ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸಿದ ಮಾದಿಗ ಸಮಾಜ

KannadaprabhaNewsNetwork | Published : Aug 4, 2024 1:22 AM

ಸಾರಾಂಶ

ಕಡೂರುಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಉಪ ವರ್ಗ ರಚಿಸಿ ದಮನಿತ ಸಮುದಾಯಗಳಿಗೆ ಕೋಟಾ ಕಲ್ಪಿಸಲು ರಾಜ್ಯಗಳಿಗೆ ಅಧಿಕಾರ ನೀಡಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿ ತಾಲೂಕು ಮಾದಿಗ ಸಮಾಜದ ಮುಖಂಡರು ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ಸಂಭ್ರಮ

ಕನ್ನಡಪ್ರಭ ವಾರ್ತೆ, ಕಡೂರು

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿಯಲ್ಲಿ ಉಪ ವರ್ಗ ರಚಿಸಿ ದಮನಿತ ಸಮುದಾಯಗಳಿಗೆ ಕೋಟಾ ಕಲ್ಪಿಸಲು ರಾಜ್ಯಗಳಿಗೆ ಅಧಿಕಾರ ನೀಡಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿ ತಾಲೂಕು ಮಾದಿಗ ಸಮಾಜದ ಮುಖಂಡರು ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.ನಂತರ ಪತ್ರಿಕೆಯೊಂದಿಗೆ ಮಾತನಾಡಿದ ರಾಜ್ಯ ಮಾದಿಗ ಮೀಸಲಾತಿ ಹೋರಾಟ ಸಮಿತಿ ಕಾರ್ಯದರ್ಶಿ ಬಿ.ಟಿ. ಚಂದ್ರಶೇಖರ್ , ರಾಜ್ಯ ಸರ್ಕಾರ ತಕ್ಷಣವೇ ಸುಪ್ರೀಂ ಕೋರ್ಟ್ ತೀರ್ಪು ಜಾರಿಗೊಳಿಸಬೇಕು. ಸಂವಿಧಾನದ ಆಶಯ ಮತ್ತು ಮೂಲ ತತ್ವಗಳನ್ನು ಅರ್ಥ ಮಾಡಿಕೊಂಡು ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಬೇಕು. ಹಲವು ದಶಕಗಳ ಹೋರಾಟಕ್ಕೆ ಗೆಲುವು ದೊರೆತಿದ್ದು ಈ ತೀರ್ಪು ಇತಿಹಾಸ ಸೃಷ್ಟಿಸಿದೆ ಎಂದರು.ಬಿ.ಎನ್. ಮಲ್ಲಿಕಾರ್ಜುನ್ ಮಾತನಾಡಿ, ಮೀಸಲಾತಿ ಹೋರಾಟವನ್ನು ಸಂಪೂರ್ಣವಾಗಿ ನಿರ್ವಹಿಸಿದ ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ, ಎಚ್, ಆಂಜನೇಯ ಮತ್ತಿತರ ನಾಯಕರಿಗೆ ಕೃತಜ್ಞತೆಗಳು ಎಂದರು.

