ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಪಟ್ಟಣದಲ್ಲಿ ಶನಿವಾರ ಜಿಲ್ಲಾ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮ ಪಟ್ಟಣದ ಪ್ರಮುಖರು, ಸಂಘಟನೆ ಹಾಗೂ ರಾಜಕೀಯ ಮುಖಂಡರ ಸಂಧಾನ ಯಶಸ್ವಿಯಾಗಿದೆ. ಪಟ್ಟಣದಲ್ಲಿ ಕಳೆದ ರಾತ್ರಿ ನಡೆದ ಚಿಕ್ಕ ಘಟನೆ ಮರೆತು ದೇಶದಲ್ಲಿ ಶ್ರೀರಾಮನ ಅದ್ಧೂರಿ ಉತ್ಸವಕ್ಕೆ ನಾವೆಲ್ಲರೂ ಸಾಕ್ಷಿ ಆಗೋಣ ಎಂದು ಹಿಂದುಪರ ಸಂಘಟನೆ ಮುಖಂಡರು ಹಾಗೂ ಮುಸ್ಲಿಂ ಮುಖಂಡರೊಂದಿಗೆ ಪಟ್ಟಣದ ಪ್ರಮುಖರು ಮಾತುಕತೆಯ ಮೂಲಕ ಸಂಧಾನ ಸಭೆ ಯಶಸ್ವಿಯಾಗಿದೆ.ಪಟ್ಟಣದ ಪ್ರಮುಖರಾದ ಚನ್ನವೀರಪ್ಪ ಕುದುರಿ ಮಾತನಾಡಿ, ಪಟ್ಟಣ ಯಾವಾಗಲೂ ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಚಿಕ್ಕ ಘಟನೆ ಬೆಳೆಸದೆ ನಾವೆಲ್ಲರೂ ಅಣ್ಣ ತಮ್ಮಂದಿರ ಹಾಗೆ ಇದ್ದೇವೆ ಎಂದರು.
ವಿವಿಧ ಹಿಂದು ಪರ ಸಂಘಟನೆ ಹಾಗೂ ಬಿಜೆಪಿ ಮುಖಂಡರು ಮಾತನಾಡಿ, ದೇಶದಲ್ಲಿ ಶ್ರೀರಾಮನ ಅದ್ಧೂರಿ ಉತ್ಸವಕ್ಕೆ ನಾವೆಲ್ಲರೂ ಸಾಕ್ಷಿ ಆಗೋಣ ಎಂದು ಕೋರಿದರು.ಪಟ್ಟಣದ ಮಡಿವಾಳೇಶ್ವರ ದೇವಸ್ಥಾನದಿಂದ ಕರೆದೇವರ ದೇವಸ್ಥಾನದವರೆಗೆ ಹಿಂದು ಪರ ಸಂಘಟನೆಯ ಮುಖಂಡರಿಂದ ರ್‍ಯಾಲಿ ಮೂಲಕ ಬಂದು ಪಟ್ಟಣದ ಇನ್ನುಳಿದ ಕೆಲ ವಾರ್ಡ್‌ಗಳಲ್ಲಿ ಮಂತ್ರಾಕ್ಷತೆ ವಿತರಣೆ ಮಾಡಿದರು. ಪಟ್ಟಣದಲ್ಲಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಬೆಳಗಾವಿ ಆರ್‌ಎಸ್‌ಎಸ್ ವಿಭಾಗದ ಪ್ರಚಾರಕ ರಾವಸಾಬ್ ಬಿರಾದಾರ, ಜಿಲ್ಲಾ ಕಾರ್ಯವಾಹ ಸೋಮು ಕನ್ನೂರ, ವಿಎಚ್‌ಪಿ ಪ್ರಮುಖರಾದ ಸುನಿಲ ಭೈರವಾಡಗಿ, ಶರಣು ಬ್ಯಾಳಿ, ತಾಲೂಕು ಕಾರ್ಯವಾಹ ಗುರುರಾಜ ದೇಸಾಯಿ, ಬಿಜೆಪಿ ಮುಖಂಡರುಗಳಾದ ಸುರೇಶಗೌಡ ಪಾಟೀಲ (ಸಾಸನೂರ), ವಿಜುಗೌಡ ಪಾಟೀಲ, ಅಶೋಕ ಅಲ್ಲಾಪೂರ, ಡಾ.ಬಾಬುರಾಜೇಂದ್ರ ನಾಯಕ, ಶಿವರುದ್ರ ಬಾಗಲಕೋಟ, ಸಿದ್ದು ಹೂಗಾರ, ಶಿವಾನಂದ ಅವಟಿ, ಬಸವರಾಜ ಬೈಚುಬಾಳ, ಸುರೇಶಗೌಡ ಪಾಟೀಲ, ಬಸವರಾಜ ಹೂಗಾರ, ಸಿದ್ದು ಬುಳ್ಳಾ, ಭೀಮನಗೌಡ ಲಚ್ಯಾಣ, ಮುತ್ತು ಶಾಬಾದಿ, ಶ್ರೀಮಂತ ದುದ್ದಗಿ, ಮಾಂತೇಶ ಬಿರಾದಾರ, ಶಿಲ್ಪಾ ಕುದರಗೊಂಡ, ಗಾಯತ್ರಿ ದೇವೂರ, ಸೋಮು ಹಿರೇಮಠ, ಸೋಮು ದೇವೂರ, ಪಟ್ಟಣದ ಪ್ರಮುಖರಾದ ಕಾಸುಗೌಡ ಬಿರಾದಾರ ಜಲಕತ್ತಿ, ರಿಯಾಜ್ ಯಲಗಾರ, ಬಸೀರ್ ಅಹ್ಮದ್ ಬೇಪಾರಿ, ಬಾಬುಗೌಡ ಪಾಟೀಲ, ನಿಂಗು ಯಂಬತನಾಳ, ಬಾಬು ಸೌದಿ ಸೇರಿದಂತೆ ಪಟ್ಟಣದ ಸರ್ವ ಸಮುದಾಯದ ಹಾಗೂ ವಿವಿಧ ಹಿಂದು ಪರ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.