ಮಾವು: ಉತ್ತಮ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು

KannadaprabhaNewsNetwork | Published : Mar 4, 2025 12:37 AM

ಸಾರಾಂಶ

ರಾಮನಗರ: ಚಿಗುರೆಲೆಗಳಿಂದ ಮೈದುಂಬಿಕೊಂಡು, ಬಂಗಾರ ಬಣ್ಣದ ಹೂವುಗಳಿಂದ ಸಿಂಗಾರಗೊಂಡು, ಸಣ್ಣ ಗಾತ್ರದ ಕಾಯಿಗಳಿಂದ ಕಂಗೊಳಿಸುತ್ತಿರುವ ಮಾವಿನ ಮರಗಳು ಮಾವು ಬೆಳೆಗಾರರಲ್ಲಿ ಉತ್ತಮ ಫಸಲಿನ ನಿರೀಕ್ಷೆ ಮೂಡಿಸಿವೆ.

ರಾಮನಗರ: ಚಿಗುರೆಲೆಗಳಿಂದ ಮೈದುಂಬಿಕೊಂಡು, ಬಂಗಾರ ಬಣ್ಣದ ಹೂವುಗಳಿಂದ ಸಿಂಗಾರಗೊಂಡು, ಸಣ್ಣ ಗಾತ್ರದ ಕಾಯಿಗಳಿಂದ ಕಂಗೊಳಿಸುತ್ತಿರುವ ಮಾವಿನ ಮರಗಳು ಮಾವು ಬೆಳೆಗಾರರಲ್ಲಿ ಉತ್ತಮ ಫಸಲಿನ ನಿರೀಕ್ಷೆ ಮೂಡಿಸಿವೆ.

ಈ ವರ್ಷ ಮೂರು ಹಂತಗಳಲ್ಲಿ ಮರಗಳಲ್ಲಿ ಹೂವು ಕಾಣಿಸಿಕೊಳ್ಳುತ್ತಿದೆ. ನವೆಂಬರ್ - ಡಿಸೆಂಬರ್ ನಲ್ಲಿ ಬಿ್ಟ ಮಾವಿನಹೂ ಇಷ್ಟೊತ್ತಿಗಾಗಲೆ ಕಾಯಿ ಆಗಬೇಕಿತ್ತು. ಹಿಂದಿನ ಹೂ ಕಾಯಿಯಾಗಲು ಹೊಸದಾಗಿ ಬಂದಂತಹ ಹೂ ಬಿಡುತ್ತಿಲ್ಲ. ಡಿಸೆಂಬರ್ ನಲ್ಲಿ ಬಂದಿರುವ ಹೂ ಒಂದಷ್ಟು ಹೂ ಕಾಯಿ ಕಚ್ಚಿದೆ. ಸ್ವಲ್ಪ ತಡವಾದ ಹೂ ಕಾಯಿಕಚ್ಚಲು ಜನವರಿಯಲ್ಲಿ ಬಂದ ಹೂ ಅಡ್ಡಗಾಲಾಗಿದೆ. ಅದೇ ಮರದಲ್ಲಿ ಜನವರಿಯಲ್ಲಿ ಬಂದಂತಹ ಹೂವನ್ನು ಫೆಬ್ರವರಿಯಲ್ಲಿ ಬಂದಂತ ಹೂ ತಡೆಯುತ್ತಿದೆ.

ಹೊಸದಾಗಿ ಬರುವಂತಹ ಹೂ ಹಿಂದಿನ ಹೂವಿನ ಸಾರಂಶ ಹೀರಿಕೊಳ್ಳುವ ಕಾರಣ ಹಳೆ ಹೂ ಕಾಯಿ ಕಚ್ಚಲು ಬಿಡುತ್ತಿಲ್ಲ. ಹೀಗೆ ಬಹುತೇಕ ಮರಗಳಲ್ಲಿ ಹೂವು ಬಿಟ್ಟಿದ್ದರೆ, ಬಹುತೇಕ ಕಡೆಗಳಲ್ಲಿ ಚಿಗುರು - ಹೂವು - ಕಾಯಿ ಮೂರು ಕಾಣಿಸಿಕೊಂಡಿವೆ.

