ಕೃಷಿ ಕೂಲಿಕಾರರ ಸಂಘದ ಸದಸ್ಯತ್ವ ಆಂದೋಲನಕ್ಕೆ ಎಂ.ಪುಟ್ಟಮಾದು ಚಾಲನೆ

KannadaprabhaNewsNetwork |  
Published : Feb 14, 2024, 02:20 AM IST
13ಕೆಎಂಎನ್ ಡಿ12ಯಲಾದಹಳ್ಳಿಕೃಷಿ ಕೂಲಿಕಾರರ ಸಂಘದ ಸದಸ್ಯತ್ವ ಆಂದೋಲನಕ್ಕೆ ಕೃಷಿಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ಚಾಲನೆ ನೀಡಿದರು. | Kannada Prabha

ಸಾರಾಂಶ

ಹೆಚ್ಚುತ್ತಿರುವ ಅಗತ್ಯ ವಸ್ತುಗಳನ್ನು ಬೆಲೆಗಳನ್ನು ಇಳಿಸಲು ಕೇಂದ್ರ ಸರ್ಕಾರ ಮುಂದಾಗಬೇಕು. ಕೇಂದ್ರ ಸರ್ಕಾರ ಶ್ರೀಮಂತರಿಗೆ ಮಣೆ ಹಾಕಿ ಬಡವರನ್ನು ಶೋಷಣೆ ಮಾಡುತ್ತಿದೆ. ಶ್ರೀಮಂತರಿಗೆ ತೆರಿಗೆ ರೂಪದಲ್ಲಿ ಅವರ ಎಲ್ಲ ಸಾಲಗಳನ್ನು ಮನ್ನಾ ಮಾಡಿದೆ. ಆದರೆ, ಬಡವರಿಗೆ ಮತ್ತು ರೈತರಿಗೆ ಅವರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡದೆ ಕನಿಷ್ಠ ಖರ್ಚನ್ನು ಭರಿಸಲಾಗದ ಪರಿಸ್ಥಿತಿಯಲ್ಲಿ ರೈತರು ಮತ್ತು ಕೂಲಿಕಾರರು ಬದುಕುವಂತಾಗಿದೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಕೂಲಿಕಾರರ ಅಭಿವೃದ್ಧಿಗಾಗಿ ರೇಷನ್ ಕಾರ್ಡ್, ಬ್ಯಾಂಕ್ ಸಾಲ ಮತ್ತು ಕೂಲಿ ಹೆಚ್ಚಳಕ್ಕಾಗಿ ದೇಶಾದ್ಯಂತ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ತಿಳಿಸಿದರು.

ಯಲಾದಹಳ್ಳಿಯಲ್ಲಿ ಕೃಷಿಕೂಲಿಕಾರರ ಸಂಘದ ಸದಸ್ಯತ್ವ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ಕೃಷಿ ಕೂಲಿಕಾರರನ್ನು ಸಂಘಕ್ಕೆ ಸೇರ್ಪಡೆ ಮಾಡಿಕೊಳ್ಳುವ ದೃಷ್ಟಿಯಿಂದ ರಾಜ್ಯಾದ್ಯಂತ ಘಟಕಗಳನ್ನು ರಚಿಸಿ ಹೋರಾಟ ಮತ್ತು ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಯಲಾದಹಳ್ಳಿಯಲ್ಲಿ 200ಕ್ಕೂ ಹೆಚ್ಚು ಕೂಲಿಕಾರರನ್ನು ಸದಸ್ಯರನ್ನಾಗಿ ಮಾಡಲಾಗಿದೆ ಎಂದರು.

ಗ್ರಾಮಕ್ಕೆ ಸ್ಮಶಾನ, ರಸ್ತೆ, ಬಸ್ ಸೌಕರ್ಯ ಕಲ್ಪಿಸಬೇಕಿದೆ. ಕೂಲಿ ಹೆಚ್ಚಳ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಹೆಚ್ಚುತ್ತಿರುವ ಅಗತ್ಯ ವಸ್ತುಗಳನ್ನು ಬೆಲೆಗಳನ್ನು ಇಳಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಶ್ರೀಮಂತರಿಗೆ ಮಣೆ ಹಾಕಿ ಬಡವರನ್ನು ಶೋಷಣೆ ಮಾಡುತ್ತಿದೆ. ಶ್ರೀಮಂತರಿಗೆ ತೆರಿಗೆ ರೂಪದಲ್ಲಿ ಅವರ ಎಲ್ಲ ಸಾಲಗಳನ್ನು ಮನ್ನಾ ಮಾಡಿದೆ. ಆದರೆ, ಬಡವರಿಗೆ ಮತ್ತು ರೈತರಿಗೆ ಅವರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡದೆ ಕನಿಷ್ಠ ಖರ್ಚನ್ನು ಭರಿಸಲಾಗದ ಪರಿಸ್ಥಿತಿಯಲ್ಲಿ ರೈತರು ಮತ್ತು ಕೂಲಿಕಾರರು ಬದುಕುವಂತಾಗಿದೆ ಎಂದರು.

