ನರಗುಂದ: ಮಳೆಗಾಲದಲ್ಲಿ ಜನರು ಮಳೆ ನೀರು ನಿಲ್ಲದಂತೆ ನೋಡಿಕೊಂಡರೆ ಸೊಳ್ಳೆಗಳ ಉತ್ಪಾದನೆ ನಿಯಂತ್ರಣ ಮಾಡಲು ಸಾಧ್ಯ ಎಂದು ಜಗಾಪುರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಐ.ಆರ್. ಗಂಜಿ ಹೇಳಿದರು.
ಸಂಪನ್ಮೂಲ ವ್ಯಕ್ತಿ ಎಸ್.ಆರ್. ದೇಸಾಯಿ ಮಾತನಾಡಿ, ಈಡಿಸ್ ಇಜಿಪ್ಟೈ ಸೊಳ್ಳೆ ಕಡಿತದಿಂದ ಡೆಂಘೀ ಬರುತ್ತದೆ. ಈ ರೋಗಪೀಡಿತ ವ್ಯಕ್ತಿಗೆ ಸುಮಾರು 1 ವಾರದೊಳಗೆ ತೀವ್ರವಾದ ಜ್ವರ, ತಲೆನೋವು ಕಣ್ಣುಗಳ ಹಿಂಭಾಗದಲ್ಲಿ ತೀವ್ರವಾದ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು ಕಂಡುಬರುತ್ತದೆ. ಅಂತಹ ಲಕ್ಷಣ ಇದ್ದರೆ ತಕ್ಷಣ ಆಸ್ಪತ್ರೆಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಬೇಕು. ಸಕಾಲಕ್ಕೆ ಚಿಕಿತ್ಸ ಪಡೆದರೆ ಸಾವು ಸಂಭವಿಸುವುದನ್ನು ತಪ್ಪಿಸಲು ಸಾಧ್ಯ ಎಂದರು.
ಈರಣ್ಣ ಚಿಲಿಮಿ ಮಾತನಾಡಿ, ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳಲು ಸ್ವಯಂ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು. ಸಾಯಂಕಾಲ ಮನೆಗಳಲ್ಲಿ ಬೇವಿನಸೊಪ್ಪಿನ ಹೊಗೆ ಹಾಕುವುದು, ಕಿಟಕಿ, ಬಾಗಿಲುಗಳಿಗೆ ಜಾಳಿಗೆ ಅಳವಡಿಸುವುದು, ಮೈ ತುಂಬಾ ಬಟ್ಟೆ ಸರಿಸುವುದು, ಸೊಳ್ಳೆ ಪರದೆ, ಸೊಳ್ಳೆ ಬತ್ತಿ ಬ್ಯಾಟ್, ದ್ರಾವಣಗಳನ್ನು ಉಪಯೋಗಿಸುವುದರ ಬಗ್ಗೆ ತಿಳಿಸಿದರು.ಸಿ.ಎಫ್. ಕುಂಬಾರ, ಮಂಜುನಾಥ ಕುದರಿ, ಶಿವಾನಂದ ಕುರಹಟ್ಟಿ, ವಿ.ಎಫ್. ಭೀಮಣ್ಣವರ, ವಿ.ವಿ. ಅಡಕಿ ಇದ್ದರು.