ಲೋಕಾಪುರ ಪಿಕೆಪಿಎಸ್ ಗೆ ₹೫,೦೬ ನಿವ್ವಳ ಲಾಭ

KannadaprabhaNewsNetwork |  
Published : Sep 27, 2025, 02:00 AM IST
ಲೋಕಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷ ಹೊಳಬಸು ಕಾಜಗಾರ ಉದ್ಘಾಟಿಸಿದರು. ತಿಪ್ಪಣ್ಣ ಅಗಸದವರ, ಯಮನಪ್ಪ ಹೊರಟ್ಟಿ, ಪವನ ಉದಪುಡಿ, ಚನ್ನಬಸಯ್ಯ ಗಣಾಚಾರಿ ಇನ್ನಿತರರು ಇದ್ದರು | Kannada Prabha

ಸಾರಾಂಶ

ಸಂಘದ ಮೇಲೆ ವಿಶ್ವಾಸವಿಟ್ಟು ಹೂಡಿದ ಹಣಕ್ಕೆ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಿ ಗ್ರಾಹಕರ ಹಿತ ಕಾಪಾಡುವುದು ಮುಖ್ಯವಾಗಿದ್ದು, ಸಂಘದ ಪ್ರಗತಿಗೆ ಎಲ್ಲರ ಸಹಕಾರ ಅಗತ್ಯ ಎಂದು ಪಿಕೆಪಿಎಸ್ ಅಧ್ಯಕ್ಷ ಹೊಳಬಸು ಕಾಜಗಾರ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಸಂಘದ ಮೇಲೆ ವಿಶ್ವಾಸವಿಟ್ಟು ಹೂಡಿದ ಹಣಕ್ಕೆ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಿ ಗ್ರಾಹಕರ ಹಿತ ಕಾಪಾಡುವುದು ಮುಖ್ಯವಾಗಿದ್ದು, ಸಂಘದ ಪ್ರಗತಿಗೆ ಎಲ್ಲರ ಸಹಕಾರ ಅಗತ್ಯ ಎಂದು ಪಿಕೆಪಿಎಸ್ ಅಧ್ಯಕ್ಷ ಹೊಳಬಸು ಕಾಜಗಾರ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸಹಕಾರ ಸಂಘದಿಂದ ಸಾಲ ಪಡೆದ ಗ್ರಾಹಕರು ಸಕಾಲಕ್ಕೆ ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು. ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಸಮರ್ಪಕ ಸೇವೆ ನೀಡುವ ಮೂಲಕ ಸಂಘ ವರ್ಷದಿಂದ ವರ್ಷಕ್ಕೆ ಲಾಭದಲ್ಲಿ ಪ್ರಗತಿ ಹೊಂದುತ್ತಿದೆ. ಇದಕ್ಕೆ ರೈತರ, ನಿರ್ದೇಶಕರ, ಸದಸ್ಯರ, ಠೇವಣಿದಾರರ, ಹಿತ ಕಾಯಲಾಗುತ್ತಿದೆ ಎಂದರು.ಸಿಇಒ ಕೃಷ್ಣಾ ನಿಂಗನಗೌಡರ ಪ್ರಾಸ್ತಾವಿಕ ಮಾತನಾಡಿ. ಆಡಳಿತ ಮಂಡಳಿ, ರೈತರು ಮತ್ತು ಗ್ರಾಹಕರ ಸಹಕಾರಿಂದ ಅತ್ಯುತ್ತಮ ಸೊಸೈಟಿ ಎಂಬ ಹೆಗ್ಗಳಿಕೆ ಪಾತ್ರ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ೨೦೨೪-೨೫ನೇ ಸಾಲಿನಲ್ಲಿ ಕೃಷಿ ಮತ್ತು ಕೃಷಿಯೇತರ ಸಾಲಗಳ ವಸೂಲಾತಿಯ ಪ್ರಮಾಣ ಶೇ.