ಬರಗಾಲ ತೀವ್ರಗೊಂಡಿದ್ದು, ಕರ್ನಾಟಕಕ್ಕೆ ಕೊಡಬೇಕಾದ ಜಿಎಸ್‌ಟಿ ಪಾಲನ್ನು ಬೇರೆ ರಾಜ್ಯಗಳಿಗೆ ಕೊಡುತ್ತಿರುವುದು ಅನ್ಯಾಯ. ಒಕ್ಕೂಟದ ವ್ಯವಸ್ಥೆಯನ್ನು ಛಿದ್ರಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕೃಷಿಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮೇಶ್, ತಾಲೂಕು ಅಧ್ಯಕ್ಷೆ ಯಲಾದಹಳ್ಳಿ ಅನಿತಾ, ಬೋರೇಗೌಡ, ಮಂಜುಳಾ, ಭಾಗ್ಯಮ್ಮ, ಪವಿತ್ರ, ಶಿವಮ್ಮ, ಪೂರ್ಣಿಮಾ, ಸಿದ್ದರಾಜು, ಕೆಂಚಣ್ಣ, ಸಾಕಮ್ಮ ಸೇರಿದಂತೆ ಹಲವರಿದ್ದರು.ಇಂದು ಬೃಹತ್ ರಕ್ತದಾನ ಶಿಬಿರ: ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಪೋಸ್ಟರ್ ಬಿಡುಗಡೆ

ಭಾರತೀನಗರ: ಭಾರತೀನಗರದಲ್ಲಿ ಫೆ.14ರಂದು ನಡೆಯಲಿರುವ ಬೃಹತ್ ರಕ್ತದಾನ ಶಿಬಿರದ ಪೋಸ್ಟರ್‌ನನ್ನು ಜೆಡಿಎಸ್ ಕಚೇರಿಯಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಬಿಡುಗಡೆಗೊಳಿಸಿದರು.ಮದ್ದೂರು-ಮಳವಳ್ಳಿ ಹೆದ್ದಾರಿಯ ತಿಬ್ಬಾದೇವಿ ಕಾಂಪೆಕ್ಸ್ ಬಳಿ ಸಮಾನ ಮನಸ್ಕರ ವೇದಿಕೆ ಹಾಗೂ ವಿವಿಧ ಸಂಘ- ಸಂಸ್ಥೆಗಳು ಮತ್ತು ಯುವ ಮಿತ್ರರ ಒಕ್ಕೂಟ ಆಶ್ರಯದಲ್ಲಿ ಹಮ್ಮಿಕೊಂಡಿರುವ ಬೃಹತ್ ರಕ್ತದಾನ ಶಿಬಿರದ ಪೋಸ್ಟರ್ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ತಮ್ಮಣ್ಣ, ರಕ್ತದಾನ ಮಹಾದಾನ. ರಕ್ತಕ್ಕೆ ಪರ್ಯಾಯ ವಸ್ತು ಇಲ್ಲದ ಕಾರಣ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಗಳು, ಯುವಕರು ರಕ್ತದಾನ ಮಾಡಿ ಸಂಕಷ್ಟದಲ್ಲಿರುವ ಜೀವಗಳನ್ನು ಉಳಿಸಬೇಕು ಎಂದರು.ಅನಾರೋಗ್ಯ, ರಸ್ತೆ ಅಪಘಾತ ಸೇರಿದಂತೆ ಹಲವು ಸಮಸ್ಯೆಗಳಿಂದ ರೋಗಿಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ. ಈ ವೇಳೆ ರೋಗಿಗಳಿಗೆ ರಕ್ತ ನೀಡಿದಾಗ ಅವರಿಗೆ ಜೀವ ಉಳಿಯುತ್ತದೆ. ಸ್ಥಳೀಯ ಸಂಘ ಸಂಸ್ಥೆಗಳು ಇಂತಹ ಸಮಾಜ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ತುರ್ತು ಅಗತ್ಯದ ವೇಳೆ ರಕ್ತದಾನಕ್ಕೆ ನೆರವಾಗುತ್ತಿರುವುದು ಶ್ಲಾಘನೀಯ ಎಂದರು.

ಈ ವೇಳೆ ಬೊಪ್ಪಸಮುದ್ರ ಗೌರಿಶಂಕರ, ಕರಡಕೆರೆ ಯೋಗೇಶ್, ಮುಡೀನಹಳ್ಳಿ ಚೇತನ್ ಸೇರಿದಂತೆ ಇತರರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...