ಕನ್ನಡಪ್ರಭ ವಾರ್ತೆ ಕಾರಟಗಿ
ಆದರೆ, ಈ ಯುವತಿಯಿಂದಲೇ ನನಗೆ ಅನ್ಯಾಯವಾಗಿದೆ ಎಂದು ಆ ಯುವಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ವಿಡಿಯೋ ವೈರಲ್ ಆಗಿದ್ದು, ಈ ಪ್ರಕರಣ ಈಗ ಇಲ್ಲಿನ ಪೊಲೀಸರಿಗೆ ತಲೆನೋವಾಗಿದೆ.
ಇಲ್ಲಿಗೆ ಸಮೀಪದ ಮರ್ಲಾನಹಳ್ಳಿ ಗ್ರಾಮದ ಯುವತಿ ಸುಮಿತ್ರಾ ತನ್ನ ಪಾಲಕರೊಂದಿಗೆ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸಿದ್ದು, ಶಾರ್ಟ್ ಮೂವಿಸ್‌ನ ನಿರ್ದೇಶಕ, ಯುಟ್ಯೂಬ್ ಚಾನೆಲ್ ಕೂಡಾ ಮಾಡಿಕೊಂಡಿದ್ದ ಗಂಗಾವತಿ ತಾಲೂಕಿನ ಚಿಕ್ಕಜಂತಕಲ್‌ನ ನಾಗೇನಹಳ್ಳಿಯ ರವಿರಾಜ್ ಕರಿಯಪ್ಪನಿಂದ ನನಗೆ ಮೋಸವಾಗಿದ್ದು, ಕೂಡಲೇ ಆತನನ್ನು ಬಂಧಿಸಿ ಮದುವೆ ಮಾಡಿಸಬೇಕು ಎಂದು ಪಟ್ಟು ಹಿಡಿದು ಧರಣಿ ನಡೆಸಿದ್ದಾಳೆ.ಯುವತಿ ಸುಮಿತ್ರಾ, ತಾನು ಪ್ರೀತಿಸಿದ ಯುವಕನಿಂದ ತನಗೆ ಅನ್ಯಾಯವಾಗಿದೆ. ಲೈಂಗಿಕ ದೌರ್ಜನ್ಯವೆಸಗಿ, ಇದೀಗ ಮದುವೆಯಾಗುತ್ತಿಲ್ಲ. ತನಗೆ ಲವ್, ಸೆಕ್ಸ್ ದೋಖಾ ಆಗಿದೆ. ರವಿರಾಜ್ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ವಿಡಿಯೋ ಇಟ್ಟುಕೊಂಡು ನನಗೆ ಬೆದರಿಕೆ ಹಾಕಿ ಮೇಲಿಂದ ಮೇಲೆ ಅತ್ಯಾಚಾರ ಮಾಡಿದ್ದಾನೆ. ಇದೀಗ ಮದುವೆಯಾಗದ ತನ್ನ ಬಾಳನ್ನು ಹಾಳು ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ನಂತರ ಮದುವೆ ನಿಶ್ಚಯ ಶಾಸ್ತ್ರವೂ ಆಗಿತ್ತು. ೨೦೨೧ರ ಮಾರ್ಚ್ ೧೭ರಂದು ಯುವತಿ ಮನೆಗೆ ಬಂದಿದ್ದ ರವಿರಾಜ್, ನಾವಿಬ್ಬರು ಮದುವೆಯಾಗುತ್ತಿದ್ದೇವೆ ಎಂದು ಹೇಳಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳಸಿದ್ದನಂತೆ. ಆ ಖಾಸಗಿ ಕ್ಷಣದ ವಿಡಿಯೋ ಕೂಡಾ ಮಾಡಿಟ್ಟುಕೊಂಡಿದ್ದ ಎಂದು ಯುವತಿ ಆರೋಪಿಸಿದ್ದಾಳೆ. ಅದೇ ವಿಡಿಯೋ ಇಟ್ಟುಕೊಂಡು ಮೇಲಿಂದ ಮೇಲೆ ಕೊಪ್ಪಳ ನಗರದಲ್ಲಿರುವ ಸಂಬಂಧಿಯ ಪೊಲೀಸ್ ಕ್ವಾಟರ್ಸ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದನಂತೆ. ಮೂರ್ನಾಲ್ಕು ಬಾರಿ ಅಬಾರ್ಶನ್ ಮಾಡಿಸಿದ್ದಾನಂತೆ.
ಆದರೆ, ಇದೆಲ್ಲ ಆರೋಪವನ್ನು ಯುವಕ ಅಲ್ಲಗಳೆದು ಯುವತಿಯೇ ನನಗೆ ಮತ್ತು ಬರುವ ಪಾನೀಯ ಕುಡಿಸಿ, ತನ್ನಿಂದ ಕೆಟ್ಟ ಕೆಲಸ ಮಾಡಿಸಿ, ವಿಡಿಯೋ ಮಾಡಿಕೊಂಡಿದ್ದಾಳೆ ಎಂದು ಹೇಳಿದ ವಿಡಿಯೋವನ್ನು ಹರಿಬಿಟ್ಟಿದ್ದಾನೆ. ಪೊಲೀಸ್ ಅಧಿಕಾರಿಗಳ ಭರವಸೆ ಮೇರೆಗೆ ಯುವತಿ ಸುಮಿತ್ರಾ ಧರಣಿ ಹಿಂಪಡೆದಿದ್ದಾಳೆ.