ಮಂಡ್ಯ ಲೋಕಸಭಾ ಕ್ಷೇತ್ರ: ೧೭,೫೯,೧೭೫ ಮತದಾರರು..!

KannadaprabhaNewsNetwork | Published : Mar 18, 2024 1:50 AM

ಸಾರಾಂಶ

ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯೊಳಗೆ ೨೫ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸುವುದಕ್ಕೆ ಸ್ಥಳ ಗುರುತಿಸಲಾಗಿದೆ. ಮಳವಳ್ಳಿ-೫, ಮದ್ದೂರು-೪, ಶ್ರೀರಂಗಪಟ್ಟಣ-೫, ನಾಗಮಂಗಲ-೪, ಕೆ.ಆರ್.ಪೇಟೆ-೩ ಹಾಗೂ ಕೆ.ಆರ್.ನಗರದಲ್ಲಿ ೪ ಚೆಕ್‌ಪೋಸ್ಟ್‌ಗಳನ್ನು ಸ್ಥಾಪನೆಗೆ ಸ್ಥಳ ಗುರುತಿಸಲಾಗಿದೆ. ಈಗಾಗಲೇ ೧೯ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ಸೀಸಿ ಟೀವಿಗಳನ್ನು ಅಳವಡಿಸಲಾಗಿದೆ. ಇದರ ದೃಶ್ಯಾವಳಿಗಳನ್ನು ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲೂ ವೀಕ್ಷಣೆಗೆ ಅವಕಾಶ ಮಾಡಿದೆ.

ಕನ್ನಡಪ್ರಭ ವಾರ್ತೆ ಮಂಡ್ಯಲೋಕಸಭೆ ಸಾರ್ವತ್ರಿಕ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳಲ್ಲಿ ೧೭,೫೯,೧೭೫ ಮತದಾರರಿದ್ದಾರೆ. ೮,೬೭,೬೫೨ ಪುರುಷರು, ೮,೯೧,೩೫೫ ಹಾಗೂ ೧೬೮ ಇತರೆ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಳಲ್ಲಿ ೭,೬೦,೨೪೮ ಪುರುಷರು, ೭,೮೧,೪೫೨ ಮಹಿಳೆಯರು ಹಾಗೂ ೧೫೬ ಇತರೆ ಮತದಾರರು ಸೇರಿ ೧೫,೪೧,೮೫೬ ಮತದಾರರಿದ್ದಾರೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ಕ್ಷೇತ್ರ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವುದರಿಂದ ಆ ಕ್ಷೇತ್ರದೊಳಗೆ ೧,೦೭,೪೦೪ ಪುರುಷರು, ೧,೦೯,೯೦೩ ಮಹಿಳೆಯರು ಹಾಗೂ ೧೨ ಇತರೆ ಮತದಾರರು ಸೇರಿ ೧,೧೭,೩೧೯ ಮತದಾರರಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಬಾರಿ ೩೫,೧೪೦ ಯುವ ಮತದಾರರರು ಲೋಕಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ೧೮ ವರ್ಷ ತುಂಬಿದ ೧೯೦೦೪ ಯುವಕರು, ೧೬,೧೨೭ ಯುವತಿಯರು ಹಾಗೂ ೯ ಇತರೆ ಮತದಾರರಿದ್ದಾರೆ. ಇದರಲ್ಲಿ ಮಂಡ್ಯ ಜಿಲ್ಲೆಯಲ್ಲಿ ೧೬೨೧೬ ಯುವಕರು, ೧೩೯೫೮ ಯುವತಿಯರು, ಇತರೆ ೯ ಮತದಾರರೊಂದಿಗೆ ೩೦೧೮೩ ಯುವ ಮತದಾರರಿದ್ದರೆ, ಕೆ.ಆರ್.ನಗರ ಕ್ಷೇತ್ರದ ೨೭೮೮ ಯುವಕರು, ೨೧೬೯ ಯುವತಿಯರು ಸೇರಿ ೪೯೫೭ ಯುವ ಮತದಾರರೂ ಮತಪಟ್ಟಿಯಲ್ಲಿದ್ದಾರೆ ಎಂದು ವಿವರಿಸಿದರು.

