ನೂತನ ಪ್ರವಾಸಿ ಮಂದಿರ ಸದ್ಬಳಕೆ ಮಾಡಿಕೊಳ್ಳಿ

KannadaprabhaNewsNetwork |  
Published : Jul 28, 2025, 01:41 AM IST
ಮೂಡಲಗಿಯ ಗುರ್ಲಾಪೂರ ಪಟ್ಟಣದಲ್ಲಿ ನೀರಾವರಿ ಇಲಾಖೆಯಿಂದ ₹5.40 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರವಾಸಿ ಮಂದಿರವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಿದರು. | Kannada Prabha

ಸಾರಾಂಶ

ನಮ್ಮ ಬಿಜೆಪಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಗೋಕಾಕ ಶಾಸಕರಾದ ರಮೇಶ ಜಾರಕಿಹೊಳಿಯವರ ಸೇವೆ ಬಹಳಷ್ಟಿದೆ.

ಕನ್ನಡಪ್ರಭ ವಾರ್ತೆ ಮೂಡಲಗಿ

ಸಾರ್ವಜನಿಕರ ಕೋರಿಕೆಯ ಮೇರೆಗೆ ಮೂಡಲಗಿ ಪುರಸಭೆ ವ್ಯಾಪ್ತಿಯ ಗುರ್ಲಾಪೂರ (ಕ್ರಾಸ್)ದಲ್ಲಿ ನೂತನವಾಗಿ ಪ್ರವಾಸಿ ಮಂದಿರವನ್ನು ನಿರ್ಮಿಸಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಪಟ್ಟಣದ ಗುರ್ಲಾಪೂರ( ಕ್ರಾಸ್) ಬಳಿ ನೀರಾವರಿ ಇಲಾಖೆಯಿಂದ ಸುಮಾರು ₹5.40 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪ್ರವಾಸಿ ಮಂದಿರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರವಾಸಿ ಮಂದಿರ ನಿರ್ಮಾಣದಿಂದ ಗಣ್ಯರು, ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿದೆ ಎಂದು ಹೇಳಿದರು. ಮೂಡಲಗಿ- ಗುರ್ಲಾಪೂರ ಪಟ್ಟಣದಲ್ಲಿ ಪ್ರವಾಸಿ ಮಂದಿರ ನಿರ್ಮಾಣವಾಗಲು ನಮ್ಮ ಬಿಜೆಪಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಗೋಕಾಕ ಶಾಸಕರಾದ ರಮೇಶ ಜಾರಕಿಹೊಳಿಯವರ ಸೇವೆ ಬಹಳಷ್ಟಿದೆ. ಅವರೇ ಇದಕ್ಕಾಗಿ ₹5 ಕೋಟಿ ಅನುದಾನ ಮಂಜೂರು ಮಾಡಿಸಿದ್ದನ್ನು ಸ್ಮರಿಸಿದರು. ಇತರೇ ಫರ್ನಿಚರ್ ಕೆಲಸಗಳಿಗಾಗಿ ₹40 ಲಕ್ಷ ಖರ್ಚು ಮಾಡಬೇಕಾಯಿತು. ಸುಮಾರು ₹5.40 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ ಪ್ರವಾಸಿ ಮಂದಿರ ನಿರ್ಮಿಸಿರುವ ಅಧಿಕಾರಿಗಳು- ಗುತ್ತಿಗೆದಾರರನ್ನು ಬಾಲಚಂದ್ರ ಜಾರಕಿಹೊಳಿ ಅಭಿನಂದಿಸಿದರು.

ಈ ಪ್ರವಾಸಿ ಮಂದಿರವನ್ನು ಸ್ವಚ್ಛವಾಗಿಡಬೇಕು. ಗಣ್ಯರು, ಮತ್ತಿತರ ಅಧಿಕಾರಿಗಳು, ಸಾರ್ವಜನಿಕರ ಸಭೆ ನಡೆಸಲು ಉಪಯೋಗಿಸಬೇಕು. ಅನಾವಶ್ಯಕ ಚರ್ಚೆಗೆ ದುರ್ಬಳಕೆ ಮಾಡಬೇಡಿ. ಸಭೆಗಳು ಮತ್ತು ಗಣ್ಯರ ವಿಶ್ರಾಂತಿಗಾಗಿ ಇದನ್ನು ಮೀಸಲಿಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮೂಡಲಗಿ ಪುರಸಭೆ ಅಧ್ಯೆಕ್ಷೆ ಖುರ್ಷಾದ ಅನ್ವರ ನದಾಫ, ಆರ್.ಪಿ.ಸೋನವಾಲಕರ, ಮಾಜಿ ಅಧ್ಯಕ್ಷರಾದ ರಾಮಣ್ಣಾ ಹಂದಿಗುಂದ, ಹಣಮಂತ ಗುಡ್ಲಮನಿ, ರವಿ ಸಣ್ಣಕ್ಕಿ, ಮರಿಯಪ್ಪ ಮರಿಯಪ್ಪಗೋಳ, ಮಲ್ಲಿಕಾರ್ಜುನ ಕಬ್ಬೂರ ಸದಸ್ಯರಾದ ಸಂತೋಷ ಸೋನವಾಲಕರ, ಜಯಾನಂದ ಪಾಟೀಲ, ಆನಂದ ಟಪಾಲ, ಸಿದ್ದು ಗಡೇಕಾರ, ಪ್ರಕಾಶ ಮುಗಳಖೋಡ, ಹುಸೇನ ಶೇಖ, ಸುಭಾಸ ಸಣ್ಣಕ್ಕಿ, ರಾಜು ಪೂಜೇರಿ, ಶಿವು ಸಣ್ಣಕ್ಕಿ, ಶಿವು ಚಂಡಕಿ, ರವಿ ಮೂಡಲಗಿ, ಲಕ್ಕಪ್ಪ ಶಾಬನ್ನವರ, ವೀರುಪಾಕ್ಷ ಮುಗಳಖೋಡ, ಅಧಿಕಾರಿಗಳು ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