ಮಾದಿಗ ಸಮಾಜದ ಮುಖಂಡ ಶೂದ್ರ ಶ್ರೀನಿವಾಸ್ ಮಾತನಾಡಿ, ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಸಮರ್ಥನೀಯ ಎಂದು ಪೀಠ ತೀರ್ಪು ನೀಡಿದ್ದು, 30 ವರ್ಷಗಳ ಹೋರಾಟಕ್ಕೆ ಜಯ ಸಂದಿದೆ. ಇದಕ್ಕಾಗಿ ಹೋರಾಟ ನಡೆಸಿದ್ದ ಪ್ರತಿ ಯೊಬ್ಬರನ್ನೂ ಈ ಸಂದರ್ಭದಲ್ಲಿ ನೆನೆಯುತ್ತೇನೆ ಎಂದರು. ಸಮಾಜದ ಮುಖಂಡ ಎನ್.ಗಿರೀಶ್ ಮಾತನಾಡಿ, ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ದಮನಿತರ ಪರವಾಗಿ ಒಳಮೀಸಲಾತಿ ಕಲ್ಪಿಸಲು ರಾಜ್ಯಗಳಿಗೆ ಅಧಿಕಾರ ದೊರೆತಿದೆ. ಇದು ಹೋರಾಟಗಾರರ ತ್ಯಾಗಕ್ಕೆ ಸಿಕ್ಕ ಜಯ ಎಂದರುಎನ್.ಮಂಜಪ್ಪ ಮಾತನಾಡಿ, ಪರಿಶಿಷ್ಟ ಜಾತಿಯಲ್ಲಿನ ಕೆಲ ಪ್ರಬಲ ವರ್ಗಗಳು ಇದುವರೆಗೂ ಸರ್ಕಾರದ ಎಲ್ಲ ಸೌಲಭ್ಯ ಪಡೆಯುತ್ತಿದ್ದ ಕಾರಣ, ಅತಿ ಹಿಂದುಳಿದ ಅಸ್ಪೃಶ್ಯ ಜಾತಿ ಉಪ ಪಂಗಡಗಳಿಗೆ ದೊರೆಯಬೇಕಿದ್ದ ಎಲ್ಲ ಅವಕಾಶ ಗಳು ಕೈತಪ್ಪಿ ಹೋಗಿದ್ದವು. ಸುಪ್ರೀಂ ಕೋರ್ಟಿನ ತೀರ್ಪಿನ ಆಧಾರದ ಮೇಲೆ ರಾಜ್ಯ ಸರ್ಕಾರ ಜವಾಬ್ದಾರಿಯಿಂದ ಒಳ ಮೀಸಲಾತಿ ಜಾರಿ ಕುರಿತು ತನ್ನ ನಿಲುವು ಸ್ಪಷ್ಟಪಡಿಸಬೇಕು’ ಎಂದರು.ಸಮಾಜದ ಮುಖಂಡ ಕೆ.ಎಸ್.ಶಂಕರ್, ಶ್ರೀಕಾಂತ್, ಸುರೇಶ್, ಸಗುನಪ್ಪ, ಮಲ್ಲೇಶ್ವರದ ತಿಮ್ಮಣ್ಣ, ರಾಮಚಂದ್ರಪ್ಪ,ಲಕ್ಷ್ಮಣ್ , ಚಿಕ್ಕಂಗಳ ಲಕ್ಷ್ಮಣ್, ವೈ.ಟಿ.ಗೋವಿಂದಪ್ಪ, ಡಿ. ಪ್ರಶಾಂತ್,ಎನ್.ಗಿರೀಶ್,ಹುಲ್ಲೇಹಳ್ಳಿ ಲಕ್ಷ್ಮಣ್, ಬಿ.ಜಿ.ಮೈಲಾರಪ್ಪ, ಕೃಷ್ಣಪ್ಪ, ಗಂಗರಾಜು, ಚಂದ್ರಪ್ಪ, ಪ್ರಸನ್ನ,ಶ್ರೀನಿವಾಸ್, ರಾಘವೇಂದ್ರ, ವಿನೋದ್, ಬಸವರಾಜ್, ಜಯಣ್ಣ, ಶ್ರೀನಿಧಿ ಲೋಕೇಶ್, ಜಗದೀಶ್, ಗಣೇಶ್ ಸೇರಿದಂತೆ ಸಮಾಜದ ನೂರಾರು ಮುಖಂಡರಿದ್ದರು.

2ಕೆಕೆಡಿಯು1.

ಕಡೂರಿನ ಅಂಬೇಡ್ಕರ್ ಪ್ರತಿಮೆ ಬಳಿ ಸುಪ್ರೀಂ ಕೋರ್ಟ್ ನ ಒಳಮೀಲಾತಿ ತೀರ್ಪಿನ ಹಿನ್ನೆಲೆಯಲ್ಲಿ ಮಾದಿಗ ಸಮಾಜದ ಮುಖಂಡರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಮಾಲೆ ಹಾಕಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

Share this article