ಭಾಗಮಂಡಲದಿಂದ ಹಾರಂಗಿ ಸಂಗಮ ತನಕ ಕಾವೇರಿಗೆ ಮಹಾರತಿ

KannadaprabhaNewsNetwork | Published : Aug 23, 2024 1:05 AM

ಸಾರಾಂಶ

ಹುಣ್ಣಿಮೆ ಅಂಗವಾಗಿ ಭಾಗಮಂಡಲ ಸಂಗಮದಿಂದ ಹಾರಂಗಿ ಸಂಗಮ ತನಕ ಕಾವೇರಿ ನದಿ ತಟದ ಹಲವು ಸ್ಥಳಗಳಲ್ಲಿ ನಮಾಮಿ ಕಾವೇರಿ ತಂಡದ ಮೂಲಕ ಮಹಾ ಆರತಿ ಕಾರ್ಯಕ್ರಮ ನಡೆಯಿತು.ಭಾಗಮಂಡಲ ಕುಂದಚೇರಿ, ಕಕ್ಕಬೆ, ಗುಹ್ಯ ಕೂಡುಗದ್ದೆ, ಕುಶಾಲನಗರ, ಕೊಪ್ಪ, ಗುಮ್ಮನ ಕೊಲ್ಲಿ, ಮುಳ್ಳುಸೋಗೆ, ಕೂಡು ಮಂಗಳೂರು ಮತ್ತಿತರ ಸ್ಥಳಗಳಲ್ಲಿ ನಮಾಮಿ ಕಾವೇರಿ ತಂಡದ ಸ್ಥಳೀಯ ಸದಸ್ಯರು ನದಿಗೆ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಹುಣ್ಣಿಮೆ ಅಂಗವಾಗಿ ಭಾಗಮಂಡಲ ಸಂಗಮದಿಂದ ಹಾರಂಗಿ ಸಂಗಮ ತನಕ ಕಾವೇರಿ ನದಿ ತಟದ ಹಲವು ಸ್ಥಳಗಳಲ್ಲಿ ನಮಾಮಿ ಕಾವೇರಿ ತಂಡದ ಮೂಲಕ ಮಹಾ ಆರತಿ ಕಾರ್ಯಕ್ರಮ ನಡೆಯಿತು.

ಭಾಗಮಂಡಲ ಕುಂದಚೇರಿ, ಕಕ್ಕಬೆ, ಗುಹ್ಯ ಕೂಡುಗದ್ದೆ, ಕುಶಾಲನಗರ, ಕೊಪ್ಪ, ಗುಮ್ಮನ ಕೊಲ್ಲಿ, ಮುಳ್ಳುಸೋಗೆ, ಕೂಡು ಮಂಗಳೂರು ಮತ್ತಿತರ ಸ್ಥಳಗಳಲ್ಲಿ ನಮಾಮಿ ಕಾವೇರಿ ತಂಡದ ಸ್ಥಳೀಯ ಸದಸ್ಯರು ನದಿಗೆ ಪೂಜೆ ಸಲ್ಲಿಸಿ ಆರತಿ ಬೆಳಗಿ ಸ್ವಚ್ಛ ಕಾವೇರಿಗಾಗಿ ಮತ್ತು ನಾಡಿನ ಕ್ಷೇಮಕ್ಕಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ತಂಡ ಮತ್ತು ಕಾವೇರಿ ಬಳಗದ ಸದಸ್ಯರು ಪಾಲ್ಗೊಂಡಿದ್ದರು.

ಕುಶಾಲನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ಆರತಿ ಕ್ಷೇತ್ರದಲ್ಲಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಕುಶಾಲನಗರ ತಾಲೂಕು ಎಸ್‌ಎನ್‌ಡಿಪಿ ಶಾಖೆ ಮತ್ತು ಶ್ರೀ ಮುತ್ತಪ್ಪ ದೇವಾಲಯ ಆಡಳಿತ ಮಂಡಳಿ ಸಹಯೋಗದೊಂದಿಗೆ ನಮಾಮಿ ಕಾವೇರಿ ತಂಡದ ಸದಸ್ಯರು 162ನೇ ಮಹಾ ಆರತಿ ಕಾರ್ಯಕ್ರಮ ಸಂಯೋಜಿಸಿದ್ದರು.

ಅರ್ಚಕ ಕೃಷ್ಣಮೂರ್ತಿ ಭಟ್ ಕುಂಕುಮಾರ್ಚನೆ ಅಷ್ಟೋತ್ತರ ನಂತರ ನದಿಗೆ ಆರತಿ ಬೆಳಗಿದರು.

ನಮಾಮಿ ಕಾವೇರಿ ತಂಡದ ಪ್ರಮುಖರಾದ ವನಿತಾ ಚಂದ್ರಮೋಹನ್ ಮಂಡೆಪಂಡ ಬೋಸ್ ಮೊಣ್ಣಪ್ಪ, ಡಿ.ಆರ್‌. ಸೋಮಶೇಖರ್, ಧರಣಿ ಸೋಮಣ್ಣ ಹಾಗೂ ಕುಶಾಲನಗರ ಎಸ್ಎನ್ ಡಿಪಿ ಶಾಖೆ ಅಧ್ಯಕ್ಷ ಗಣೇಶ್, ಕಾರ್ಯದರ್ಶಿ ಅನೀಶ್, ಸದಸ್ಯರಾದ ಕಿಶೋರ್ ಉದಯ್, ಮಹಿಳಾ ಘಟಕದ ಅಧ್ಯಕ್ಷ ಸವಿತಾ, ಕಾರ್ಯದರ್ಶಿ ಶ್ರೀಜಾ ಮತ್ತು ನಿರ್ದೇಶಕರು ಇದ್ದರು.

ಪೂಜಾ ಕಾರ್ಯಕ್ರಮಕ್ಕೂ ಮುನ್ನ ಪ್ರವಾಹ ಹಿನ್ನೆಲೆಯಲ್ಲಿ ಕೆಸರಿನಿಂದ ತುಂಬಿದ್ದ ಕಾವೇರಿ ನದಿ ಪಾತ್ರದ ಸ್ವಚ್ಛತಾ ಕಾರ್ಯ ಮಾಜಿ ಕಾರ್ಯದರ್ಶಿ ಕೆ.ಆರ್‌. ರಾಜೇಶ್‌ ನೇತೃತ್ವದಲ್ಲಿ ನಡೆಯಿತು.

Share this article