ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕದಲ್ಲಿನ ಅನೇಕ ಭಾಷೆಗಳು ಸತ್ತು ಹೋಗುತ್ತಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಕಳವಳ ವ್ಯಕ್ತಪಡಿಸಿದರು.ಕಲಾಮಂದಿರದ ಕಿರು ರಂಗಮಂದಿರದಲ್ಲಿ ಗುರುವಾರ ನಡೆದ ನಿರಂತರ ರಂಗ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನಿರಂತರದವರು ಅತ್ಯುತ್ತಮ ನಾಟಕಗಳನ್ನು ಪ್ರದರ್ಶಿಸುತ್ತಿದ್ದಾರೆ. ಕನ್ನಡ ರಂಗಭೂಮಿಗೆ ಡಾ.ನ. ರತ್ನ ಮಾತು ಕಲಿಸಿದರು. ಕನ್ನಡ ರಂಭೂಮಿಯಲ್ಲಿ ವಿಶೇಷವಾದ ಬೆಳೆವಣಿಗೆಗಳನ್ನು ನಾವು ನೋಡುತ್ತ ಇದ್ದೇವೆ ಎಂದು ಅವರು ಹೇಳಿದರು.21ನೇ ಶತಮಾನದ ಮೊದಲ ಭಾಗ ನಾವು ವಿಶೇಷವಾದ ಬೆಳವಣಿಗೆಗಳನ್ನು ನೋಡುತ್ತ ಇದ್ದೇವೆ. ಭವಿಷ್ಯ ರಂಗಭೂಮಿ ಈ ಮೂರು ವಿಶೇಷವಾದ ಘಟನೆಗಳನ್ನು ತನ್ನ ಅಂತರಕ್ಕೆ ತೆಗೆದುಕೊಂಡು ರಂಗಭೂಮಿಯಾಗಿ ಅದನ್ನು ಮಾರ್ಪಡಿಸಿ ಜನಗಳ ಹತ್ತಿರ ಹೋಗಬೇಕಿದೆ ಅಂತ ಕಾಣಿಸುತ್ತದೆ. ಈ ಶತಮಾನದ ಬಹಳ ದೊಡ್ಡ ಬೆಳವಣಿಗೆ ಭಾಷೆಗಳ ಸಾವು. ರಂಗಭೂಮಿಯ ಮೂಲ ಭಾಷೆ ನಾವು ಗಿರೀಶ್ ಕಾರ್ನಾಡರ ನಾಟಗಳಲ್ಲಿ ನೋಡುತ್ತಾ ಬೆಳೆದಿದ್ದೇವೆ ಎಂದು ಅವರು ತಿಳಿಸಿದರು.
ಶ್ರೀರಂಗ ನಾಟಕಗಳನ್ನು ನೋಡಿದೆವು. ಕಂಬಾರ ನಾಟಕಗಳನ್ನು ನೋಡಿದೆವು. ಬರೀ ಭಾಷೆ ಸಾಕಾಗಲ್ಲ ಅದು ಕ್ರಿಯೆ ಆಗಬೇಕು. ಬಹುಶಃ ಕಾರ್ನಾಡರಿಗೆ ಅದು ಸಿದ್ಧಿಸಿತ್ತು. ಅದು ಮಾತಾಗಿ, ಅದು ರಂಗಭೂಮಿಯಲ್ಲಿ ಕ್ರೀಯಾಗಬೇಕು ಎಂದರು.ಕರ್ನಾಟಕದಲ್ಲಿ 230 ಭಾಷೆಗಳಿವೆ, ಕನ್ನಡ ಒರತಾಗಿ ಉಳಿದ ಅನೇಕ ಭಾಷೆಗಳು ಸಾಯುತ್ತ ಇದ್ದಾವೆ. ಯಾವ ಭಾಷೆಯನ್ನು ತಿಳಿದುಕೊಂಡರೂ ಕೂಡ, ಯಾವ ಭಾಷೆಯ ಲೆಕ್ಕ ತೆಗೆದುಕೊಂಡಾಗ ಕಳೆದ 20 ವರ್ಷಗಳಲ್ಲಿ ಅವುಗಳ ಸಂಖ್ಯೆ ಕಡಿಮೆಯಾಗಿದೆ. ಅಖಿಲ ಭಾರತ ಮಟ್ಟದಲ್ಲಿ ಅದರ ಬೆಳವಣಿಗೆಯನ್ನು ತೋರಿಸುತ್ತ ಇರೋದು ಕೇವಲ ಶೇ. 3. ಆದರೆ ಹಿಂದಿ ಶೇ. 66 ಪರ್ಸೆಂಟ್ ವೇಗದಲ್ಲಿ ಬೆಳೆಯುತ್ತಿದೆ. ಶೇ. 66 ವೇಗದಲ್ಲಿ ಬೆಳೆಯುತ್ತಿರುವ ಭಾಷೆ ಶೇ. 3 ಇರುವಂತ ಕನ್ನಡ ಭಾಷೆಯನ್ನು ಹೊಸುಕಿ ಹಾಕುವ ತವಕದಲ್ಲಿದೆ. ಕೊರಗ, ಕೊಡವ ಭಾಷೆ ಎಲ್ಲವೂ ಸಾಯ್ತಾ ಇದ್ದಾವೆ ಎಂದರು.
