ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಗೊಳಿಸಿ: ಸೂರಿ ಶ್ರೀನಿವಾಸ್

KannadaprabhaNewsNetwork | Published : Mar 6, 2025 12:33 AM

ಸಾರಾಂಶ

ತರೀಕೆರೆ, ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮಾ. 7 ಮತ್ತು 8 ರಂದು ತರೀಕೆರೆ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಆಯೋಜಿಸಿರುವ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿ ಹಾಗೂ ಅರ್ಥಪೂರ್ಣವಾಗಿ ನೆರವೇರಲು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮನವಿ ಮಾಡಿದ್ದಾರೆ.

ನಾಳೆಯಿಂದ ತರೀಕೆರೆಯಲ್ಲಿ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ । ಕನ್ನಡಪ್ರಭ ವಾರ್ತೆ, ತರೀಕೆರೆಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮಾ. 7 ಮತ್ತು 8 ರಂದು ತರೀಕೆರೆ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಆಯೋಜಿಸಿರುವ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿ ಹಾಗೂ ಅರ್ಥಪೂರ್ಣವಾಗಿ ನೆರವೇರಲು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮನವಿ ಮಾಡಿದ್ದಾರೆ.

ಅನೇಕ ಕನ್ನಡದ ಕಟ್ಟಾಳುಗಳು ಹಾಗೂ ಕನ್ನಡಪರ ಸಂಘ ಸಂಸ್ಥೆಗಳು, ಸಾಹಿತಿಗಳು ಕಲಾವಿದರು ಗಣ್ಯರು ಸಮ್ಮೇಳನಕ್ಕೆ ಆಗಮಿಸಿ ತರೀಕೆರೆಯಲ್ಲಿ ನೆನಪಿನಂಗಳದಲ್ಲಿ ಉಳಿಯುವಂತೆ ಮಾಡಲು ಸರ್ವರ ಸಹಯೋಗ ಮತ್ತು ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಕನ್ನಡಾಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.ಕಳೆದ 15 ವರ್ಷಗಳ ಹಿಂದೆ ತರೀಕೆರೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನ ನಡೆಸಲಾಗಿತ್ತು.ಹಾಗಾಗಿ ತರೀಕೆರೆಯಲ್ಲಿ 2 ಬಾರಿಗೆ ಸಮ್ಮೇಳನ ನಡೆಯುತ್ತಿದ್ದು, ಎಲ್ಲಾ ಸಿದ್ದತೆಗಳು ಭರದಿಂದ ಮುನ್ನಡೆದಿದೆ. ಸಮ್ಮೇಳನಕ್ಕಾಗಿ ವಿಶೇಷ ಲಾಂಛನ ಬಿಡುಗಡೆ ಗೊಳಿಸಿದ್ದು, ಸಮ್ಮೇಳನಾಧ್ಯಕ್ಷರಾಗಿ ರಂಗೇನಹಳ್ಳಿ ಡಾ.ಎಚ್.ಎಂ.ಮರುಳಸಿದ್ದಯ್ಯ ಪಟೇಲ್ ಆಯ್ಕೆಯಾಗಿರುವುದು ಎಲ್ಲಾ ಸಾಹಿತಿಗಳು ಸೇರಿದಂತೆ ಎಲ್ಲರಿಗೂ ಸಂತಸ ತಂದಿದೆ.

-- ಬಾಕ್ಸ್--

ಡಾ.ಎಚ್.ಎಂ.ಮರುಳಸಿದ್ದಯ್ಯ ಪಟೇಲ್ ಪರಿಚಯ:

20ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ತರೀಕೆರೆ ಸಮೀಪದ ರಂಗೇನಹಳ್ಳಿ ಸಾಹಿತಿ, ಹಿರಿಯ ಸಂಶೋಧಕ ರಂಗೇನಹಳ್ಳಿ ಡಾ.ಎಚ್.ಎಂ.ಮರುಳಸಿದ್ದಯ್ಯ ಪಟೇಲ್ ಅಪ್ಪಟ ಗ್ರಾಮೀಣ ಪ್ರತಿಭೆ.

ಮರಿಯಪ್ಪ ಪಟೇಲ್ ಮತ್ತು ಚಂದ್ರಮ್ಮ ಅವರ ಪುತ್ರರಾದ ಇವರು ಬಾಲ್ಯದ ವಿದ್ಯಾಭ್ಯಾಸವನ್ನುರಂಗೇನಹಳ್ಳಿಯಲ್ಲಿ ಮಾಡಿದ್ದು, ಮೈಸೂರು ಮಾನಸಗಂಗೋತ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಭಾರತೀಯ ಮಾನವ ವಿಜ್ಞಾನ ಸರ್ವೇಕ್ಷಣ ವಿಷಯದಲ್ಲಿ ಸಂಶೋಧಾನ ಪಿ.ಎಚ್.ಡಿ. ಪಡೆದಿದ್ದಾರೆ.

