ಕಾರಟಗಿಯ ಈಳಿಗನೂರಿನಲ್ಲಿ ಮಾರುತೇಶ್ವರ ರಥೋತ್ಸವ

KannadaprabhaNewsNetwork |  
Published : Dec 19, 2023, 01:45 AM IST
ಕಾರಟಗಿ ತಾಲೂಕಿನ ಈಳಿಗನೂರು ಗ್ರಾಮದಲ್ಲಿ ಸೋಮವಾರ ಸಂಜೆ ಮಾರುತೇಶ್ವರ ಮಹಾರಥೋತ್ಸವ ನಡೆಯಿತು. | Kannada Prabha

ಸಾರಾಂಶ

ದೇವಸ್ಥಾನ ಮುಂದಿದ್ದ ಅಲಂಕೃತ ಬೃಹತ್ ರಥಕ್ಕೆ ನಿಗದಿತ ಮುಹೂರ್ತಕ್ಕೆ ಅರ್ಚಕರು ಪೂಜೆ ಸಲ್ಲಿಸಿ ಉತ್ಸವ ಮೂರ್ತಿ ಸ್ಥಾಪಿಸಿದ ಬಳಿಕ ನೆರೆದಿದ್ದ ಸಾವಿರಾರು ಭಕ್ತರ ಜಯಘೋಷದೊಂದಿಗೆ ರಥ ಎಳೆಯಲು ಪ್ರಾರಂಭಿಸಿದರು. ರಥ ಗ್ರಾಮದ ಬನ್ನಿಕಟ್ಟೆವರೆಗೆ ತೆರಳಿ ದೇವಸ್ಥಾನ ತಲುಪಿತು.

ಕಾರಟಗಿ: ತಾಲೂಕಿನ ಈಳಿಗನೂರು ಗ್ರಾಮದ ಆರಾಧ್ಯದೈವ ಮಾರುತೇಶ್ವರ ಸ್ವಾಮಿಯ ೧೧ನೇ ವರ್ಷದ ಮಹಾರಥೋತ್ಸವ ಸೋಮವಾರ ಸಂಜೆ ಸಾವಿರಾರು ಭಕ್ತರ ನಡುವೆ ಅದ್ಧೂರಿಯಾಗಿ ಜರುಗಿತು.ದೇವಸ್ಥಾನ ಮುಂದಿದ್ದ ಅಲಂಕೃತ ಬೃಹತ್ ರಥಕ್ಕೆ ನಿಗದಿತ ಮುಹೂರ್ತಕ್ಕೆ ಅರ್ಚಕರು ಪೂಜೆ ಸಲ್ಲಿಸಿ ಉತ್ಸವ ಮೂರ್ತಿ ಸ್ಥಾಪಿಸಿದ ಬಳಿಕ ನೆರೆದಿದ್ದ ಸಾವಿರಾರು ಭಕ್ತರ ಜಯಘೋಷದೊಂದಿಗೆ ರಥ ಎಳೆಯಲು ಪ್ರಾರಂಭಿಸಿದರು. ರಥ ಗ್ರಾಮದ ಬನ್ನಿಕಟ್ಟೆವರೆಗೆ ತೆರಳಿ ದೇವಸ್ಥಾನ ತಲುಪಿತು.ಭಕ್ತರು ತೇರಿಗೆ ಉತ್ತತ್ತಿ, ಹಣ್ಣು ಸಮರ್ಪಿಸಿ ಮಾರುತೇಶ್ವರ ಕೃಪೆಗೆ ಪಾತ್ರರಾದರು. ಸಿದ್ದಾಪುರ, ಯರಡೋಣಾ, ನಂದಿಹಳ್ಳಿ, ಕಕ್ಕರಗೋಳ, ಬೆನ್ನೂರ, ಉಳೇನೂರು, ಸಿದ್ದಾಪುರ ಸೇರಿದಂತೆ ಇನ್ನು ಹಲವು ಗ್ರಾಮಗಳಿಂದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.ಇದಕ್ಕೂ ಮುನ್ನ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ ಹೋಮ, ಹವನ, ಮಾರುತೇಶ್ವರ ಮೂರ್ತಿಗೆ ಅಲಂಕಾರ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ಜರುಗಿದವು. ಬೆಳಿಗ್ಗೆ ೧೦ ಗಂಟೆಗ ಮಾರುತೇಶ್ವರ ಉಚ್ಚಾಯ ಎಳೆಯಲಾಯಿತು.ಕಾರ್ತಿಕೊತ್ಸವ: ಭಾನುವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಮಾರುತೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಗ್ರಾಮದಲ್ಲಿ ಹರಕೆ ಹೊತ್ತ ಭಕ್ರತರಿಂದ ದೀರ್ಘದಂಡ ನಮಸ್ಕಾರ, ಗಂಡಾರುತಿ ದೀಪ ಸೇರಿದಂತೆ ವಿವಿಧ ಕಾರ್ಯಕ್ರಮಗಳೊಂದಿಗೆ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಕಾರ್ತಿಕ ದೀಪೋತ್ಸವ ನಡೆಯಿತು. ಮಹಿಳೆಯರು, ಮಕ್ಕಳು, ಯುವಕರು, ದೀಪ ಹಚ್ಚಿ ಹರಕೆ ಸಮರ್ಪಿಸಿದರು. ನಂತರ ಗಂಗೆಸ್ಥಳಕ್ಕೆ ಹೋಗಿಬರುವ ಕಾರ್ಯಕ್ರಮ ಜರುಗಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸೋಮವಾರ ಸಂಜೆ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಗ್ರಾಮಸ್ಥರು ಮತ್ತು ದೇವಸ್ಥಾನ ಸಮಿತಿಯಿಂದ ಸಚಿವರಿಗೆ ಸನ್ಮಾನಿಸಲಾಯಿತು. ಈ ವೇಳೆ ಗ್ರಾಮದ ಹಿರಿಯ ಮುಖಂಡರು, ಯುವಕರು, ಮಹಿಳೆಯರು, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