ಎಲ್ಲವೂ ಏನಾಗ್ತಿದೆ ಅಂದ್ರೆ ತಮ್ಮ ಮಾತೃಭಾಷೆಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಬುಡುಕಟ್ಟು ಜನಗಳ - ಕಾಡು ಜನಗಳ ಭಾಷೆ ಕೂಡ ನಶಿಸಿಹೋಗಿದೆ. ಬರು ಬರುತ್ತಾ ಈಗ ಅವರು ಕೂಡ ಕನ್ನಡವನ್ನೇ ಮಾತನಾಡುತ್ತಿದ್ದಾರೆ. ತತ್ತ್ವಗಳು ಸಾಯುತ್ತಿವೆ. ಎಲ್ಲೂ ಚರ್ಚೆಗಳು ಇಲ್ಲ. ರಂಗ ನಿರ್ದೇಶಕರೊಬ್ಬರು, ಹಿಂದುಗಳು ದೇವಸ್ಥಾನಕ್ಕೆ ಹೋಗ್ತಾರೆ, ಮುಸ್ಲಿಮರು ಮಸೀದಿಗೆ ಹೋಗ್ತಾರೆ, ಕ್ರಿಶ್ಚಿಯನ್ನರು ಚರ್ಚೆಗೆ ಹೋಗ್ತಾರೆ, ಆದರೆ ರಂಗಭೂಮಿಗೆ ಬಂದಾಗ ಎಲ್ಲರೂ ತಮ್ಮ ಜಾತಿಯನ್ನು ಬಿಟ್ಟು ಒಂದಾಗಿ ಬರ್ತಾರೆ, ನಾಟಕ ಮಾಡ್ತಾರೆ, ಇಲ್ಲಿ ಜಾತಿ ಇಲ್ಲ ಎಂದು ಹೇಳಿದ್ದರು.ಆದರೆ ರಂಗಭೂಮಿಯಲ್ಲಿ ಒಂದು ವಿಮರ್ಶೆ ಬರೆಯುವುದಿಲ್ಲ. ಬರೆದಿದ್ದನ್ನು ಪ್ರಕಟಿಸುವುದಿಲ್ಲ. ಕೆಲವೇ ಕೆಲವು ಪತ್ರಿಗಳೆಲ್ಲೋ ಪ್ರಕಟಿಸಬಹುದು ಅನ್ನೋದನ್ನು ಬಿಟ್ಟರೆ, ಇಲ್ಲೂ ಕೂಡ ಹೆಚ್ಚು ಪ್ರಕಟ ಆಗಲ್ಲ. ನಾವು ಒಬ್ಬರನ್ನೊಬ್ಬರು ಎಲ್ಲೂ ಮುಟ್ಟಿಸಿಕೊಳ್ಳುವುದಿಲ್ಲ. ಒಬ್ಬ ಮಗ ತಾಯಿಯನ್ನು ತಾಯಿ ಮಗನನ್ನು ಮುಟ್ಟುವುದು ಕೂಡ ಅಪರೂಪ. ಇನ್ನು ಜಾತಿ ಜಾತಿಗಳ ನಡುವೆ ಮುಟ್ಟುವುದಕ್ಕೆಲ್ಲಿ ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಮತ್ತೋರ್ವ ಅತಿಥಿಯಾಗಿ ಪಾಲ್ಗೊಂಡಿದ್ದ ಸಿಡಬ್ಲ್ಯೂಸಿ ಕಾರ್ಯದರ್ಶಿ ಕವಿತಾ ರತ್ನ ಮಾತನಾಡಿ, ನಿರಂತರದವರ ರಂಗಭೂಮಿಯ ಕೊಡುಗೆ ಅಪಾರ. ಅವರು ವಿದ್ಯಾರ್ಥಿಗಳೊಟ್ಟಿಗೆ ಮಾಡುತ್ತಿರುವ ಕೆಲಸ, ಸಾಮಾಜಿಕ, ಶೈಕ್ಷಣಿಕ ಸೇವೆ ಅಪಾರ. ಅವರ ಮಳೆ ನೀರು ಕೊಯ್ಲು, ಸಾಕ್ಷರತಾ ಆಂದೋಲನ, ಅಸ್ಪೃಶ್ಯತಾ ನಿವಾರಣಾ ಸಪ್ತಹದಲ್ಲಿ ಮಾಡಿದ ಕೆಲಸವನ್ನು ನೋಡಿದರೆ ಅವರ ಬದ್ಧತೆ ಎದ್ದು ಕಾಣುತ್ತದೆ ಎಂದರುನಿರಂತರದ ಪ್ರಸಾದ್ ಕುಂದೂರ್ ಎಲ್ಲರನ್ನೂ ಗೌರವಿಸಿದರು. ರಂಗಾಯಣದ ಮಾಜಿ ನಿರ್ದೇಶಕ ಎಚ್. ಜನಾರ್ಧನ್, ಪತ್ರಕರ್ತ ಟಿ. ಗುರುರಾಜ್, ನಿರಂತರದ ಶ್ರೀನಿವಾಸ್ ಸುಗುಣ, ಪ್ರೊ. ಕಾಳಚೆನ್ನೆಗೌಡ, ಹಿರಿಯ ರಂಗಕರ್ಮಿ ರಾಮೇಶ್ವರ ವರ್ಮ ಮೊದಲಾದವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಬಳಿಕ ನಿರ್ದಿಗಂತ ಶ್ರೀರಂಗಪಟ್ಟಣ ತಂಡ ಅಭಿನಯದ ನಾಟಕ ತಿಂಡಿಗೆ ಬಂದ ತೊಂಡೆರಾಯ ಪ್ರದರ್ಶನವಾಯಿತು.