ಹನೂರು: ಮಲೆ ಮಾದೇಶ್ವರ ಬೆಟ್ಟ ವ್ಯಾಪ್ತಿಯ ಗ್ರಾಮಗಳಲ್ಲಿ ಜಾನುವಾರಗಳಿಗೆ ಮೇವು ನೀರಿಲ್ಲದೆ ಪರಿತಪಿಸುವಂತಾಗಿದೆ. ಜಿಲ್ಲಾಡಳಿತ ಕೂಡಲೇ ಗಮನ ಹರಿಸಿ ಮೇವು ಸರಬರಾಜು ಮಾಡಲು ಮುಂದಾಗಬೇಕಿದೆ.
ಮಾದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಹಳೆಯೂರು, ಕೊಂಗನೂರು, ಇಂಡಿಗನಾಥ, ತುಳಸಿಕೆರೆ, ಪಡಸಲನಾಥ ವಿವಿಧ ಗ್ರಾಮಗಳಲ್ಲಿ ಸಾವಿರಾರು ದೇಸಿಯ ಜಾನುವಾರುಗಳಿವೆ. ಮಳೆ ಇಲ್ಲದೆ ಮೇವು ಕೊರತೆಯಿಂದ ಗುಡ್ಡಗಾಡು ಪ್ರದೇಶ ಅರಣ್ಯದಂಚಿನಲ್ಲಿ ಬರುವ ಗ್ರಾಮಗಳಲ್ಲಿ ಇರುವ ಜಾನುವಾರುಗಳಿಗೆ ಎಲ್ಲಿ ನೋಡಿದರೂ ಕಾಡಿನಲ್ಲಿ ಮೇವು ಇಲ್ಲದೆ ರಾಸುಗಳು ಕುಡಿಯುವ ನೀರಿಗಾಗಿ ದಿನ ನಿತ್ಯವೂ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಂಬಂಧಪಟ್ಟ ಜಿಲ್ಲಾಡಳಿತ ಗಮನಹರಿಸುವಂತೆ ಮೂಕ ಪ್ರಾಣಿಗಳ ಹಸಿವು ನೀಗಿಸಲು ಮೇವು ಸರಬರಾಜು ಮಾಡಿ ಕುಡಿಯುವ ನೀರಿನ ದಾಹ ತೀರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಜಿಲ್ಲಾಡಳಿತ ಗಮನಹರಿಸಲು ಮನವಿ:
ಮಾದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿರುವ ಜಾನುವಾರುಗಳ ಸಂಖ್ಯೆ ಅನುಗುಣವಾಗಿ ಜಿಲ್ಲಾಡಳಿತ ತಾಲೂಕು ಮಟ್ಟದ ಅಧಿಕಾರಿಗಳ ಮೂಲಕ ಜಾನುವಾರು ಗಣತಿ ಮಾಡುವ ಮೂಲಕ ನೀವು ಸರಬರಾಜು ಇರಬೇಕು ಮೂಕ ಪ್ರಾಣಿಗಳು ಮೇವು ಇಲ್ಲದೆ ಅವುಗಳ ರೋಧನೆ ನೋಡಲು ಆಗುತ್ತಿಲ್ಲ ಎಂದರು.
ಗೋಶಾಲೆ ತೆರೆಯಲು ಆಗ್ರಹ:
ಮಾದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿರುವ ದೇಶಿ ತಳಿಯ ರಾಸುಗಳನ್ನು ಉಳಿಸಲು ಕೂಡಲೇ ಸಂಬಂಧಪಟ್ಟ ಜಿಲ್ಲಾಡಳಿತ ಈ ಭಾಗದಲ್ಲಿ ಗೋಶಾಲೆ ತೆರೆದು ಇರುವಂತಹ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದರೆ ಜಾನುವಾರುಗಳು ಉಳಿಯುತ್ತವೆ ಇಲ್ಲದಿದ್ದರೆ ಮೇವು ಇಲ್ಲದೆ ಅಸುನೀಗುವ ಸ್ಥಿತಿಗೆ ತಲುಪಿದೆ. ಕೂಡಲೇ ಈ ಭಾಗದಲ್ಲಿ ಮೇವು ಸರಬರಾಜು ಮಾಡಿ ಗೋಶಾಲೆ ಕರೆಯಬೇಕು ಎಂದು ನಿವೃತ್ತ ಶಿಕ್ಷಕ ಹಳೆಯೂರು ಗ್ರಾಮದ ಮಾದಯ್ಯ ಮನವಿ ಮಾಡಿದ್ದಾರೆ.