ಸಮಾಜದ ಬಡವರ, ದೀನದಲಿತರು, ಕಾಡುಮೇಡುಗಳಲ್ಲಿ ವಾಸಿಸುವ ಅಜ್ಞಾತ ಜನಾಂಗದ ಬಗ್ಗೆ ಅತೀವ ಅನುಕಂಪ ಹೊಂದಿರುವ ಇವರು ನೊಂದ ಜೀವಿಗಳ ಪರವಾಗಿ ದೃಢ ಸಂಕಲ್ಪ ಹೊದಿದ್ದು ಮಾನವ ವಿಜ್ಞಾನ ಸರ್ವೇಕ್ಷಣಾ ಇಲಾಖೆಯಲ್ಲಿ ಹಿರಿಯ ಸಂಶೋಧನಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ದೇಶದ ಅನೇಕ ರಾಜ್ಯಗಳಲ್ಲಿ ಕಾಡು ಮೇಡುಗಳಲ್ಲಿ ವಾಸಿಸುವ ನಾಗರಿಕ ಸಮಾಜದಿಂದ ದೂರವೇ ಉಳಿದಿದ್ದ ಅನೇಕ ಅಜ್ಞಾತ ಬುಡಕಟ್ಟು ಸಮುದಾಯಗಳೊಂದಿಗೆ ಕಲೆತು-ಬೆರೆತು ಆ ಜನರ ಜನನದಿಂದ ಅಂತ್ಯದ ವರೆಗಿನ ಜೀವನ ಪದ್ದತಿ, ಕುಲ ಕಸುಬು ಆಚಾರ ವಿಚಾರ ನಡೆ-ನುಡಿ ಇತ್ಯಾದಿ ಜೀವನ ಕ್ರಮವನ್ನು ಆಧ್ಯಯನ ಮಾಡಿ ಸರ್ಕಾರಕ್ಕೆ ವರದಿ ನೀಡಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದು ಸರ್ಕಾರದಿಂದ ದೊರೆಯಬಹುದಾದ ನಾಗರಿಕ ಸೌಲಭ್ಯ ಕಲ್ಪಿಸಿ ಕೊಡುವ ಕಾಯಕದಲ್ಲಿ ಇವರ ಶ್ರದ್ಧೆ, ನಿಷ್ಟೆ ಸರ್ವರ ಮೆಚ್ಚುಗೆ ಪಡೆದಿದೆ.

76 ವಿವಿಧ ಸಂಶೋದನಾ ಲೇಖನ: ಪಲ್ ಅಫ್ ಇಂಡಿಯ ಎಂಬ ರಾಷ್ಟ್ರೀಯ ಯೋಜನೆಯಲ್ಲಿ ಅವಸಾನದ ಅಂಚಿನಲ್ಲಿರುವ ಅನೇಕ ಜಾನಪದ ಕಲೆಗಳಾದ ಸಂಗೀತ, ಜಾನಪದ ವಾದ್ಯ ಪರಿಕರ, ಸಾಹಿತ್ಯವೇಷ-ಭೂಷಣ ಹಾಗೂ ಸಂಪ್ರದಾಯಗಳ ಅಧಿಕೃತ ದಾಲೀಕರಣ ಮತ್ತು ಪ್ರಸರಣಗಳಲ್ಲಿ ತೊಡಗಿ, ಸಂಶೋಧನಾ ವರದಿ, 76 ವಿವಿಧ ಸಂಶೋದನಾ ಲೇಖನಗಳನ್ನು ಅನೇಕ ಸಂಪುಟದಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ.ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮದಲ್ಲಿ ಅತಿ ಹೆಚ್ಚು ಸಂಸ್ಕೃತ ಭಾಷೆ ಮಾತನಾಡುವ ಕುಟುಂಬಗಳ ಹಾಗು ಕೃಷ್ಣರಾಜ ನಗರದ ರುದ್ರಪಟ್ಟಣ ಗ್ರಾಮದ ಸಂಗೀತಗಾರರ ಕುಟುಂಬಗಳಾದ ಸಂಕೇತಿ ಸಮುದಾಯದ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಅನೇಕ ಅಪರಿಚಿತ ಸಮುದಾಯಗಳ ಜೀವನ ಪದ್ದತಿಯನ್ನು ಪುಸ್ತಕ ರೂಪದಲ್ಲಿ ಪರಿಚಯಿಸಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ದೇಶ ವಿದೇಶಗಳಲ್ಲಿ ಇವರ ಸಂಶೋಧನೆಯನ್ನು ಪುರಸ್ಕರಿಸಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ. ಅತ್ಯುನ್ನತ ಪ್ರಶಸ್ತಿಯಾದ ಮ್ಯಾನ್ ಅಫ್ ದಿ.ಇಯರ್-10 ಪ್ರಶಸ್ತಿ ಪದೆದು ಭಾರತ ದೇಶಕ್ಕೆ ಗೌರವ ತಂದಿದ್ದಾರೆ.-- ಕನ್ನಡ ಲಾಂಛನ 20ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಿದ್ದಗೊಳಿಸಿರುವ ಕನ್ನಡ ಲಾಂಛನ ಜಿಲ್ಲೆಯ ಶೃಂಗೇರಿ ಶ್ರೀ ಶಾರದ ಪೀಠ, ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠ, ದೇವನೂರು ಮಹಾಕವಿ ಲಕ್ಷ್ಮೀಶ, ಅಮೃತಾಪುರದ ಶ್ರೀ ಅಮೃತೇಶ್ವರಸ್ವಾಮಿ ಕ್ಷೇತ್ರ, ಕಲ್ಲತ್ತಿಗಿರಿ ಜಲಪಾತ, ಚಿಕ್ಮಮಗಳೂರು ವನಸಿರಿ, ಜಾನಪದ ಕಲೆ, ಸಂಗೀತ, ಇತ್ಯಾದಿ ಕಲೆಗಳನ್ನು ಬಿಂಬಿಸಿದ್ದು ಸಮ್ಮೇಳನದ ಲಾಂಛನ ಜಿಲ್ಲೆಯ ಐತಿಹಾಸಿಕ ಕುರುಹಿನಂತೆ ಕಂಗೊಳಿಸಿದೆ.

--5ಕೆಟಿಆರ್.ಕೆ.8ಃ ಸಮ್ಮೇಳನದ ಕನ್ನಡ ಲಾಂಛನ5ಕೆಟಿಆರ್.ಕೆ 9ಃ ಡಾ.ಹೆಚ್.ಎಂ.ಮರುಳಸಿದ್ದಯ್ಯ ಪಟೇಲ್

Share this article