ಮಾವು ಒಂದು ವರ್ಷ ಬಿಟ್ಟು ಮತ್ತೊಂದು ವರ್ಷ ಭರ್ಜರಿ ಫಸಲು ನೀಡುವ ಬೆಳೆ. ಕಳೆದ ವರ್ಷ ಹವಾಮಾನ ವೈಪರೀತ್ಯದ ಕಾರಣ ಇಳುವರಿ ಕುಂಠಿತಗೊಂಡಿದ್ದರಿಂದ ಬೆಳೆಗಾರರು ನಷ್ಟ ಅನುಭವಿಸಿದ್ದರು. ಸದ್ಯಕ್ಕೆ ಮಾವಿನ ಗಿಡಗಳಲ್ಲಿ ಹೆಚ್ಚಿನ ಪ್ರಮಾಣದ ಹೂವು, ಹೂವಿನಷ್ಟೇ ಪ್ರಮಾಣದಲ್ಲಿ ಚಿಗುರೆಲೆಗಳೂ ತುಂಬಿಕೊಂಡಿವೆ.

ಕಳೆದ ವರ್ಷದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದ ಕಾರಣ ಮಾವಿನ ಬೆಳೆ ಕೈ ಕೊಟ್ಟಿತ್ತು. ಈ ಬಾರಿ ಬಿಸಿಲಿನ ತಾಪಮಾನ ದಿನೆ ದಿನೇ ಹೆಚ್ಚಾಗುತ್ತಿದ್ದರೂ ಮಾವಿಗೆ ಯಾವುದೇ ತೊಂದರೆಯಾಗಿಲ್ಲ.

ಒಂದು ಲಕ್ಷ ಮೆಟ್ರಿಕ್ ಟನ್ ನಿರೀಕ್ಷೆ :

ಮಾವು ಬೆಳೆಯುವಲ್ಲಿ ರಾಮನಗರ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿ ಇದೆ. ಜಿಲ್ಲೆಯಲ್ಲಿ ಸುಮಾರು 32 ಸಾವಿರ ಹೆಕ್ಟರ್ ಪ್ರದೇಶಲ್ಲಿ ಮಾವು ಬೆಳೆಯಲಾಗುತ್ತದೆ. ಪ್ರತಿವರ್ಷ ಸುಮಾರು 400ರಿಂದ 500 ಕೋಟಿಯ, ಒಂದೂವರೆ ಲಕ್ಷ ಮೆಟ್ರಿಕ್ ಟನ್ ವಹಿವಾಟು ಜಿಲ್ಲೆಯಲ್ಲಿ ನಡೆಯುತ್ತಿತ್ತು. ಈ ಬಾರಿ ಒಂದು ಲಕ್ಷ ಮೆಟ್ರಿಕ್ ಟನ್ ಪ್ರಮಾಣದ ಮಾವಿನ ನಿರೀಕ್ಷೆ ಹೊಂದಲಾಗಿದೆ.

ಇನ್ನು ಜಿಲ್ಲೆಯಲ್ಲಿ ಬಾದಾಮಿ, ಸೆಂದೂರ, ಬೈಗನಪಲ್ಲಿ, ನೀಲಂ, ತೋತಾಪುರಿ ಸೇರಿದಂತೆ ವಿವಿಧ ಜಾತಿಯ ಹಣ್ಣುಗಳನ್ನ ಬೆಳೆಯಲಾಗುತ್ತದೆ. ರಾಮನಗರದಿಂದ ಹೊರ ರಾಜ್ಯಗಳಿಗೂ ಕೂಡ ರಫ್ತುಮಾಡಲಾಗುತ್ತದೆ. ಪ್ರತಿವರ್ಷ ರಾಜ್ಯದ ಮಾರುಕಟ್ಟೆಗೆ ಜಿಲ್ಲೆಯ ಮಾವು ಮೊದಲು ಲಗ್ಗೆ ಇಡುತ್ತಿತ್ತು. ಆದರೆ, ಈ ವರ್ಷ ಮಾವು ಫಸಲು ತಡವಾಗುವ ಸಾಧ್ಯತೆಗಳಿವೆ.

