ಇಂದಿನಿಂದ 12ರವರೆಗೆ ಬೆಂಗಳೂರು-ಮೈಸೂರು ನಡುವಿನ ಹಲವು ರೈಲುಗಳು ರದ್ದು

KannadaprabhaNewsNetwork |  
Published : Mar 05, 2024, 01:32 AM ISTUpdated : Mar 05, 2024, 10:48 AM IST
ಟ್ರೈನ್ | Kannada Prabha

ಸಾರಾಂಶ

ಕೆಂಗೇರಿ-ಹೆಜ್ಜಾಲ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ ನಂ.15ರ ಬಳಿಯ ಕಾಮಗಾರಿ ಹಿನ್ನೆಲೆಯಲ್ಲಿ, ಬೆಂಗಳೂರು-ಮೈಸೂರು ನಡುವೆ ಪ್ರಯಾಣಿಸುವ ಕೆಲವು ರೈಲುಗಳ ಸಂಚಾರವನ್ನು ಮಾರ್ಚ್ 6, 7, 8, 12 ಮತ್ತು 13ರ ತನಕ ರದ್ದುಗೊಳಿಸಲಾಗಿದೆ. ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೆಂಗೇರಿ-ಹೆಜ್ಜಾಲ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ ನಂ.15ರ ಬಳಿಯ ಕಾಮಗಾರಿ ಹಿನ್ನೆಲೆಯಲ್ಲಿ, ಬೆಂಗಳೂರು-ಮೈಸೂರು ನಡುವೆ ಪ್ರಯಾಣಿಸುವ ಕೆಲವು ರೈಲುಗಳ ಸಂಚಾರವನ್ನು ಮಾರ್ಚ್ 6, 7, 8, 12 ಮತ್ತು 13ರ ತನಕ ರದ್ದುಗೊಳಿಸಲಾಗಿದೆ. ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.

ರದ್ದಾದ ರೈಲುಗಳು: ಡಾ। ಎಂಜಿಆರ್‌ ಚೆನ್ನೈ ಸೆಂಟ್ರಲ್- ಮೈಸೂರು ಪ್ರತಿದಿನದ ಎಕ್ಸ್‌ಪ್ರೆಸ್ (16021) ಮಾ.6, 7ರಂದು ರದ್ದುಗೊಳಿಸಲಾಗಿದೆ. ಮೈಸೂರು-ಕೆಎಸ್‌ಆರ್‌ ಬೆಂಗಳೂರು ಪ್ರತಿದಿನದ ಎಕ್ಸ್‌ಪ್ರೆಸ್ (20623) ಮಾ.7, 8ರಂದು ರದ್ದು, ಕೆಎಸ್‌ಆರ್‌ ಬೆಂಗಳೂರು-ಮೈಸೂರು ಪ್ರತಿದಿನದ ಎಕ್ಸ್‌ಪ್ರೆಸ್ (20624)

 ಮಾ.7, 8ರಂದು, ಮೈಸೂರು- ಡಾ। ಎಂಜಿಆರ್‌ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ (16022) ಮಾ.7, 8ರಂದು, ಅರಸೀಕೆರೆ-ಮೈಸೂರು ಪ್ರತಿದಿನದ ಎಕ್ಸ್‌ಪ್ರೆಸ್ ರೈಲು (06267) ಮಾ.7, 12ರಂದು ಹಾಗೂ ಮೈಸೂರು- ಎಸ್‌ಎಂವಿಟಿ ಬೆಂಗಳೂರು ಪ್ರತಿದಿನದ ಎಕ್ಸ್‌ಪ್ರೆಸ್ (06269) ಮಾ.7, 12ರಂದು ರದ್ದಾಗಿದೆ.

ಮೈಸೂರು-ಕೆಎಸ್‌ಆರ್‌ ಬೆಂಗಳೂರು ಮೆಮು (06560) ಮಾ.7, 12ರಂದು, ಎಸ್‌ಎಂವಿಟಿ ಬೆಂಗಳೂರು- ಮೈಸೂರು ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ (06270) ಮಾ.7, 12ರಂದು, ಮೈಸೂರು-ಅರಸೀಕೆರೆ ಪ್ರತಿ ದಿನದ ವಿಶೇಷ ಎಕ್ಸ್‌ಪ್ರೆಸ್ ರೈಲು (06268) 

ಮಾ.8, 13ರಂದು, ಕೆಎಸ್‌ಆರ್‌ಬೆಂಗಳೂರು-ಮೈಸೂರು ಮೆಮು ವಿಶೇಷ ರೈಲು (06559) ಮಾ.8, 13ರಂದು ಹಾಗೂ ಕೆಎಸ್‌ಆರ್‌ ಬೆಂಗಳೂರು - ಚನ್ನಪಟ್ಟಣ ಮೆಮು ಸ್ಪೆಷಲ್ (01763) ಮಾ.8, 13ರಂದು ರದ್ದು ಮಾಡಲಾಗಿದೆ.

ಭಾಗಶಃ ರದ್ದಾದ ರೈಲುಗಳು

ಮೈಸೂರು-ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷ ರೈಲು (06526) ಮಾ.7, 12ರಂದು ಚನ್ನಪಟ್ಟಣ ಮತ್ತು ಕೆಎಸ್‌ಆರ್‌ ಬೆಂಗಳೂರು ನಡುವೆ ಭಾಗಶಃ ರದ್ದು ಮಾಡಲಾಗಿದೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