ಕಂಪ್ಲಿ ಪುರಸಭೆಗೆ ಪ್ರಭಾರಿ ಮುಖ್ಯಾಧಿಕಾರಿಯಾಗಿ ಮಲ್ಲಿಕಾರ್ಜುನ

KannadaprabhaNewsNetwork |  
Published : Jun 12, 2025, 05:26 AM IST
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕಂಪ್ಲಿ ಪುರಸಭೆಯ ಕಚೇರಿ ವ್ಯವಸ್ಥಾಪಕ ಬಿ.ಮಲ್ಲಿಕಾರ್ಜುನ ಪ್ರಭಾರ ಮುಖ್ಯಾಧಿಕಾರಿಯಾಗಿ ಬುಧವಾರ ಅಧಿಕಾರಿ ಸ್ವೀಕರಿಸಿದರು. | Kannada Prabha

ಸಾರಾಂಶ

ಪುರಸಭೆ ಕಚೇರಿಗೆ ಮುಖ್ಯಾಧಿಕಾರಿಗಳ ನಿಯೋಜನೆ ಕುರಿತು ಕನ್ನಡಪ್ರಭ ಪ್ರಕಟಿಸಿದ್ದ ವರದಿಗೆ ಎಚ್ಚೆತ್ತುಕೊಂಡು ಜಿಲ್ಲಾಡಳಿತ ಪುರಸಭೆ ಕಚೇರಿಯಲ್ಲಿನ ವ್ಯವಸ್ಥಾಪಕ ಮಲ್ಲಿಕಾರ್ಜುನ ಅವರನ್ನು ಪ್ರಭಾರಿಯಾಗಿ ನಿಯೋಜಿಸಿದ್ದು ಪತ್ರಿಕೆಯ ವರದಿಗೆ ಪಟ್ಟಣದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಂಪ್ಲಿ

ಪುರಸಭೆ ಕಚೇರಿಗೆ ಮುಖ್ಯಾಧಿಕಾರಿಗಳ ನಿಯೋಜನೆ ಕುರಿತು ಕನ್ನಡಪ್ರಭ ಪ್ರಕಟಿಸಿದ್ದ ವರದಿಗೆ ಎಚ್ಚೆತ್ತುಕೊಂಡು ಜಿಲ್ಲಾಡಳಿತ ಪುರಸಭೆ ಕಚೇರಿಯಲ್ಲಿನ ವ್ಯವಸ್ಥಾಪಕ ಮಲ್ಲಿಕಾರ್ಜುನ ಅವರನ್ನು ಪ್ರಭಾರಿಯಾಗಿ ನಿಯೋಜಿಸಿದ್ದು ಪತ್ರಿಕೆಯ ವರದಿಗೆ ಪಟ್ಟಣದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಮುಂಚೆಯಿದ್ದ ಮುಖ್ಯಾಧಿಕಾರಿ ಕೆ.ದುರುಗಣ್ಣ ಮೇ 31ರಂದು ವಯೋ ನಿವೃತ್ತಿ ಹೊಂದಿದ್ದು, ಈ ವರೆಗೂ ಪುರಸಭೆಗೆ ಮುಖ್ಯಾಧಿಕಾರಿ ಅಥವಾ ಪ್ರಭಾರಿಯಾಗಿ ಯಾವುದೇ ಅಧಿಕಾರಿಗಳೇ ಆಗಲಿ ನಿಯೋಜನೆಗೊಳ್ಳದೆ ಸಾರ್ವಜನಿಕರಿಗೆ ತೀರ ಸಮಸ್ಯೆಯಾಗಿತ್ತು. ಈ ಕುರಿತು ಕನ್ನಡಪ್ರಭ ಜೂ. 9ರಂದು ಮುಖ್ಯಾಧಿಕಾರಿಯಿಲ್ಲದೆ ಪುರಸಭೆ ಆಡಳಿತ ಅನಾಥ! ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಕಟಿಸಿತ್ತು. ಇದರಿಂದ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು ಮಂಗಳವಾರ ಪುರಸಭೆ ಕಚೇರಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಘವೇಂದ್ರ ಗುರು ಭೇಟಿ ನೀಡಿ ಪರಿಶೀಲಿಸಿದರು. ಇದರ ಬೆನ್ನಲ್ಲೇ ಕಚೇರಿಯ ವ್ಯವಸ್ಥಾಪಕ ಮಲ್ಲಿಕಾರ್ಜುನ ಅವರನ್ನು ಪುರಸಭೆಗೆ ಪ್ರಭಾರಿ ಮುಖ್ಯಾಧಿಕಾರಿಯಾಗಿ ನೇಮಿಸಿ ಜಿಲ್ಲಾಧಿಕಾರಿ ಬುಧವಾರ ಆದೇಶ ಹೊರಡಿಸಿದ್ದಾರೆ.

ಅಧಿಕಾರ ಸ್ವೀಕಾರ:

ಜಿಲ್ಲಾಧಿಕಾರಿ ಆದೇಶದ ಮೇರೆಗೆ ಪುರಸಭೆಯ ಕಚೇರಿ ವ್ಯವಸ್ಥಾಪಕ ಬಿ.ಮಲ್ಲಿಕಾರ್ಜುನ ಪ್ರಭಾರ ಮುಖ್ಯಾಧಿಕಾರಿಯಾಗಿ ಬುಧವಾರ ಅಧಿಕಾರ ಸ್ವೀಕರಿಸಿದರು.

ಮಲ್ಲಿಕಾರ್ಜುನ 2007ರಲ್ಲಿ ಹಡಗಲಿಯ ಪುರಸಭೆಯಲ್ಲಿ, 2010ರಿಂದ ಕಂಪ್ಲಿ ಪುರಸಭೆಯಲ್ಲಿ 11 ವರ್ಷ ಕರವಸೂಲಿಗಾರನಾಗಿ, 2021ರಲ್ಲಿ ಸಿರಗುಪ್ಪದ ನಗರಸಭೆಯಲ್ಲಿ ಬಡ್ತಿ ಹೊಂದಿ ಕಂದಾಯ ನಿರೀಕ್ಷಕರಾಗಿ, 2022ರಲ್ಲಿ ಕುರುಗೋಡು ಪುರಸಭೆಯಲ್ಲಿ ಕಂದಾಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿ, 2025ರಲ್ಲಿ ಮುಂಬಡ್ತಿ ಹೊಂದಿ ಕಂಪ್ಲಿ ಪುರಸಭೆಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

18 ವರ್ಷಗಳ ಕಾಲ ಪುರಸಭೆ, ನಗರಸಭೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದು, ಪಟ್ಟಣಿಗರಿಗೆ ಶುದ್ಧ ಕುಡಿವ ನೀರು, ಸ್ವಚ್ಛತೆ, ಬೀದಿದೀಪ ಸೇರಿ ಮೂಲ ಸೌಕರ್ಯ ಒದಗಿಸುವುದು, ಆಡಳಿತಾತ್ಮಕ ಸೇವೆಗಳನ್ನು ಸಕಾಲದಲ್ಲಿ ಒದಗಿಸುವುದಾಗಿ ತಿಳಿಸಿದರು. ಇದೇ ವೇಳೆ ಪುರಸಭೆ ಆಡಳಿತ ಮಂಡಳಿಯವರು ಇವರನ್ನು ಗೌರವಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