ಹವಾಮಾನ ವೈಪರೀತ್ಯದ ಆತಂಕ :

ಈ ಬಾರಿಯೂ ಮಾವು ಬೆಳೆಗೆ ಹವಾಮಾನ ವೈಪರೀತ್ಯ ಅಡ್ಡಿಯಾಗುತ್ತದೆಯೋ ಎಂಬ ಆತಂಕ ಬೆಳೆಗಾರರಿಗೆ ಕಾಡುತ್ತಿದೆ. ಏರುತ್ತಿರುವ ತಾಪಮಾನ ಪರಿಣಾಮ ಮಾವು ಬೆಳೆ ಮೇಲೆ ತೀವ್ರವಾಗಿದೆ. ಹಗಲು ಸುಡು ಬಿಸಿಲಿನ ಉಷ್ಣಾಂಶವಿದ್ದು, ಇದೇ ಪ್ರಮಾಣ ಕಾಯಿಗಳು ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತವೆ. ಹಾಗಾಗಿ ಒಂದೆರೆಡು ದಿನ ಮಳೆಯಾದರೆ ಮಾವು ಬೆಳೆಗೆ ಅನುಕೂಲವಾಗಲಿದೆ. ಇಲ್ಲದಿದ್ದರೆ ಮತ್ತೆ ಹವಾಮಾನ ವೈಪರೀತ್ಯದಿಂದಾಗಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಮಾವು ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಮಾವಿನ ಕಾಯಿ ಬಿಸಿಲಿನ ತಾಪಕ್ಕೆ ಉದರಿ ಹೋಗದಂತೆ ಮಾವು ಬೆಳೆಗಾರರು ಔಷಧಿ ಪಡಿಸಲೇಬೇಕಾಗಿದೆ. ಜಿಗಿ ಹುಳ ಪ್ರಾರಂಭವಾಗಿದೆ. ಇದರ ನಿಯಂತ್ರಣದ ಜೊತೆಗೆ ಲಘು ಪೋಷಕಾಂಶಗಳನ್ನು ಒಳಗೊಂಡಂತಹ ಔಷಧಿ ಅನ್ನು ಕಚ್ಚಿರುವ ಕಾಯಿಗೆ ಸಿಂಪಡಿಸಲೇಬೇಕಾಗುತ್ತದೆ. ಇಲ್ಲದಿದ್ದರೆ ಇರುವ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ಮಾವು ಬೆಳೆಗಾರರು ಸಿಲುಕಿದ್ದಾರೆ.

ಕೋಟ್ ............

ಈ ವರ್ಷ ಮಾವಿನ ಮರಗಳಲ್ಲಿ ಮೂರು ಹಂತಗಳಲ್ಲಿ ಹೂವು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಮಾರುಕಟ್ಟೆಗೆ ತಡವಾಗಿ ಮಾವು ಬೆಳೆ ಬರಲಿದೆ. ಮಾವನ್ನು ಉಳಿಸಿಕೊಳ್ಳಲು ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ಬೆಳೆಗಾರರಿಗೆ ನಿರಂತರವಾಗಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ.

- ರಾಜು, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ರಾಮನಗರ

ಬಾಕ್ಸ್ ...................

ಮಾವ ಬೆಳೆಯ ವಿಸ್ತೀರ್ಣ

ತಾಲೂಕುವಿಸ್ತೀರ್ಣ(ಹೆಕ್ಟೇರ್ )

ರಾಮನಗರ12148.52

ಚನ್ನಪಟ್ಟಣ6483.9

ಮಾಗಡಿ7899.37

ಕನಕಪುರ5104.61

ಹಾರೋಹಳ್ಳಿ920.31

ಒಟ್ಟು32,556.72

3ಕೆಆರ್ ಎಂಎನ್ 1.ಜೆಪಿಜಿ

ಮಾವಿನ ಮರದಲ್ಲಿ ಚಿಗುರು, ಹೂವು ಹಾಗೂ ಕಾಯಿ ಬಿಟ್ಟಿರುವುದು.

Share this article