೯೫ರಷ್ಟು ಸಾಧನೆ ಮಾಡಿರುವುದರಿಂದ ಸಂಘಕ್ಕೆ ಬಂದ ಆದಾಯ ಕ್ರೋಡೀಕರಿಸಿ ಮತ್ತು ಸರ್ಕಾರದ ಬಂದ ಬಡ್ಡಿ ಸಹಾಯಧನ ಹಾಗೂ ಇನ್ನಿತರ ಆದಾಯ ಸೇರಿ ₹೫,೦೬,೩೬೯.೯೬ ನಿವ್ವಳ ಲಾಭ ಬಂದಿದೆ ಎಂದು ತಿಳಿಸಿದರು.ಸಂಘದ ಸದಸ್ಯರು ಕೇಳಿದ ಪ್ರಶ್ನೆಗೆ ಸರಿಯಾದ ರೀತಿ ಉತ್ತರ, ಮಾಹಿತಿ ನೀಡದೇ ಇರುವುದರಿಂದ ವಾರ್ಷಿಕ ಸಭೆಯಲ್ಲಿ ಸ್ವಲ್ಪ ಸಮಯದ ಗೊಂದಲಮಯ ವಾತಾವರಣ ನಿರ್ಮಾಣವಾಯಿತು. ಇದಕ್ಕೆ ನಿರ್ದೇಶಕರ ಯಮನಪ್ಪ ಹೊರಟ್ಟಿ ಸರಿಯಾದ ಮಾಹಿತಿ ನೀಡಲಾಗುವುದು. ಪ್ರತಿ ಸದಸ್ಯರು ಸಭೆಯ ಮುಂಚಿತವಾಗಿ ೧೫ ದಿವಸದೊಳಗೆ ಪತ್ರದ ಮೂಲಕ ನೀಡಿದರೆ ಸರಿಯಾದ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.ಕೆಲವೊಂದು ಸದಸ್ಯರು ಕಳೆದ ವರ್ಷ ನೀಡಿದ ಮಾಹಿತಿ ಸಮರ್ಪಕವಾಗಿ ನೀಡದೆ ಇದ್ದ ಕಾರಣ ಮತ್ತೆ ಗೊಂದಲ ಉಂಟಾಯಿತು. ಈ ರೀತಿ ಆಗದ ಹಾಗೆ ನಡೆದುಕೊಳ್ಳಲಾಗುವುದು ಎಂದು ಕೆಲವೊಂದು ನಿರ್ದೇಶಕರು ತಿಳಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ತಿಪ್ಪಣ್ಣ ಅಗಸದವರ, ಆಡಳಿತ ಮಂಡಳಿ ಸದಸ್ಯರಾದ ಚನ್ನಪ್ಪ ಮುದ್ದಾಪುರ, ಯಮನಪ್ಪ ಹೊರಟ್ಟಿ, ಮಾರುತಿ ರಂಗಣ್ಣವರ, ವಿವೇಕಾನಂದ ಹವಳಖೋಡ, ರಮೇಶ ಯರಗಟ್ಟಿ, ಅಯ್ಯಪ್ಪಗೌಡ ಪಾಟೀಲ, ಶ್ರೀಮತಿ ತಿಮ್ಮವ್ವ ವಿ ಭೂಸರಡ್ಡಿ, ಅನಸೂಯಾ ಪಾಟೀಲ, ಪವನ ಉದಪುಡಿ, ಚನ್ನಬಸಯ್ಯ ಗಣಾಚಾರಿ, ಇದ್ದರು. ಶೇರುದಾರರಾದ ಹಣಮಂತ ರಾಮದುರ್ಗ, ಅರುಣ ನರಗುಂದ, ಶೆಟ್ಟೆಪ್ಪ ಮಾಳಿ, ಗುಲಾಬಸಾಬ ಅತ್ತಾರ, ವಿಷ್ಣುಗೌಡ ಪಾಟೀಲ, ಗೊಡಚಯ್ಯ ಗಣಾಚಾರಿ, ರಾಮಪ್ಪ ಲಮಾಣಿ, ನಿಂಗಪ್ಪ ಚಿಪ್ಪಲಕಟ್ಟಿ, ಮಹೇಶ ಹುಗ್ಗಿ, ತುಳಜಪ್ಪ ಮುದ್ದಾಪುರ, ಮಹೇಶ ಮಳಲಿ, ಶಂಕೆಪ್ಪ ಮಾಳಿ ಸುತ್ತಮುತ್ತಲಿನ ಗ್ರಾಮಗಳ ಶೇರುದಾರರು ಹಾಗೂ ರೈತರು, ಸ್ಥಳೀಯರು ಇದ್ದರು.

PREV

Recommended Stories

ಹತ್ತು ವರ್ಷವಾದ್ರೂ ನೇಕಾರರ ಮನೆಗಳಿಗಿಲ್ಲ ಮುಕ್ತಿ
ಭೀಮಾನದಿ ನೀರಿನ ಹರಿವು ಮತ್ತೆ ಏರಿಕೆ