ಮಂಡ್ಯ ಲೋಕಸಭಾ ಕ್ಷೇತ್ರದೊಳಗೆ ೮೫ ವರ್ಷ ಮೇಲ್ಪಟ್ಟವರು ೨೩,೦೪೪ ಮಂದಿ ಮತದಾರರಿದ್ದಾರೆ. ಇದರಲ್ಲಿ ಮಂಡ್ಯ ಜಿಲ್ಲೆಯೊಳಗೆ ೮೫ ವರ್ಷ ಮೇಲ್ಪಟ್ಟವರು ೧೦೩೩೬, ೯೦ ವರ್ಷ ಮೇಲ್ಪಟ್ಟವರು ೮೪೨೫ ಹಾಗೂ ೧೦೦ ವರ್ಷ ಮೇಲ್ಪಟ್ಟವರು ೫೭೪ ಮಂದಿ ಸೇರಿ ೧೯೩೩೫ ಮತದಾರರಿದ್ದರೆ, ಮೈಸೂರು ಜಿಲ್ಲೆಯ ಕೆ.ಆರ್.ನಗರ ಕ್ಷೇತ್ರದಲ್ಲಿ ೮೫ ವರ್ಷ ಮೇಲ್ಪಟ್ಟ ೧೯೧೭, ೯೦ ವರ್ಷ ಮೇಲ್ಪಟ್ಟ ೧೬೩೫ ಹಾಗೂ ೧೦೦ ವರ್ಷ ಮೇಲ್ಪಟ್ಟ ೧೫೭ ಮಂದಿ ಸೇರಿ ೩೭೦೯ ಮಂದಿ ಮತದಾನದ ಹಕ್ಕನ್ನು ಹೊಂದಿದ್ದಾರೆ ಎಂದರು.

ಸೇವಾ ಮತದಾರರು ೮೭೧ ಪುರುಷ, ೯೦ ಮಹಿಳೆಯರು ಸೇರಿ ೯೦೧ ಮತದಾರರಿದ್ದಾರೆ. ಇದರಲ್ಲಿ ಕೆ.ಆರ್.ನಗರ ಕ್ಷೇತ್ರ ೨೬೧ ಪುರುಷರು, ೭ ಮಹಿಳೆಯರು ಸೇರಿ ೨೬೮ ಮತದಾರರಿದ್ದಾರೆ ಎಂದರು.

ಎಂಟು ವಿಧಾನಸಭಾ ಕ್ಷೇತ್ರಗಳ ೧೫೯೧ ಪ್ರದೇಶಗಳಲ್ಲಿ ೨೯೨ ನಗರ ಹಾಗೂ ೧೭೮೨ ಗ್ರಾಮೀಣ ಸೇರಿದಂತೆ ೨೦೭೪ ಮತಕೇಂದ್ರಗಳನ್ನು ತೆರೆಯಲಾಗಿದೆ. ಮಂಡ್ಯ ಜಿಲ್ಲೆಯೊಳಗೆ ೧೩೯೪ ಸ್ಥಳಗಳಲ್ಲಿ ೨೬೦ ನಗರ ಹಾಗೂ ೧೫೬೨ ಗ್ರಾಮೀಣ ಪ್ರದೇಶಗಳಲ್ಲಿ ೧೮೨೨ ಮತಕೇಂದ್ರ ತೆರೆದಿದ್ದರೆ, ಕೆ.ಆರ್.ನಗರ ಕ್ಷೇತ್ರದ ೧೯೭ ಪ್ಪರದೇಶಗಳಲಲ್ಲಿ ೩೨ ನಗರ ಹಾಗೂ ೨೨೦ ಗ್ರಾಮೀಣ ಪ್ರದೇಶದಲ್ಲಿ ೨೫೨ ಮತಕೇಂದ್ರಗಳನ್ನು ತೆರೆದಿರುವುದಾಗಿ ಹೇಳಿದರು.

ಚುನಾವಣೆಯನ್ನು ಸುಸೂತ್ರವಾಗಿ ನಡೆಸುವ ಸಲುವಾಗಿ ೧೫೧ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಸ್ಟ್ಯಾಟಿಕ್ ಸರ್ವೇಲೆನ್ಸ್ ತಂಡ, ವೀಡಿಯೋ ಸರ್ವೇಲೆನ್ಸ್ ತಂಡಗಳನ್ನು ರಚಿಸಿ, ಅಧಿಕಾರಿ, ಸಿಬ್ಬಂದಿಗಳನ್ನು ನೇಮಕಾತಿ ಮಾಡಲಾಗಿದೆ. ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ಲಿಖಿತವಾಗಿ ಅಥವಾ ದೂರವಾಣಿ ಮೂಲಕ ಸಂಪರ್ಕಿಸಿ ದೂರು ದಾಖಲಿಸಲು ಅನುಕೂಲವಾಗುವಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ತಂಡಗಳನ್ನು ರಚಿಸಲಾಗಿದೆ ಎಂದರು.

