ಮಾಗಡಿ ರಾಯರ ಮಠದಲ್ಲಿ ಮಧ್ವ ನವಮಿ

KannadaprabhaNewsNetwork | Published : Feb 19, 2024 1:31 AM

ಸಾರಾಂಶ

ಮಾಗಡಿ: ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಧ್ವ ನವಮಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಮಧ್ವನಾಮಿ ಪ್ರಯುಕ್ತ ಮಧ್ವಾಚಾರ್ಯರ ವಿಗ್ರಹಕ್ಕೆ ವಿಶೇಷ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು.

ಮಾಗಡಿ: ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಧ್ವ ನವಮಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಮಧ್ವನಾಮಿ ಪ್ರಯುಕ್ತ ಮಧ್ವಾಚಾರ್ಯರ ವಿಗ್ರಹಕ್ಕೆ ವಿಶೇಷ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು, ಬೃಂದಾವನಕ್ಕೆ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಅರ್ಚಕ ಶ್ರೀನಿವಾಸಾಚಾರ್ ಮಧ್ವಾಚಾರ್ಯರ ಮಾತನಾಡಿ, ಮಧ್ವಾಚಾರ್ಯರು 1238ರಲ್ಲಿ ದಕ್ಷಿಣ ಭಾರತದ ಪಶ್ಚಿಮ ಕರಾವಳಿಯ ಉಡುಪಿಯ ಪಾಜಕ ಎಂಬ ಸ್ಥಳದಲ್ಲಿ ವಿಜಯದಶಮಿಯಂದು ಒಂದು ಸಣ್ಣ ಕುಟೀರದಲ್ಲಿ ಜನಿಸಿದರು.

ಮಧ್ವಾಚಾರ್ಯರ ಮೂಲ ಹೆಸರು ವಾಸುದೇವ ಮಧ್ವಾಚಾರ್ಯ. ತಂದೆ ಮಧ್ಯಗೇಹ ಭಟ್ಟ ಮತ್ತು ತಾಯಿ ವೇದವತಿ. ಇವರ ಗುರುಗಳಾದ ಅಚ್ಯುತ ಪ್ರಜ್ಞರು ಸನ್ಯಾಸತ್ವ ನೀಡಿ ಪೂರ್ಣಪ್ರಜ್ಞರೆಂಬ ಹೆಸರಿಡುತ್ತಾರೆ. ಮಧ್ವಾಚಾರ್ಯರು ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ತಮ್ಮ ಶಿಷ್ಯರಿಗೆ ಐತರೇಯ ಉಪನಿಷದ್ ಬೋಧಿಸುತ್ತಿರುತ್ತಾರೆ.

ಈ ವೇಳೆ ಮಧ್ವಾಚಾರ್ಯರ ಮೇಲೆ ಪುಷ್ಟವೃಷ್ಠಿಯಾಗುತ್ತದೆ. ಆ ಕ್ಷಣದಲ್ಲಿ ಗುರುಗಳು ಕಣ್ಮರೆಯಾಗುತ್ತಾರೆ. ಆನಂತರ ಅವರು ಹೂರಾಶಿಯೊಳಗೆ ಕಾಣುತ್ತಾರೆ. ಇದೇ ದಿನ ಗುರುಗಳು ಬದರಿಕಾಶ್ರಮವನ್ನು ಪ್ರವೇಶಿಸಿದ ದಿನವೆಂದು ಹೇಳಲಾಗುತ್ತದೆ. ಈ ಕಾರಣ ಈ ದಿನದಂದು ಮಾದ್ವನವಮಿ ಆಚರಿಸುತ್ತಾರೆ ಎಂದು ಹೇಳಿದರು.

ಶ್ರೀ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರಂತೆ ಶ್ರೀ ಮಧ್ವಾಚಾರ್ಯರು ಸಹ ನಮ್ಮದೇಶಕಂಡ ಪ್ರಮುಖ ತತ್ವಜ್ಞಾನಿಗಳಾಗಿದ್ದಾರೆ. ಇವರು ದ್ವೈತವಾದದ ತತ್ತ್ವಶಾಸ್ತ್ರವನ್ನು ಪ್ರತಿಪಾದಿಸುತ್ತಾರೆ. ಉಡುಪಿಯ ಶ್ರೀ ಕೃಷ್ಣ ಮಠಕ್ಕೂ ಶ್ರೀಮದ್ವಾಚಾರ್ಯರಿಗೂ ಅವಿನಾಭಾವ ಸಂಬಂಧವಿದೆ. ಶ್ರೀ ಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಸ್ಥಾಪಿಸಿದವರು ಎಂದು ಹೇಳಲಾಗುತ್ತದೆ ಎಂದರು.

ಆ ಕೃಷ್ಣನ ವಿಗ್ರಹವನ್ನು ಹೇಗೆ ಪಡೆದರು ಎಂಬುದಕ್ಕೆ ಒಂದು ಸ್ವಾರಸ್ಯಕರ ಕಥೆಯಿದೆ. ಒಮ್ಮೆ ಗುರುಗಳು ಗೋಪಿ ಚಂದನದ ದೊಡ್ಡ ಉಂಡೆಯನ್ನು ತಯಾರಿಸಿ ಉಡುಪಿಗೆ ಹೊರಡಲು ಸಿದ್ದರಾಗುತ್ತಾರೆ. ಆದರೆ ಸಮುದ್ರ ತೀರದ ಬಳಿ ಉಂಡೆಯು ಎರಡು ಭಾಗವಾಗಿ ಒಡೆಯುತ್ತದೆ. ಇದರ ಫಲವಾಗಿ ಕಡಲ ತೀರದಲ್ಲಿನ ಒಳಬಾಂಡೇಶ್ವರ ದೇವಸ್ಥಾನದಲ್ಲಿ ಬಾಲಕೃಷ್ಣ ಮತ್ತು ಬಲರಾಮನ ಪ್ರತಿಷ್ಠಾಪನೆ ಮಾಡುತ್ತಾರೆ. ಆನಂತರ ಈ ವಿಗ್ರಹಗಳನ್ನು ಉಡುಪಿಯ ಮಠದಲ್ಲಿ ಸ್ಥಾಪಿಸುತ್ತಾರೆ. ಶ್ರೀ ಮಧ್ವಾಚಾರ್ಯರು ದೇವಾಲಯದ ಸುತ್ತಲೂ ಅಷ್ಠಮಠಗಳನ್ನು ಸ್ಥಾಪಿಸಿದರೆಂದು ವಿವರಿಸಿದರು.

ಪೋಟೋ 18ಮಾಗಡಿ1:

ಮಾಗಡಿ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮದ್ವನವಮಿ ಆಚರಿಸಲಾಯಿತು.

Share this article