ಕನ್ನಡಪ್ರಭ ವಾರ್ತೆ ಕೋಲಾರ ಮಾವಿನ ಫಸಲಿಗೆ ನುಸಿ ರೋಗ ಮತ್ತು ಕೀಟ ಬಾಧೆ ಹೆಚ್ಚಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ರೈತರ ನೆರವಿಗೆ ಅಧಿಕಾರಿಗಳು ಮತ್ತು ಸರ್ಕಾರ ಬರುತ್ತಿಲ್ಲ. ನುಸಿ ರೋಗ ಮತ್ತು ಕೀಟಬಾಧೆ ತಡೆಯಲು ರೈತರು ಲಕ್ಷಾಂತರ ರು.ಗಳನ್ನು ಖರ್ಚು ಮಾಡಿ ಔಷಧಿಗಳ ಸಿಂಪಡಣೆ ಮಾಡಿದರೂ ರೋಗಗಳು ಹತೋಟಿಗೆ ಬರುತ್ತಿಲ್ಲ.ಪ್ರಕೃತಿ ವಿಕೋಪದಿಂದ ಈ ಬಾರಿ ಮಾವಿನ ಮರಗಳಲ್ಲಿ ೨ ಹಂತಗಳಲ್ಲಿ ಹೂವು ಕಾಣಿಸಿಕೊಂಡಿದ್ದು, ಡಿಸೆಂಬರ್ ಮತ್ತು ಜನವರಿಯಲ್ಲಿ ಬಂದ ಹೂವಿನಲ್ಲಿ ಸ್ವಲ್ಪ ಫಸಲನ್ನು ಕಾಣುವಂತಾಗಿದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ತಡವಾಗಿ ಕಾಣಿಸಿಕೊಂಡ ಹೂವು ಕಾಯಿ ಕಚ್ಚದೆ ಉಷ್ಣಾಂಶ ಹೆಚ್ಚಾಗಿ ಮರಗಳಿಂದ ಉದುರುವ ಪರಿಸ್ಥಿತಿ ನಿರ್ಮಾಣವಾಗಿದೆ.ಹತೋಟಿಗೆ ಬಾರದ ರೋಗ
ಕೋಟ್ ...............ಪ್ರಾರಂಭದಲ್ಲಿ ಉತ್ತಮ ಫಸಲು ಬರುತ್ತದೆಂಬ ನಿರೀಕ್ಷೆಯಲ್ಲಿ ಇರುವಾಗಲೇ ಹೂವಿನಿಂದ ಕಾಯಿ ಕಚ್ಚಿದ ನಂತರ ನುಸಿರೋಗ ಮತ್ತು ಕೀಟ ಬಾಧೆ ಗೋಲಿ ಗಾತ್ರದ ಕಾಯಿಗಳ ಮೇಲೆ ಬಿದ್ದ ಪರಿಣಾಮದಿಂದ ಕಾಯಿಗಳು ಹಳದಿ ಬಣ್ಣಕ್ಕೆ ಬಂದು ಮರಗಳಿಂದ ಉದುರುವಂತಾಗಿದೆ. ಈ ಬಾರಿ ಶೇ.೨೦ ರಷ್ಟು ಫಸಲು ರೈತನ ಕೈ ಸೇರುವ ನಿರೀಕ್ಷೆ ಇಲ್ಲ.- ಚಿನ್ನಪ್ಪರೆಡ್ಡಿ, ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ.
ಕೋಟ್ .....................ಈಗಾಗಲೇ ವಿಜ್ಞಾನಿಗಳು ಜಿಲ್ಲೆಯ ಮಾವಿನ ತೋಟಗಳಿಗೆ ಭೇಟಿ ನೀಡಿ ರೈತರಿಗೆ ಅರಿವು ನೀಡುವ ಕೆಲಸ ಮಾಡುತ್ತಿದ್ದಾರೆ. ಉಷ್ಣಾಂಶ ಹೆಚ್ಚಾದ ನಂತರ ನುಸಿರೋಗವು ಕಡಿಮೆಯಾಗುತ್ತಿದೆ. ನುಸಿರೋಗ ಯಾವ ತೋಟಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅಂತಹ ರೈತರು ವಿಜ್ಞಾನಿಗಳ ಸಲಹೆ ಪಡೆದು ಔಷಧಿಗಳ ಸಿಂಪಡಣೆ ಮಾಡಬೇಕು. - ಕುಮಾರಸ್ವಾಮಿ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ.