂಶ

ಸಾಹಿತ್ಯ, ಸಂಸ್ಕೃತಿ ಮತ್ತು ತಂತ್ರಜ್ಞಾನ ಇವು ಮಾನವ ಜೀವನದ 3 ಪ್ರಮುಖ ಅಂಶಗಳು. ಸಾಹಿತ್ಯವು ಮಾನವನ ಮನಸ್ಸಿನ ನಿಜಸ್ವರೂಪವನ್ನು ಪ್ರತಿಬಿಂಬಿಸುತ್ತದೆ. ಸಂಸ್ಕೃತಿ ಆತನ ಬದುಕಿನ ಶೈಲಿಯನ್ನು ನಿರ್ಧರಿಸುತ್ತದೆ. ತಂತ್ರಜ್ಞಾನವು ಆ ಬದುಕಿಗೆ ವೇಗ ಮತ್ತು ವ್ಯಾಪ್ತಿಯನ್ನು ನೀಡುತ್ತದೆ. ಈ 3 ಅಂಶಗಳ ಸಮ್ಮಿಲನವೇ ಇಂದಿನ ಯುಗದ ಸವಾಲುಗಳಿಗೆ ಉತ್ತರ ನೀಡಬಲ್ಲ ಶಕ್ತಿಯಾಗಿದೆ ಎಂದು ಕೊಲ್ಹಾಪುರ ಶಿವಾಜಿ ವಿಶ್ವವಿದ್ಯಾಲಯದ ಆಂಗ್ಲ ಭಾಷಾ ವಿಭಾಗದ ಪ್ರೊ.ತೃಪ್ತಿ ಕರೇಕಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ನಿಪ್ಪಾಣಿ

ಸಾಹಿತ್ಯ, ಸಂಸ್ಕೃತಿ ಮತ್ತು ತಂತ್ರಜ್ಞಾನ ಇವು ಮಾನವ ಜೀವನದ 3 ಪ್ರಮುಖ ಅಂಶಗಳು. ಸಾಹಿತ್ಯವು ಮಾನವನ ಮನಸ್ಸಿನ ನಿಜಸ್ವರೂಪವನ್ನು ಪ್ರತಿಬಿಂಬಿಸುತ್ತದೆ. ಸಂಸ್ಕೃತಿ ಆತನ ಬದುಕಿನ ಶೈಲಿಯನ್ನು ನಿರ್ಧರಿಸುತ್ತದೆ. ತಂತ್ರಜ್ಞಾನವು ಆ ಬದುಕಿಗೆ ವೇಗ ಮತ್ತು ವ್ಯಾಪ್ತಿಯನ್ನು ನೀಡುತ್ತದೆ. ಈ 3 ಅಂಶಗಳ ಸಮ್ಮಿಲನವೇ ಇಂದಿನ ಯುಗದ ಸವಾಲುಗಳಿಗೆ ಉತ್ತರ ನೀಡಬಲ್ಲ ಶಕ್ತಿಯಾಗಿದೆ ಎಂದು ಕೊಲ್ಹಾಪುರ ಶಿವಾಜಿ ವಿಶ್ವವಿದ್ಯಾಲಯದ ಆಂಗ್ಲ ಭಾಷಾ ವಿಭಾಗದ ಪ್ರೊ.ತೃಪ್ತಿ ಕರೇಕಟ್ಟಿ ಹೇಳಿದರು.

ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ಜಿ.ಐ.ಬಾಗೇವಾಡಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಪ್ರೇರಿತ ಕನ್ನಡ, ಇಂಗ್ಲಿಷ್‌, ಹಿಂದಿ ಮತ್ತು ಮರಾಠಿ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಸಾಹಿತ್ಯ, ಸಂಸ್ಕೃತಿ ಮತ್ತು ತಂತ್ರಜ್ಞಾನ: ಆಧುನಿಕ ಭಾಷಾ ಚಿಂತನೆಗಳು ವಿಷಯ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಇಂದಿನ ಯುಗದಲ್ಲಿ ತಂತ್ರಜ್ಞಾನವು ಸಾಹಿತ್ಯದ ಪ್ರಚಾರ-ಪ್ರಸಾರಕ್ಕೆ ಹೊಸ ದಿಕ್ಕು ನೀಡಿದೆ. ಇ-ಪುಸ್ತಕಗಳು, ಡಿಜಿಟಲ್ ಗ್ರಂಥಾಲಯಗಳು, ಸಾಮಾಜಿಕ ಮಾಧ್ಯಮಗಳು ಹಾಗೂ ಆನ್‌ಲೈನ್ ಪಠ್ಯಕ್ರಮಗಳು ಸಾಹಿತ್ಯವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುತ್ತಿವೆ. ಆದರೆ, ಈ ಪ್ರಗತಿಯ ನಡುವೆ ಮಾನವೀಯ ಮೌಲ್ಯಗಳು ಮತ್ತು ಸಂಸ್ಕೃತಿಯ ಮೂಲಭೂತ ತತ್ವಗಳನ್ನು ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು.ಕೆ.ಎಲ್.ಇ ಸಂಸ್ಥೆಯ ಸ್ಥಳೀಯ ಆಡಳಿತ ಮಂಡಳಿಯ ಸದಸ್ಯ ಡಾ.ಎಸ್.ಆರ್.ಪಾಟೀಲ ಮಾತನಾಡಿ, ಸಾಹಿತ್ಯ, ಸಂಸ್ಕೃತಿ ಮತ್ತು ತಂತ್ರಜ್ಞಾನಗಳ ಸಮನ್ವಯವೇ ಇಂದಿನ ಶಿಕ್ಷಣದ ನೂತನ ದೃಷ್ಟಿಕೋನ. ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಬೆಳೆಯಲು ಇಂತಹ ವಿಚಾರ ಸಂಕಿರಣಗಳು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಂ.ಎಂ.ಹುರಳಿ ಅಧ್ಯಕ್ಷೀಯ ನುಡಿಗಳನ್ನಾಡಿ, ಆಧುನಿಕ ತಂತ್ರಜ್ಞಾನವು ಸಾಹಿತ್ಯ ಅಧ್ಯಯನದ ವಿಧಾನವನ್ನು ಬದಲಿಸಿದೆ. ಈಗ ವಿದ್ಯಾರ್ಥಿಗಳು ವಿಶ್ವದ ಯಾವುದೇ ಕೃತಿಯನ್ನು ಕ್ಷಣಾರ್ಧದಲ್ಲಿ ಓದಬಹುದು, ವಿಶ್ಲೇಷಿಸಬಹುದು, ಸಂಶೋಧನೆ ನಡೆಸಬಹುದು. ಆದರೆ, ಈ ವೇಗದ ಹಿಂದೆ ಮಾನವೀಯತೆ, ನೈತಿಕತೆ ಮತ್ತು ಸಂಸ್ಕೃತಿಯ ಮೌಲ್ಯಗಳು ಸದಾ ಜೀವಂತವಾಗಿರಬೇಕು. ತಂತ್ರಜ್ಞಾನ ನಮ್ಮ ಕೈಯಲ್ಲಿದೆ. ಆದರೆ, ಅದರ ದಿಕ್ಕನ್ನು ನಾವೇ ನಿರ್ಧರಿಸಬೇಕು. ಈ ವಿಚಾರ ಸಂಕಿರಣವು ವಿದ್ಯಾರ್ಥಿ, ಅಧ್ಯಾಪಕ ಹಾಗೂ ಸಂಶೋಧಕರಿಗೆ ಚಿಂತನೆಯ ಹೊಸ ದಿಕ್ಕು ನೀಡುವ ಒಂದು ಶೈಕ್ಷಣಿಕ ಉತ್ಸವವಾಗಿದೆ. ಇಂತಹ ವೇದಿಕೆಗಳು ಬೌದ್ಧಿಕ ಚಟುವಟಿಕೆಗೆ ನೂತನ ಚೈತನ್ಯ ತುಂಬುತ್ತವೆ ಎಂದರು.