೨೫ ಚೆಕ್‌ಪೋಸ್ಟ್‌ಗಳ ಸ್ಥಾಪನೆ:

ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯೊಳಗೆ ೨೫ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸುವುದಕ್ಕೆ ಸ್ಥಳ ಗುರುತಿಸಲಾಗಿದೆ. ಮಳವಳ್ಳಿ-೫, ಮದ್ದೂರು-೪, ಶ್ರೀರಂಗಪಟ್ಟಣ-೫, ನಾಗಮಂಗಲ-೪, ಕೆ.ಆರ್.ಪೇಟೆ-೩ ಹಾಗೂ ಕೆ.ಆರ್.ನಗರದಲ್ಲಿ ೪ ಚೆಕ್‌ಪೋಸ್ಟ್‌ಗಳನ್ನು ಸ್ಥಾಪನೆಗೆ ಸ್ಥಳ ಗುರುತಿಸಲಾಗಿದೆ. ಈಗಾಗಲೇ ೧೯ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ಸೀಸಿ ಟೀವಿಗಳನ್ನು ಅಳವಡಿಸಲಾಗಿದೆ. ಇದರ ದೃಶ್ಯಾವಳಿಗಳನ್ನು ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲೂ ವೀಕ್ಷಣೆಗೆ ಅವಕಾಶ ಮಾಡಿದೆ. ವಿಡಿಯೋಗ್ರಾಫರ್‌ಗಳನ್ನು ಅಲ್ಲಿಗೆ ನೇಮಿಸಲಾಗಿದೆ. ವಾಹನಗಳನ್ನು ಯಾವ ರೀತಿ ತಪಾಸಣೆ ಮಾಡಬೇಕೆಂಬ ಬಗ್ಗೆ ಅಧಿಕಾರಿಗಳು, ಸಿಬ್ಬಂದಿಗೆ ತರಬೇತಿಯನ್ನೂ ನೀಡಿರುವುದಾಗಿ ಹೇಳಿದರು.

೧೦ ಲಕ್ಷಕ್ಕಿಂತ ಹೆಚ್ಚು ಹಣವನ್ನು ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿದರೆ ಆದಾಯ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಪರಿಶೀಲನೆಗೊಳಪಡಿಸಲಾಗುವುದು. ೫೦ ಸಾವಿರಕ್ಕಿಂತ ಹೆಚ್ಚು ಹಣವನ್ನು ಕೊಂಡೊಯ್ಯುವುದು ಕಂಡುಬಂದಲ್ಲಿ ಅದನ್ನೂ ಪರಿಶೀಲಿಸಲಾಗುವುದು. ದಾಖಲೆಗಳು ಸಮರ್ಪಕವಾಗಿದ್ದರೆ ಅಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದರು.

ಗೋಷ್ಠಿಯಲ್ಲಿ ಜಿಪಂ ಸಿಇಓ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಇದ್ದರು.

ಚುನಾವಣಾ ವೇಳಾಪಟ್ಟಿ

ಅಧಿಸೂಚನೆ ಹೊರಡಿಸುವ ದಿನಾಂಕ

28.03.2024 (ಗುರುವಾರ)

ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ

04.04.2024 (ಗುರುವಾರ)

ನಾಮಪತ್ರ ಪರಿಶೀಲನೆ ದಿನಾಂಕ

05.04.2024 (ಶುಕ್ರವಾರ)

ನಾಮಪತ್ರ ಹಿಂಪಡೆಯಲು ಕೊನೆಯ ದಿನ

08.04.2024 (ಸೋಮವಾರ)

ಮತದಾನ ನಡೆಯುವ ದಿನಾಂಕ

26.04.2024 (ಶುಕ್ರವಾರ)
ಮತದಾನದ ವೇಳ

ಬೆಳಗ್ಗೆ 7 ರಿಂದ ಸಂಜೆ 6ರವರೆಗೆ

ಮತ ಎಣಿಕೆ ದಿನಾಂಕ.

04.06.2024 (ಮಂಗಳವಾರ)

Share this article