ಕೆ.ಎಲ್.ಇ ಸಂಸ್ಥೆಯ ನಿರ್ದೇಶಕ ಪ್ರವೀಣ ಬಾಗೇವಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ, ಇಂಗ್ಲಿಷ್‌, ಹಿಂದಿ ಹಾಗೂ ಮರಾಠಿ ವಿಭಾಗಗಳಿಂದ ಎರಡು ಗೋಷ್ಠಿಗಳಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ ಸೇರಿದಂತೆ ಹಲವು ರಾಜ್ಯಗಳಿಂದ 170ಕ್ಕೂ ಹೆಚ್ಚು ಪ್ರಾಧ್ಯಾಪಕರು ಮತ್ತು ಸಂಶೋಧನ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ಆಯ್ಕೆಯಾದ ಪ್ರಬಂಧಗಳನ್ನು ಸಂಕಲನ ರೂಪದಲ್ಲಿ ಅಕ್ಷರಸೂರ್ಯ ಜರ್ನಲ್‌ನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಗೊಂಡ ಕನ್ನಡ-2, ಇಂಗ್ಲಿಷ್‌-1, ಹಿಂದಿ-1 ಮತ್ತು ಮರಾಠಿ-1 ಪುಸ್ತಕಗಳನ್ನು ಗಣ್ಯರು ಬಿಡುಗಡೆ ಮಾಡಿದರು. ವಿಚಾರ ಸಂಕಿರಣಕ್ಕೆ ಪ್ರಾಯೋಜಕರಾಗಿ ಸಹಾಯ-ಸಹಕಾರ ನೀಡಿದ ಗಣ್ಯರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.ಕೆ.ಎಲ್.ಇ ಸಂಸ್ಥೆಯ ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷ ಮಹೇಶ ಬಾಗೇವಾಡಿ, ಸದಸ್ಯರಾದ ರವಿ ಶೆಟ್ಟಿ, ಎಂ.ಆರ್.ಪಾಟೀಲ, ಐಕ್ಯೂಎಸಿ ಸಂಯೋಜಕ ಡಾ.ಅತುಲಕುಮಾರ ಕಾಂಬಳೆ, ಕಾರ್ಯಕ್ರಮದ ಸಹ ಸಂಯೋಜಕ ಡಾ.ಬಸವರಾಜ ಜನಗೌಡ, ಪ.ಪೂ ಪ್ರಾಚಾರ್ಯೆ ಹೇಮಾ ಚಿಕ್ಕಮಠ, ಎಲ್ಲ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಆಗಮಿಸಿದ್ದ 200ಕ್ಕೂ ಹೆಚ್ಚು ಪ್ರಾಧ್ಯಾಪಕರು ಮತ್ತು ಸಂಶೋಧನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳಿಂದ ನಾಡಗೀತೆ, ಶಿವಲಿಂಗ ನಾಯಿಕ ಅವರಿಂದ ಸ್ವಾಗತ ಗೀತೆ ಹಾಡಿದರು. ಕಾರ್ಯಕ್ರಮದ ಸಹ ಸಂಯೋಜಕ ಡಾ.ಎಸ್.ಎಂ.ರಾಯಮನೆ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಶಂಕರಮೂರ್ತಿ ಕೆ.ಎನ್ ಅತಿಥಿಗಳನ್ನು ಪರಿಚಯಿಸಿದರು. ನಮೀತಾ ನಾಯಿಕ ಹಾಗೂ ಆರ್.ಮೋನಿಕಾ ನಿರೂಪಿಸಿದರು. ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ.ಎಂ.ಡಿ.ಗುರವ ವಂದಿಸಿದರು.

PREV

Recommended Stories

ಮರಳು ದಂಧೆ ತಡೆದ ಎಎಸ್‌ಐಗೆ ಹಲ್ಲೆ: ರಾಜೂಗೌಡ
ನಟ ದರ್ಶನ್‌ ಸೆಲ್‌ ಪರಿಶೀಲನೆ ನಡೆಸಿದ ಕಾನೂನು ಪ್ರಾಧಿಕಾರ